ETV Bharat / bharat

ತಿರುಮಲ ತಿಮ್ಮಪ್ಪನಿಗೆ ಎರಡೂವರೆ ಕೋಟಿ ಮೌಲ್ಯದ ಚಿನ್ನಾಭರಣ ದೇಣಿಗೆ ನೀಡಿದ ಭಕ್ತೆ! - ಚೆನ್ನೈನ ಭಕ್ತರಾದ ಸರೋಜಾ ಸೂರ್ಯನಾರಾಯಣನ್

ತಿರುಮಲ ತಿಮ್ಮಪ್ಪ ದೇವಸ್ಥಾನಕ್ಕೆ ಭೇಟಿ ನೀಡಿರುವ ಭಕ್ತೆಯೊಬ್ಬರು ಸುಮಾರು ಎರಡೂವರೆ ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೇಣಿಗೆಯಾಗಿ ನೀಡಿದ್ದಾರೆ.

devotee made a huge donation to Thirumala Lord Balaji, Gold kasula haram and Yagnopaveetham donated, donated by Devotees Suraj Suryanarayanan from Chennai, Thirumala Lord Balaji news, ತಿರುಮಲ ತಿಮ್ಮಪ್ಪನಿಗೆ ಅಪಾರ ದೇಣಿಗೆ ನೀಡಿದ ಭಕ್ತೆ, ಚಿನ್ನದ ಕಾಸುಲ ಹಾರ ಮತ್ತು ಯಜ್ಞೋಪವೀತವನ್ನು ದೇಣಿಗೆ ನೀಡಿದ ಭಕ್ತೆ, ಚೆನ್ನೈನ ಭಕ್ತರಾದ ಸರೋಜಾ ಸೂರ್ಯನಾರಾಯಣನ್, ತಿರುಮಲ ಬಾಲಾಜಿ ಸುದ್ದಿ,
ತಿರುಮಲ ತಿಮ್ಮಪ್ಪನಿಗೆ ಎರಡೂವರೆ ಕೋಟಿ ಮೌಲ್ಯದ ಚಿನ್ನಾಭರಣ ದೇಣಿಗೆ ನೀಡಿದ ಭಕ್ತೆ
author img

By

Published : Jun 10, 2022, 10:51 AM IST

ತಿರುಪತಿ: ತಿರುಮಲ ತಿಮ್ಮಪ್ಪನಿಗೆ ಭಕ್ತೆಯೊಬ್ಬಳು ಅಪಾರ ದೇಣಿಗೆ ನೀಡಿ ಅಚ್ಚರಿ ಪಡಿಸಿದ್ದಾರೆ. ನೋಡಲು ಸಾಮಾನ್ಯವಾಗಿರುವ ತಮಿಳುನಾಡಿನ ಚೆನ್ನೈ ಮೂಲಕ ವೃದ್ಧೆ ಭಕ್ತೆ ಸರೋಜಾ ಸೂರ್ಯ ನಾರಾಯಣನ್​ ಅವರು ಈ ಅಪಾರ ದೇಣಿಗೆ ನೀಡಿದ್ದಾರೆ.

ವೆಂಕಟೇಶ್ವರಸ್ವಾಮಿಗೆ ಚಿನ್ನದ ಕಾಸುಲಾ ಹಾರ ಮತ್ತು ಯಜ್ಞೋಪವೀತವನ್ನು ಕಾಣಿಕೆಯಾಗಿ ಭಕ್ತೆ ಸರೋಜಾ ಅವರು ನೀಡಿದ್ದಾರೆ. ಗುರುವಾರ ಸಂಜೆ 4.150 ಕೆಜಿ ತೂಕದ ಚಿನ್ನಾಭರಣವನ್ನು ಸರೋಜಾ ಸೂರ್ಯನಾರಾಯಣನ್ ಅವರು ಟಿಟಿಡಿ ಇಒ ಧರ್ಮರೆಡ್ಡಿ ಅವರಿಗೆ ಹಸ್ತಾಂತರಿಸಿದರು. ಆಭರಣಗಳ ಮೌಲ್ಯ 2.45 ಕೋಟಿ ರೂಪಾಯಿ ಎಂದು ದಾನಿ ತಿಳಿಸಿದ್ದಾರೆ.

ತಿರುಮಲ ತಿಮ್ಮಪ್ಪನಿಗೆ ಎರಡೂವರೆ ಕೋಟಿ ಮೌಲ್ಯದ ಚಿನ್ನಾಭರಣ ದೇಣಿಗೆ ನೀಡಿದ ಭಕ್ತೆ

ಓದಿ: ತಿರುಪತಿ ಇತಿಹಾಸದಲ್ಲೇ ಅತಿ ಹೆಚ್ಚು ಭಕ್ತರ ದಟ್ಟಣೆ : 2 ಕಿ.ಮೀ.ನಷ್ಟು ಭಕ್ತರ ಸಾಲು, 2 ದಿನಗಳ ಬಳಿಕ ದರ್ಶನ!

ಚೆನ್ನೈನಲ್ಲಿರುವ 3.50 ಕೋಟಿ ಮೌಲ್ಯದ ಭೂಮಿಯನ್ನು ಟಿಟಿಡಿಗೆ ನೀಡಲು ದಾನಿಗಳು ನಿರ್ಧರಿಸಿದ್ದಾರಂತೆ. ಆದರೆ, ಕಂದಾಯ ಅಧಿಕಾರಿಗಳು ಪರಿಶೀಲನೆ ನಡೆಸಿದ ಬಳಿಕ ಅಧಿಕೃತವಾಗಿ ಸ್ಥಳವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಟಿಟಿಡಿ ಭಕ್ತರಿಗೆ ತಿಳಿಸಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.