ಮಿರ್ಜಾಪುರ್(ಉತ್ತರ ಪ್ರದೇಶ): ಜಾರ್ಖಂಡ್ನ ಭಕ್ತರೊಬ್ಬರು ಉತ್ತರ ಪ್ರದೇಶದ ವಿಂಧ್ಯವಾಸಿನಿ ದೇವಸ್ಥಾನಕ್ಕೆ 101 ಕೆಜಿ ಬೆಳ್ಳಿಯ ಬಾಗಿಲು ದೇಣಿಗೆ ರೂಪದಲ್ಲಿ ನೀಡಿದ್ದಾರೆ. ದೇವಸ್ಥಾನಕ್ಕೆ ಹಿತ್ತಾಳೆ ಬಾಗಿಲು ಇರುವುದನ್ನು ನೋಡಿ ಬೇಸರಗೊಂಡ ಅವರು,ಇದೀಗ ಬೆಳ್ಳಿ ಬಾಗಿಲು ನೀಡಿದ್ದಾರೆ.
ಜಾರ್ಖಂಡ್ನ ಭಕ್ತ ಸಂಜಯ್ ಚೌಧರಿ ಕಳೆದ 25 ವರ್ಷಗಳಿಂದಲೂ ಉತ್ತರ ಪ್ರದೇಶದಲ್ಲಿರುವ ವಿಂಧ್ಯವಾಸಿನಿ ದೇವಸ್ಥಾನಕ್ಕೆ ಭೇಟಿ ನೀಡ್ತಿದ್ದು, ದೇವಿಯ ಮುಖ್ಯದ್ವಾರದ ಹಿತ್ತಾಳೆ ಬಾಗಿಲು ನೋಡಿ ಬೇಸರಗೊಂಡಿದ್ದನು. ಜೊತೆಗೆ ತಾನೂ ಬೆಳ್ಳಿಯ ಬಾಗಿಲು ಮಾಡಿಸಿಕೊಡುವುದಾಗಿ ಮನಸ್ಸಿನಲ್ಲಿ ಅಂದುಕೊಂಡಿದ್ದರಂತೆ. ಅದರಂತೆ ಇದೀಗ 101 ಕೆಜಿ ಬೆಳ್ಳಿಯ ಬಾಗಿಲು ಸಮರ್ಪಿಸಿದ್ದಾರೆ. ಈ ಹಿಂದೆ 2021ರ ಆಗಸ್ಟ್ ತಿಂಗಳಲ್ಲಿ ಭಕ್ತರೊಬ್ಬರು ಈ ದೇವಸ್ಥಾನಕ್ಕೆ ಚಿನ್ನದ ಕಿರೀಟ ಹಾಗೂ ಪಾದ ನೀಡಿದ್ದರು.
![devotee offered 101 kg silver door to vindhyavasini maa](https://etvbharatimages.akamaized.net/etvbharat/prod-images/up-mir-01-silvergate-visbite-up10113_28042022161225_2804f_1651142545_406.jpg)
ಇದನ್ನೂ ಓದಿ: ಸಹೋದರಿಯರ ಮೇಲೆ ಅತ್ಯಾಚಾರ ಎಸಗಿದ ಸಹೋದರ; ತಾಯಿ ಮೇಲೂ ದುಷ್ಕೃತ್ಯ ಯತ್ನ
ಅಮ್ಮನ ಆಶೀರ್ವಾದದಿಂದ ಇದೆಲ್ಲವೂ ನಡೆದಿದೆ ಎಂದು ಭಕ್ತ ಸಂಜಯ್ ಚೌಧರಿ ಹೇಳಿಕೊಂಡಿದ್ದು, ಕುಶಲಕರ್ಮಿಗಳಾದ ವಿಕ್ರಮ್, ಪ್ರಮೋದ್, ಗೋಪಾಲ್ ಅವರು ಬಾಗಿಲು ನಿರ್ಮಿಸಿದ್ದಾರೆಂದು ತಿಳಿಸಿದ್ದಾರೆ. ಸಂಜಯ್ ಚೌಧರಿ ಕಳೆದ 25 ವರ್ಷಗಳಿಂದಲೂ ಈ ದೇವಸ್ಥಾನಕ್ಕೆ ಭೇಟಿ ನೀಡ್ತಿದ್ದಾರೆ.