ಉತ್ತರ ಪ್ರದೇಶ: ಇಲ್ಲಿನ ಬಿಜ್ನೋಯ್ ಎಂಬಲ್ಲಿ ರೈತ ಮಹಾಪಂಚಾಯತ್ ನಡೆಯುತ್ತಿದ್ದು, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಭಾಗಿಯಾಗಿದ್ದಾರೆ.
ಈ ವೇಳೆ ಮಾತನಾಡಿದ ಅವರು, "ನಿಮ್ಮ ಆದಾಯ ದ್ವಿಗುಣಗೊಂಡಿದೆಯೇ? ಅವರು 2017 ರಿಂದ ಕಬ್ಬಿನ ಬೆಲೆಯನ್ನು ಹೆಚ್ಚಿಸಿದ್ದಾರೆಯೇ? ಉತ್ತರ ಪ್ರದೇಶದ ಕಬ್ಬು ಬೆಳೆಗಾರರ ಬಾಕಿ ಮೊತ್ತ 10,000 ಕೋಟಿ. ದೇಶಾದ್ಯಂತ ಅಂದಾಜು 15,000 ಕೋಟಿ ಬಾಕಿ ಹಣ ಪಾವತಿ ಮಾಡಬೇಕಿದೆ. ನಿಮ್ಮ ಬಾಕಿ ಮೊತ್ತವನ್ನು ನೀಡದ ಪ್ರಧಾನಿ ಅವರಾಗಿದ್ದಾರೆ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನು ಓದಿ: ಪಂಚಮಸಾಲಿ ಸಮಾವೇಶಕ್ಕೆ ಅಗತ್ಯ ಭದ್ರತೆ: ಬಸವರಾಜ್ ಬೊಮ್ಮಾಯಿ
"ಜನರು ಮೋದಿಯನ್ನು ಎರಡು ಬಾರಿ ಏಕೆ ಆರಿಸಿಕೊಂಡರು ಎಂದು ಕೆಲವೊಮ್ಮೆ ನಾನು ಯೋಚಿಸುತ್ತೇನೆ. ಮೊದಲನೇ ಚುನಾವಣೆಯಲ್ಲಿ ಅನೇಕ ವಿಷಯಗಳ ಬಗ್ಗೆ ಹೇಳಿದರು. ಎರಡನೇ ಚುನಾಚಣೆಯಲ್ಲೂ ಅದೇ ರೀತಿ ಕೃಷಿ, ರೈತ, ನಿರುದ್ಯೋಗ ಸಮಸ್ಯೆ ಬಗ್ಗೆ ಮಾತನಾಡಿದರು. ಆದರೆ ಏನಾಯಿತು? ಏನೂ ಇಲ್ಲ" ಎಂದು ಹೇಳಿದರು.