ETV Bharat / bharat

ಧೀರಾ ರೊಬೋಟ್ಸ್​.. ಇನ್ನು ನಿಮ್ಮನೆಗೆ ಫುಡ್​ ಡೆಲಿವರಿ ಮಾಡ್ತವೆ ! - ಆಹಾರ ಪೂರೈಕೆ ರೊಬೋಟ್​

ದೇಶದಲ್ಲಿಯೇ ಪ್ರಥಮ ಬಾರಿಗೆ ಧೀರಾ ರೊಬೋಟ್​​ಗಳು ಹೈದರಾಬಾದಿನಲ್ಲಿ ಫುಡ್ ಡೆಲಿವರಿ ಮಾಡಲಿವೆ. ಅಂದರೆ ಇನ್ನು ಮುಂದೆ ಸ್ವಿಗ್ಗಿ, ಜೊಮ್ಯಾಟೊ ಹುಡುಗರು ನಿಮ್ಮ ಗೇಟೆಡ್ ಕಮ್ಯೂನಿಟಿಯೊಳಗಡೆ ಬರುವ ಅಗತ್ಯವಿರಲಾರದು. ಅಪಾರ್ಟಮೆಂಟ್ ಅಥವಾ ಗೇಟೆಡ್ ಕಮ್ಯೂನಿಟಿಯ ಗೇಟಿನಲ್ಲೇ ಡೆಲಿವರಿ ಬಾಯ್​ಗಳು ಫುಡ್ ಪ್ಯಾಕೆಟ್​ಗಳನ್ನು ಈ ರೊಬೋಟ್​ಗಳಿಗೆ ಕೊಟ್ಟರಾಯಿತು. ಇವು ನೇರವಾಗಿ ಅದು ಯಾರ ಮನೆಗೆ ತಲುಪಬೇಕೋ ಅಲ್ಲಿಗೆ ತಲುಪಿಸುತ್ತವೆ.

Dheera Robots.. The Food Delivery Robots

author img

By

Published : Jun 24, 2022, 1:33 PM IST

ಹೈದರಾಬಾದ್​: ಹೊಸ ಫುಡ್ ಡೆಲಿವರಿ ರೊಬೋಟ್​ಗಳು ಶೀಘ್ರ ಹೈದರಾಬಾದಿಗೆ ಬರುತ್ತಿವೆ. ಗೇಟೆಡ್ ಕಮ್ಯೂನಿಟಿಗಳಲ್ಲಿ ಹಾಗೂ ಅಪಾರ್ಟಮೆಂಟುಗಳಲ್ಲಿ ಈ ರೊಬೋಟ್​​ಗಳು ಕೆಲಸ ಮಾಡಲಿವೆ. ಡೆಲಿವರಿ ಬಾಯ್​ಗಳ ಬದಲಾಗಿ ರೊಬೋಟ್​ಗಳೇ ನೇರವಾಗಿ ನಿಮ್ಮ ಮನೆ ಬಾಗಿಲಿಗೆ ಆಹಾರದ ಪೊಟ್ಟಣವನ್ನು ತರಲಿವೆ. ನೂತನ ತಂತ್ರಜ್ಞಾನದಿಂದ ತಯಾರಾಗಿರುವ ಈ ಮುದ್ದಾದ ರೊಬೋಟ್​ಗಳಿಗೆ ಧೀರಾ ಎಂದು ಹೆಸರಿಡಲಾಗಿದೆ.

ದೇಶದಲ್ಲಿಯೇ ಪ್ರಥಮ ಬಾರಿಗೆ ಧೀರಾ ರೊಬೋಟ್​​ಗಳು ಹೈದರಾಬಾದಿನಲ್ಲಿ ಫುಡ್ ಡೆಲಿವರಿ ಮಾಡಲಿವೆ. ಅಂದರೆ ಇನ್ನು ಮುಂದೆ ಸ್ವಿಗ್ಗಿ, ಜೊಮ್ಯಾಟೊ ಹುಡುಗರು ನಿಮ್ಮ ಗೇಟೆಡ್ ಕಮ್ಯೂನಿಟಿಯೊಳಗಡೆ ಬರುವ ಅಗತ್ಯವಿರಲಾರದು. ಅಪಾರ್ಟಮೆಂಟ್ ಅಥವಾ ಗೇಟೆಡ್ ಕಮ್ಯೂನಿಟಿಯ ಗೇಟಿನಲ್ಲೇ ಡೆಲಿವರಿ ಬಾಯ್​ಗಳು ಫುಡ್ ಪ್ಯಾಕೆಟ್​ಗಳನ್ನು ಈ ರೊಬೋಟ್​ಗಳಿಗೆ ಕೊಟ್ಟರಾಯಿತು.

ಇವು ನೇರವಾಗಿ ಅದು ಯಾರ ಮನೆಗೆ ತಲುಪಬೇಕೋ ಅಲ್ಲಿಗೆ ತಲುಪಿಸುತ್ತವೆ. ಹೈದರಾಬಾದ್ ಮೂಲದ ಎಕ್ಸ್​ಪ್ರೆಸ್ ಟೆಕ್ನೊಲಾಜಿಸ್ಟಿಕ್ಸ್​ ಎಂಬ ಸ್ಟಾರ್ಟಪ್ ಕಂಪನಿಯು ಈ ಧೀರಾ ರೊಬೋಟ್​​ಗಳನ್ನು ಕಾರ್ಯಾಚರಣೆಗೆ ತರುತ್ತಿದೆ. ಆರಂಭದಲ್ಲಿ ನಾರಸಿಂಗಿ ಪ್ರದೇಶದಲ್ಲಿ ಗೇಟೆಡ್ ಕಮ್ಯೂನಿಟಿಯೊಳಗೆ ಎರಡು ರೊಬೋಟ್​ಗಳನ್ನ ನಿಯೋಜಿಸಲಾಗುತ್ತಿದೆ. ಇದೇ ತಿಂಗಳು 28 ರಿಂದ ಇವು ಕೆಲಸ ಮಾಡಲಾರಂಭಿಸುತ್ತವೆ. ಶೀಘ್ರದಲ್ಲೇ ಇನ್ನಷ್ಟು ಡೆಲಿವರಿ ರೊಬೋಟ್​ಗಳನ್ನು ನಾವು ತರಲಿದ್ದೇವೆ ಎಂದು ಎಕ್ಸ್​ಪ್ರೆಸ್ ಟೆಕ್ನೊಲಾಜಿಸ್ಟಿಕ್ಸ್ ಸಿಇಒ ಶ್ರೀನಿವಾಸ್​ ತಿಳಿಸಿದರು.

ಒಂದು ಬಾರಿಗೆ ಒಂದು ಧೀರಾ​ ರೊಬೋಟ್​ 16 ಪಾರ್ಸಲ್​ಗಳನ್ನು ಕೊಂಡೊಯ್ಯಬಹುದು. ಡೆಲಿವರಿ ಬಾಯ್​ಗಳು ಈ ರೊಬೋಟ್​ನ ಬಾಕ್ಸ್​ನಲ್ಲಿ ಫುಡ್​ ಪ್ಯಾಕೆಟ್​ಗಳನ್ನಿಟ್ಟು, ರೊಬೋಟ್​ ಕೀಪ್ಯಾಡ್​ನಲ್ಲಿ ಫ್ಲ್ಯಾಟ್ ನಂಬರ್ ಒತ್ತಿದರಾಯಿತು. ರೊಬೋಟ್​ ತಕ್ಷಣವೇ ಪ್ಯಾಕೆಟ್ ಅನ್ನು ಸರಿಯಾದ ಮನೆಗೆ ತಲುಪಿಸುತ್ತದೆ.

ರೊಬೋಟ್​ ನಿಮ್ಮ ಮನೆಯ ಬಾಗಿಲಿಗೆ ಬಂದ ತಕ್ಷಣ ಫೋನಿಗೆ ಓಟಿಪಿ ಬರುತ್ತದೆ. ಓಟಿಪಿ ಒತ್ತಿದ ತಕ್ಷಣ ರೊಬೋಟ್​ ನಿಮಗೆ ಪಾರ್ಸಲ್ ನೀಡುತ್ತದೆ. ಬಹುಮಹಡಿ ಕಟ್ಟಡಗಳಲ್ಲೂ ಕೆಲಸ ಮಾಡುವಂತೆ ಇವನ್ನು ತಯಾರಿಸಲಾಗಿದೆ. ಲಿಫ್ಟ್​ನಲ್ಲಿರುವ ಚಿಪ್ ಒಂದರ ಸಹಾಯದಿಮದ ಇವು ಸರಿಯಾದ ಮಹಡಿಗೆ ಹೋಗಬಲ್ಲವು.

ಇದನ್ನು ಓದಿ:ಡೇಟಿಂಗ್ ಆ್ಯಪಲ್ಲಿ ಪರಿಚಯವಾದ ಯುವತಿಗೆ ಮನಸೋತು 6 ಕೋಟಿ ಕಳೆದುಕೊಂಡ ಬ್ಯಾಂಕ್‌ ಮ್ಯಾನೇಜರ್..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.