ನವದೆಹಲಿ: ಬುಧವಾರ ರಾತ್ರಿ ಆಕಾಶದಲ್ಲಿ ಸೂಪರ್ ಬ್ಲೂ ಮೂನ್ ಸಖತ್ ಆಗಿಯೇ ಕಾಣಿಸಿಕೊಂಡಿದ್ದಾನೆ. ಸೂಪರ್‌ಮೂನ್ ಮತ್ತು ಬ್ಲೂ ಮೂನ್‌ಗಳು ಅಪರೂಪವಾಗಿ ವಿಶೇಷವಾಗಿ ಕಾಣಿಸಿಕೊಳ್ಳುತ್ತವೆ. ನಿನ್ನೆ ಕಾಣಿಸಿಕೊಂಡಿರುವ ಮೂನ್ ಮಾತ್ರ ಬಹಳ ದೊಡ್ಡದಾಗಿ ಪ್ರಕಾಶಮಾನವಾಗಿ ಕಾಣಿಸಿಕೊಂಡಿದೆ. ಇನ್ನು ನಾಸಾ ತಿಳಿಸಿರುವಂತೆ ಸೂಪರ್ ಬ್ಲೂ ಮೂನ್‌ಗಳು ಸರಾಸರಿ 10 ವರ್ಷಗಳಿಗೊಮ್ಮೆ ಕಾಣಿಸುತ್ತವೆ. ಅಚ್ಚರಿಯೆಂದರೆ ನಿನ್ನೆ ಕಾಣಿಸಿಕೊಂಡಿರುವ ಸೂಪರ್ ಬ್ಲೂ ಮೂನ್ ಇನ್ನು ಮುಂದಿನ 2037ರ ಜನವರಿ ವರೆಗೂ ಕಾಣಿಸಿಕೊಳ್ಳುವುದಿಲ್ಲ.
ಚಂದ್ರ ಅಷ್ಟು ದೊಡ್ಡದಾಗಿ ಕಾಣಿಸಿಕೊಳ್ಳುವುದಾದರು ಯಾಕೆ?: ಸೂಪರ್ ಮೂನ್ ನಮಗೆ ಹೀಗೆ ಬೃಹದಾಕಾರವಾಗಿ ಹೇಗೆ ಕಾಣಿಸಿಕೊಳ್ಳುತ್ತದೆ?. ಚಂದ್ರನ ಗಾತ್ರದಲ್ಲೇನಾದರೂ ವ್ಯತ್ಯಾಸವಾಗುತ್ತದೆಯೇ ಎಂಬ ಹಲವಾರು ಪ್ರಶ್ನೆಗಳು ಕಾಡಿರಬಹುದು. ಇದಕ್ಕೆ ಉತ್ತರ ಚಂದ್ರನ ಗಾತ್ರದಲ್ಲಿ ಬದಲಾವಣೆ ಅಲ್ಲ. ಬದಲಿಗೆ ಚಂದ್ರ ಹೀಗೆ ಕಾಣಿಸಿಕೊಂಡಾಗೆಲ್ಲ ಆತ ಭೂಮಿಯ ಸಮೀಪ ಆಗಮಿಸಿದ್ದಾನೆ ಎಂದೇ ಅರ್ಥ. ಹೌದು ಚಂದ್ರ ಯಾವಗೆಲ್ಲ ಭೂಮಿಯ ಹತ್ತಿರ ಬರುತ್ತಾನೋ ಆಗೆಲ್ಲ ನಮಗೆ ಆಕಾಶದಲ್ಲಿರುವ ಚಂದ್ರ ಬಹಳ ದೊಡ್ಡದಾಗಿ ಕಾಣಸಿಗುತ್ತಾನೆ. ಈ ಚಂದ್ರನನ್ನೆ ಸೂಪರ್‌ಮೂನ್ ಎಂದು ಕರೆಲಾಗುತ್ತದೆ.
ಒಂದೇ ತಿಂಗಳಲ್ಲಿ 2 ಬಾರಿ ಸೂಪರ್ ಮೂನ್: ಹೌದು ಈ ತಿಂಗಳ ಪ್ರಾರಂಭದಲ್ಲಿ ಅಂದರೆ ಆಗಸ್ಟ್ 1 ರಂದು ಕೂಡ ಈ ಮೂನ್ ಕಾಣಿಸಿಕೊಂಡಿದ್ದ. ಹಾಗೆ ನಿನ್ನೆ ಕೂಡ ಮತ್ತೆ ಗೋಚರಿಸಿರುವುದು ನಭದಲ್ಲಾದ ಅಚ್ಚರಿಯೆಂದರೆ ತಪ್ಪಗಲಾರದು. ಹಾಗೇ ನಿಮಗೆ ತಿಳಿದಿರಲಿ ಬ್ಲೂಮೂನ್ ಅಂದರೆ ಚಂದ್ರ ನೀಲಿ ಬಣ್ಣದಿಂದರುತ್ತಾನೆಂದಲ್ಲ. ಒಂದೇ ತಿಂಗಳಿನ 2 ಹುಣ್ಣಿಮೆಗಳು ಎಂದು ನಾಸಾ ನಿನ್ನೆಯ ಘಟನೆಯನ್ನು ಉಲ್ಲೇಖಿಸಿದೆ. ಹಾಗೆ ಎಲ್ಲಾ ಹುಣ್ಣಿಮೆಗಳಲ್ಲಿ ಕಾಣಿಸಿಕೊಳ್ಳುವ ಈ ಸ್ಪೆಷಲ್ ಮೂನ್ನಲ್ಲಿ ಶೇಕಡ 25 ಸೂಪರ್ಮೂನ್ಗಳಾಗಿರುತ್ತವೆ. ಹಾಗೆ ಶೇಕಡಾ 3 ರಷ್ಟು ಮಾತ್ರ ನೀಲಿ ಚಂದ್ರಗಳಾಗಿ ಗೋಚರಿಸುತ್ತದೆ ಎಂದು ನಾಸಾ ವಿಜ್ಞಾನಿಗಳು ತಿಳಿಸಿದ್ದಾರೆ.
ಎಲ್ಲೆಲ್ಲಿ, ಹೇಗೇಗೆ ಕಾಣಿಸಿಕೊಂಡ ಚಂದಮಾಮ: ನಿನ್ನೆಯ ವರದಿ ಪ್ರಕಾರ ರಾತ್ರಿ 9:30 ಕ್ಕೆ ಬ್ಲೂ ಮೂನ್ ಅತ್ಯಂತ ಪ್ರಕಾಶಮಾನವಾಗಿ ಕಂಗೊಳಿಸಿದ್ದಾನೆ. ಆಗಸ್ಟ್ 31 ಅಂದರೆ ಇಂದು ಬೆಳಗ್ಗೆ 7:30 ಗಂಟೆಗೆ ಕೂಡ ಅದೇ ಪ್ರಕಾಶಮಾನದಿಂದ ಕಾಣಿಸಿಕೊಂಡಿದೆ. ಅಸ್ಸೋಂನ ಗುವಾಹಟಿಯ ಸೂಪರ್ ಬ್ಲೂ ಮೂನ್‌ನ ದೃಶ್ಯಗಳು ನಿಜಕ್ಕೂ ಹುಬ್ಬೇರಿಸುವಂತಿತ್ತು. ಇನ್ನು ಕೋಲ್ಕತ್ತಾದ ಸೂಪರ್ ಬ್ಲೂಮೂನ್ ಎಲ್ಲರನ್ನೂ ತನ್ನಲ್ಲೇ ಕಳೆದುಹೋಗುವಂತೆ ಆಕರ್ಷಿಸಿದ್ದ. ಅದೇ ರೀತಿ ಬಿಹಾರದಲ್ಲಿ ಬ್ಲೂ ಮೂನ್ ನೋಡಲು ಎಲ್ಲರೂ ಉತ್ಸುಕರಾಗಿದ್ದರು. ಲಕ್ನೋದಿಂದ ಅದ್ಭುತವಾದ ದೃಶ್ಯಗಳು ಸೆರೆಯಾಗಿದ್ದು, ಎಲ್ಲರನ್ನೂ ಬೆರಗು ಗೊಳಿಸಿದೆ.(ANI)
ಇದನ್ನೂ ಓದಿ: ಬಾನಂಗಳದಲ್ಲಿ ಇಂದು ವಿಸ್ಮಯ: ಸೂಪರ್ ಬ್ಲೂ ಮೂನ್‌ನ ರಹಸ್ಯವೇನು..!?