ETV Bharat / bharat

ಅಫ್ಘಾನಿಸ್ತಾನದ ಬೆಳವಣಿಗೆಯಿಂದ ಭಾರತದಂತಹ ದೇಶಗಳ ಮೇಲೆ ಹೆಚ್ಚಿನ ಪರಿಣಾಮ: ಮೋದಿ ಕಳವಳ

ಅಫ್ಘಾನಿಸ್ತಾನದಲ್ಲಿನ ಇತ್ತೀಚಿನ ಬೆಳವಣಿಗೆ ಭಾರತ ಸೇರಿದಂತೆ ಇತರೆ ನೆರೆಯ ರಾಷ್ಟ್ರಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಮೋದಿ ಕಳವಳ ವ್ಯಕ್ತಪಡಿಸಿದರು.

Modi
Modi
author img

By

Published : Sep 17, 2021, 8:02 PM IST

ನವದೆಹಲಿ: ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆ ಭಾರತದಂತಹ ನೆರೆಯ ರಾಷ್ಟ್ರಗಳ ಮೇಲೆ ಹೆಚ್ಚಿನ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆತಂಕ ವ್ಯಕ್ತಪಡಿಸಿದರು.

ಆ ದೇಶದಲ್ಲಿನ ಅಸ್ಥಿರತೆ ಇದೇ ರೀತಿಯಾಗಿ ಮುಂದುವರೆದರೆ ವಿಶ್ವದಾದ್ಯಂತ ಭಯೋತ್ಪಾದನೆ ಮತ್ತು ಉಗ್ರವಾದ ಸಿದ್ಧಾಂತಗಳಿಗೆ ಪ್ರೋತ್ಸಾಹ ಸಿಗಲಿದೆ ಎಂದು ಅವರು ಹೇಳಿದ್ದಾರೆ.

ವಿಡಿಯೋ ಕಾನ್ಫರೆನ್ಸ್​ ಮೂಲಕ ಎಸ್ಒಸಿ ವಾರ್ಷಿಕ ಶೃಂಗಸಭೆಯಲ್ಲಿ ಭಾಗಿಯಾಗಿ ಮಾತನಾಡಿರುವ ಪ್ರಧಾನಿ, ಅಫ್ಘಾನಿಸ್ತಾನದಲ್ಲಿನ ಇತ್ತೀಚಿನ ಬೆಳವಣಿಗೆ ನಡೆಯಲು ಶಾಂತಿ, ಭದ್ರತೆ ಹಾಗೂ ವಿಶ್ವಾಸದ ಕೊರತೆ ಮುಖ್ಯವಾಗಿದ್ದು, ಇದಕ್ಕೆ ಮುಖ್ಯ ಕಾರಣವೇ ಉಗ್ರವಾದ ಎಂದಿದ್ದಾರೆ. ಅಫ್ಘಾನಿಸ್ತಾನದಲ್ಲಿ ಆರ್ಥಿಕ ಸಂಕಷ್ಟ ಹಾಗೂ ವ್ಯಾಪಾರದ ಹರಿವಿನಲ್ಲಿ ಅಡಚಣೆಯಿಂದಾಗಿ ಹೆಚ್ಚಿನ ತೊಂದರೆಯಾಗುತ್ತಿದ್ದು, ಡ್ರಗ್ಸ್​​, ಅಕ್ರಮ ಶಸ್ತ್ರಾಸ್ತ್ರ ಹಾಗೂ ಮಾನವ ಕಳ್ಳಸಾಗಾಣಿಕೆಗೆ ಕಾರಣವಾಗಬಹುದು ಎಂದು ತಿಳಿಸಿದರು.

ಅಮೆರಿಕ ಸೇನೆ ಅಫ್ಘಾನಿಸ್ತಾನ ತೊರೆದ ನಂತರ ಹೆಚ್ಚಿನ ಪ್ರಮಾಣದ ಸುಧಾರಿತ ಶಸ್ತ್ರಾಸ್ತ್ರಗಳು ಅಲ್ಲಿ ಉಳಿದುಕೊಂಡಿದ್ದು, ಇದರಿಂದ ಇಡೀ ಜಗತ್ತಿಗೆ ಅಸ್ಥಿರತೆ ಅಪಾಯ ಉಂಟು ಮಾಡುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ಇದನ್ನೂ ಓದಿ: ಆತ ಮಗುವಿನ ತಂದೆ, ಆಕೆ ಮದುವೆ ನಿಶ್ಚಯವಾದ ಯುವತಿ: ಸಲ್ಲದ ಪ್ರೇಮಕ್ಕೆ ಬಿತ್ತು ಇಬ್ಬರ ಹೆಣ

ಜಗತ್ತಿನಲ್ಲಿನ ಉಗ್ರವಾದ ಹಾಗೂ ತೀವ್ರವಾದದಿಂದ ಉಂಟಾಗಿರುವ ಸವಾಲನ್ನು ಸಮರ್ಥವಾಗಿ ನಿಭಾಯಿಸಲು ಅನುಕೂಲವಾಗುವ ರೀತಿಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುವ ಅವಶ್ಯಕತೆ ಇದೆ ಎಂದು ಪ್ರಧಾನಿ ಮೋದಿ ಶಾಂಘೈ ಸಹಕಾರ ಸಭೆಯಲ್ಲಿ ಮನವಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.