ETV Bharat / bharat

ರಕ್ಷಣಾ ಸಚಿವಾಲಯದಿಂದ NCC ಪರಿಶೀಲನಾ ಸಮಿತಿ ರಚನೆ: ಮಾಹಿ, ಮಹೀಂದ್ರಾ ಹೆಸರು ಸೇರ್ಪಡೆ

ನ್ಯಾಷನಲ್ ಕೆಡೆಟ್ ಕಾರ್ಪ್ಸ್(ಎನ್​ಸಿಸಿ)ನ ಸಮಗ್ರ ಪರಿಶೀಲನೆಗಾಗಿ ರಕ್ಷಣಾ ಸಚಿವಾಲಯ ರಚಿಸಿದ 15 ಸದಸ್ಯರ ಸಮಿತಿಯಲ್ಲಿ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಮತ್ತು ಉದ್ಯಮಿ ಆನಂದ್ ಮಹೀಂದ್ರಾ ಹೆಸರು ಸಹ ಸೇರಿದೆ.

NCC
ಮಾಹಿ, ಮಹೀಂದ್ರಾ
author img

By

Published : Sep 17, 2021, 8:48 AM IST

ನವದೆಹಲಿ: ನ್ಯಾಷನಲ್ ಕೆಡೆಟ್ ಕಾರ್ಪ್ಸ್(ಎನ್​ಸಿಸಿ)ನ ಸಮಗ್ರ ಪರಿಶೀಲನೆಗಾಗಿ ರಕ್ಷಣಾ ಸಚಿವಾಲಯ ರಚಿಸಿದ 15 ಸದಸ್ಯರ ಸಮಿತಿಯಲ್ಲಿ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಮತ್ತು ಉದ್ಯಮಿ ಆನಂದ್ ಮಹೀಂದ್ರಾ ಅವರ ಹೆಸರು ಸೇರಿದೆ.

ಮಾಜಿ ಶಾಸಕರಾದ ಬೈಜಯಂತ್ ಪಾಂಡ ನೇತೃತ್ವದ ಸಮಿತಿಯು ಕರ್ನಲ್ (ನಿವೃತ್ತ) ರಾಜ್ಯವರ್ಧನ್ ಸಿಂಗ್ ರಾಥೋರ್, ರಾಜ್ಯಸಭಾ ಸದಸ್ಯ ವಿನಯ್ ಸಹಸ್ರಬುದ್ಧೆ, ಹಣಕಾಸು ಸಚಿವಾಲಯದ ಪ್ರಧಾನ ಆರ್ಥಿಕ ಸಲಹೆಗಾರ ಸಂಜೀವ್ ಸನ್ಯಾಲ್ ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ ಉಪ ಕುಲಪತಿ ನಜ್ಮಾ ಅಖ್ತರ್ ಅವ​ರನ್ನು ಒಳಗೊಂಡಿದೆ.

ಎಸ್‌ಎನ್‌ಡಿಟಿ ಮಹಿಳಾ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ವಸುಧಾ ಕಾಮತ್, ಭಾರತೀಯ ಶಿಕ್ಷಣ ಮಂಡಲದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಮುಕುಲ್ ಕನಿತ್ಕರ್, ಮೇಜರ್ ಜನರಲ್ (ನಿವೃತ್ತ) ಅಲೋಕ್ ರಾಜ್, ಎಸ್‌ಐಎಸ್ ಇಂಡಿಯಾ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ರಿತುರಾಜ್ ಸಿನ್ಹಾ ಮತ್ತು ಡೇಟಾಬುಕ್ ಸಿಇಒ ಆನಂದ್ ಶಾ ಸಹ ಸಮಿತಿಯ ಸದಸ್ಯರಾಗಿದ್ದಾರೆ.

ಭಾರತದ ಟಿ-20 ಕ್ರಿಕೆಟ್ ವಿಶ್ವಕಪ್ ತಂಡಕ್ಕೆ ಮಾರ್ಗದರ್ಶಕರಾಗಿ ನೇಮಕಗೊಂಡ ಕೆಲವು ದಿನಗಳ ನಂತರ ಧೋನಿ ಅವರನ್ನು ಉನ್ನತ ಮಟ್ಟದ ಸಮಿತಿಯಲ್ಲಿ ಸೇರಿಸಲಾಗಿದೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಹೆಚ್ಚು ಪ್ರಸ್ತುತವಾಗಿಸಲು ಎನ್​ಸಿಸಿಯ ಸಮಗ್ರ ಪರಿಶೀಲನೆಗಾಗಿ ಸಮಿತಿ ರಚಿಸಲಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿದೆ.

ಯುವ ನಾಗರಿಕರಲ್ಲಿ ಸ್ವಭಾವ, ಶಿಸ್ತು, ಜಾತ್ಯತೀತ ದೃಷ್ಟಿಕೋನ ಮತ್ತು ನಿಸ್ವಾರ್ಥ ಸೇವೆಯ ಆದರ್ಶಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿರುವ NCCಯು ಸಮವಸ್ತ್ರದಲ್ಲಿರುವ ಅತಿದೊಡ್ಡ ಸಂಸ್ಥೆಯಾಗಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಇದು ಜೀವನದ ಎಲ್ಲ ಹಂತಗಳಲ್ಲಿ ನಾಯಕತ್ವ ಗುಣಗಳನ್ನು ಹೊಂದಿರುವ ಸಂಘಟಿತ, ತರಬೇತಿ ಪಡೆದ ಮತ್ತು ಪ್ರೇರೇಪಿತ ಯುವ ಸಮೂಹವನ್ನು ರಚಿಸುವ ಗುರಿಯನ್ನು ಹೊಂದಿದೆ.

1948 ರಲ್ಲಿ ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ ಕಾಯಿದೆಯಡಿಯಲ್ಲಿ NCC ಅನ್ನು ರಚಿಸಲಾಯಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.