ಚೆನ್ನೈ : ಕೊರೊನಾ ವೈರಸ್ ಸಮಯದಲ್ಲಿ ತಮ್ಮ ಜೀವನ ಮುಡುಪಾಗಿಟ್ಟು ಇತರರ ಪ್ರಾಣ ಉಳಿಸಿರುವ ವೈದ್ಯರು ಹಾಗೂ ದಾದಿಯರು ನಿಜವಾದ ಹೀರೋಗಳು. ಅವರ ಕಠಿಣ ಪರಿಶ್ರಮದಿಂದ ನಾವು ಸುರಕ್ಷಿತ ಹಾಗೂ ಆರೋಗ್ಯವಾಗಿದ್ದೇವೆ ಎಂದು ಎಂ ಎಸ್ ಧೋನಿ ತಿಳಿಸಿದ್ದಾರೆ.
ವೈದ್ಯಕೀಯ ಭ್ರಾತೃತ್ವ ಗುರುತಿಸುವ ಉದ್ದೇಶದಿಂದ ಶುಕ್ರವಾರ ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ದುಬೈನಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಿ ಮಾತನಾಡಿದ ಧೋನಿ, ಕೊರೊನಾ ವೈರಸ್ನಂತಹ ಸಾಂಕ್ರಾಮಿಕ ರೋಗದ ಸಮಯದಲ್ಲಿ ಅವರ ಕಠಿಣ ಪರಿಶ್ರಮದಿಂದ ನಾವು ಸುರಕ್ಷಿತವಾಗಿದ್ದೇವೆ ಎಂದರು.
ನೀವು ನನ್ನನ್ನು ಥಾಲಾ ಎಂದು ಕರೆಯುವಾಗಲೆಲ್ಲಾ ನಾನು ನಿಜವಾದ ಹೀರೋ ಎಂದು ಅನಿಸುತ್ತದೆ. ಆದರೆ, ನಮ್ಮ ನಿಜವಾದ ಹೀರೋಗಳು ವೈದ್ಯರು ಮತ್ತು ದಾದಿಯರು. ಪ್ರತಿದಿನ ಅವರು ನೂರಾರು ಜೀವಗಳನ್ನ ಉಳಿಸುತ್ತಾರೆ. ಅವರ ತ್ಯಾಗ ಮತ್ತು ಶ್ರಮವೇ ನಮ್ಮನ್ನು ಸುರಕ್ಷಿತವಾಗಿ ಮತ್ತು ಆರೋಗ್ಯವಾಗಿರಿಸಿದೆ.
ಇದನ್ನೂ ಓದಿರಿ: ಬೆಕ್ಕಿನ ಮರಿ ಎಂದು ರಕ್ಷಿಸಲು ಹೋಗಿ ಚಿರತೆ ಎತ್ತಿಕೊಂಡ YSRTP ಮುಖಂಡ.. ಮುಂದೇನಾಯ್ತು!?
ಸಾಂಕ್ರಾಮಿಕ ಸಮಯದಲ್ಲಿ ವೈದ್ಯಕೀಯ ಭ್ರಾತೃತ್ವದ ಕೆಲಸ ಗುರುತಿಸಲು ಕಾವೇರಿ ಗ್ರೂಪ್ ಆಫ್ ಹಾಸ್ಪಿಟಲ್ನಿಂದ ವಿಡಿಯೋ ಅಭಿಯಾನ ರಿಲೀಸ್ ಮಾಡಲಾಗಿದೆ. ಇದರಲ್ಲಿ ಅನೇಕ ವೈದ್ಯರು, ದಾದಿಯರು ಮತ್ತು ಆರೋಗ್ಯ ಸಿಬ್ಬಂದಿ 24 ಗಂಟೆ ಕೆಲಸ ಮಾಡ್ತಿದ್ದಾರೆ. ಇದರಲ್ಲಿ ಅನೇಕರು ಕೋವಿಡ್ನಿಂದಾಗಿ ತಮ್ಮ ಪ್ರಾಣ ಸಹ ಕಳೆದುಕೊಂಡಿದ್ದಾರೆ. ಇದಕ್ಕೆ ಧೋನಿ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ಸದ್ಯ ಐಪಿಎಲ್ ಆಡಲು ಅರಬ್ ನಾಡಿನಲ್ಲಿ ವಾಸ್ತವ್ಯ ಹೊಡಿದ್ದಾರೆ. ಇಂದು ರಾತ್ರಿ ಕೋಲ್ಕತ್ತಾ ವಿರುದ್ಧ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾಗಿಯಾಗಲಿದ್ದಾರೆ.