ETV Bharat / bharat

ಪರೀಕ್ಷೆಯ ಎಲ್ಲ ಪ್ರಶ್ನೆಗಳಿಗೆ 'ಥಾಲಾ' ಎಂದು ಉತ್ತರ ಬರೆದ ಧೋನಿ ಅಭಿಮಾನಿ: ವಿದ್ಯಾರ್ಥಿ ಅಮಾನತು! - ದೆಹಲಿ ಧೋನಿ ಅಭಿಮಾನಿ

ಎಮ್​ ಎಸ್​ ಧೋನಿ ಅವರ ಅಭಿಮಾನಿಯೊಬ್ಬ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿ ಅಮಾನತು ಗೊಂಡಿದ್ದಾನೆ.

ವಿದ್ಯಾರ್ಥಿ ಅಮಾನತು
ವಿದ್ಯಾರ್ಥಿ ಅಮಾನತು
author img

By ETV Bharat Karnataka Team

Published : Dec 7, 2023, 7:19 AM IST

ನವದೆಹಲಿ: ಇಲ್ಲಿಯ ಶಾಲೆಯೊಂದರ ವಿದ್ಯಾರ್ಥಿಯೊಬ್ಬ ಗಣಿತ ಪರೀಕ್ಷೆಯಲ್ಲಿ ಕೇಳಲಾದ ಎಲ್ಲ ಪ್ರಶ್ನೆಗಳಿಗೆ 'ಥಾಲಾ' ಎಂದು ಉತ್ತರಿಸಿದ್ದಕ್ಕಾಗಿ ಶಾಲೆಯಿಂದ ಆತನನ್ನು ಅಮಾನತು ಮಾಡಲಾಗಿದೆ.

ಕೆಲ ದಿನಗಳ ಹಿಂದೆ ವಿದ್ಯಾರ್ಥಿ ಗಜೋಧರ್ ಗಣಿತ ಪರೀಕ್ಷೆಗೆ ಹಾಜರಾಗಿದ್ದ. ಈ ವೇಳೆ ಎಲ್ಲ ಪ್ರಶ್ನೆಗಳಿಗೆ ತನ್ನ ಉತ್ತರ ಪತ್ರಿಕೆಯಲ್ಲಿ 'ಥಾಲಾ' ಎಂದು ಬರೆದಿದ್ದ. ತನ್ನ "ಐಡಲ್​" ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಗೌರವ ಸಲ್ಲಿಸಲು ಉತ್ತರ ಪತ್ರಿಕೆಯಲ್ಲಿ ಹೀಗೆ ಬರೆದಿರುವುದಾಗಿ ವಿದ್ಯಾರ್ಥಿ ಹೇಳಿರುವುದಾಗಿ ಶಾಲೆಯ ಮೂಲಗಳು ತಿಳಿಸಿವೆ.

ಶಾಲೆಯ ಅಧಿಕಾರಿಯೊಬ್ಬರು ಈ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಯಾವುದೇ ಶ್ರೇಷ್ಠ ವ್ಯಕ್ತಿಯ ಅಭಿಮಾನಿಯಾಗುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, "ಗಜೋಧರ್ ತನ್ನ ಪರೀಕ್ಷೆಯನ್ನು ಗಂಭೀರವಾಗಿ ತೆಗೆದುಕೊಳ್ಳದೇ ಈ ರೀತಿ ಮಾಡಿದ್ದು, ಕೆಟ್ಟ ನಡವಳಿಕೆಯಾಗುತ್ತದೆ. ಅಲ್ಲದೇ ಈ ಪರೀಕ್ಷೆಯಲ್ಲಿ ಆತ ಅನುತ್ತೀರ್ಣನಾಗಿದ್ದಾನೆ. ಹೀಗಾಗಿ ಆ ವಿದ್ಯಾರ್ಥಿಯನ್ನು ಸದ್ಯ ಅಮಾನತು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಏನಿದು ಥಾಲಾ?: ಥಾಲಾ ಎಂಬುದು ತಮಿಳು ಪದವಾಗಿದ್ದು, ಇದರ ಅರ್ಥ 'ನಾಯಕ' ಎಂದಾಗುತ್ತದೆ. ಇದನ್ನು ತಮಿಳಿಗರು ತಮ್ಮ ನೆಚ್ಚಿನ ಅಥವಾ ಗೌರವಿಸುವ ವ್ಯಕ್ತಿಗೆ ಕರೆಯುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ನ ಪರ ಆಡುವ ಧೋನಿ ಶ್ರೇಷ್ಠ ಆಟಗಾರ ಮತ್ತು ನಾಯಕನಾಗಿರುವ ಕಾರಣ ಈ ಹೆಸರನ್ನು ಪಡೆದಿದ್ದಾರೆ.

ಧೋನಿ ಕಾಣಲು 1,436 ಕಿ.ಮೀ ನಡೆದು ಬಂದ ಅಭಿಮಾನಿ: ಈ ಹಿಂದೆ ಎಮ್​ ಎಸ್​ ಧೋನಿ ಅವರ ಅಭಿಮಾನಿಯೊಬ್ಬ ಅವರನ್ನು ಕಾಣಲು ಬರೋಬ್ಬರಿ 1,436 ಕಿ.ಮೀ. ದೂರವನ್ನು ನಡೆದುಕೊಂಡೇ ಕ್ರಮಿಸಿ ರಾಂಚಿಗೆ ತೆರಳಿದ್ದ. ಇದನ್ನು ಕಂಡು ಸ್ವತಃ ಧೋನಿಯೇ ನಿಬ್ಬೆರಗಾಗಿದ್ದರು.

ಹರಿಯಾಣದ ನಿವಾಸಿ ಅಜಯ್​ ಗಿಲ್​ ಎಂಬುವವರು ಮಹೇಂದ್ರ ಸಿಂಗ್ ಧೋನಿಯ ಕಟ್ಟಾಭಿಮಾನಿ. ಧೋನಿ ಅವರನ್ನು ನೋಡಲೇಬೇಕು ಎಂಬ ಕಾರಣಕ್ಕಾಗಿ ಹರಿಯಾಣದಿಂದ ರಾಂಚಿಗೆ ನಡೆದುಕೊಂಡೇ ಹೋಗಿದ್ದರು. ಫಾರ್ಮ್​ಹೌಸ್​ಗೆ ಬಂದ ಅಭಿಮಾನಿಯನ್ನು ಧೋನಿ ಆತ್ಮೀಯವಾಗಿ ಬರಮಾಡಿಕೊಂಡು ಪ್ರೀತಿಯಿಂದ ಆಲಂಗಿಸಿಕೊಂಡಿದ್ದರು. ಅಲ್ಲದೇ, ಅಭಿಮಾನಿ ಗಿಲ್​ ಜೊತೆ ಫೋಟೋಗೆ ಫೋಸ್​ ನೀಡಿದ್ದರು.

ಅಜಯ್​ ಗಿಲ್​ ಹರಿಯಾಣಕ್ಕೆ ವಾಪಸ್​ ಆಗಲು ಧೋನಿಯೇ ವಿಮಾನದ ಟಿಕೆಟ್​ ಬುಕ್ ಮಾಡಿಸಿಕೊಟ್ಟಿದ್ದರು. ಅಲ್ಲದೇ, ದಿನದ ಮಟ್ಟಿಗೆ ಉಳಿದುಕೊಳ್ಳಲು ತನ್ನ ಫಾರ್ಮ್​ಹೌಸ್‌ನಲ್ಲೇ ವ್ಯವಸ್ಥೆ ಮಾಡಿಕೊಟ್ಟಿದ್ದರು.

ಧೋನಿ ಟ್ಯಾಟೂ: ಕೊಪ್ಪಳದ ಅಭಿಮಾನಿಯೊಬ್ಬ ಧೋನಿ ಅವರ ಹುಟ್ಟು ಹಬ್ಬದಂದು ಟ್ಯಾಟೂ ಹಾಕಿಸಿಕೊಂಡು ತಮ್ಮ ಅಭಿಮಾನ ವ್ಯಕ್ತಪಡಿಸಿದ್ದರು. ಮಾರುತಿ ಎಂಬ ಯುವಕ ತನ್ನ ದೇಹದ ಮೇಲೆ ಮಹೇಂದ್ರಸಿಂಗ್ ಧೋನಿ ಟ್ಯಾಟೂ ಹಾಕಿಸಿಕೊಂಡಿದ್ದ.

ಇದನ್ನೂ ಓದಿ: ನನ್ನಿಂದ ನಡೆಯಲು ಸಾಧ್ಯವಾಗುವಷ್ಟು ಕಾಲ ಐಪಿಎಲ್​ ಆಡುತ್ತೇನೆ: ಮ್ಯಾಕ್ಸ್‌ವೆಲ್ ಪ್ರತಿಜ್ಞೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.