ETV Bharat / bharat

ಪಶ್ಚಿಮ ಬಂಗಾಳದ ಸೂಕ್ಷ್ಮ ಮತಗಟ್ಟೆಗಳ ಬಗ್ಗೆ ಚುನಾವಣಾ ಆಯೋಗ ಮಾಹಿತಿ ನೀಡಿಲ್ಲ: ಬಿಎಸ್‌ಎಫ್‌ - ಬಿಎಸ್‌ಎಫ್‌ ಡಿಐಜಿ

ಪಶ್ಚಿಮ ಬಂಗಾಳ ಪಂಚಾಯತ್​ ಚುನಾವಣೆಯ ಹಿಂಸಾಚಾರದಲ್ಲಿ ಭದ್ರತಾ ವೈಫಲ್ಯವಾಗಿಲ್ಲ. ಸೂಕ್ಷ್ಮ ಮತಗಟ್ಟೆಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಿಲ್ಲ ಎಂದು ಬಿಎಸ್‌ಎಫ್‌ನ ಡಿಐಜಿ ಹೇಳಿದ್ದಾರೆ.

ಬಿಎಸ್‌ಎಫ್‌
ಬಿಎಸ್‌ಎಫ್‌
author img

By

Published : Jul 9, 2023, 1:56 PM IST

ಕೋಲ್ಕತ್ತಾ: ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ವ್ಯಾಪಕ ಹಿಂಸಾಚಾರ ನಡೆದು 19 ಜನರು ಸಾವಿಗೀಡಾಗಿದ್ದಾರೆ. ಇದು ಭದ್ರತಾ ವೈಫಲ್ಯ ಎಂಬ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಗಡಿ ಭದ್ರತಾ ಪಡೆ (ಬಿಎಸ್​ಎಫ್​​), ತಾವು ಕೇಳಿದಾಗ್ಯೂ ಸೂಕ್ಷ್ಮ ಮತಗಟ್ಟೆಗಳ ಬಗ್ಗೆ ರಾಜ್ಯ ಚುನಾವಣಾ ಆಯೋಗ ಯಾವುದೇ ಮಾಹಿತಿ ನೀಡಿಲ್ಲ ಎಂದು ಹೇಳಿದೆ.

ಈ ಬಗ್ಗೆ ಹೇಳಿಕೆ ನೀಡಿರುವ ಬಿಎಸ್‌ಎಫ್‌ನ ಡಿಐಜಿ ಎಸ್‌.ಎಸ್‌. ಗುಲೇರಿಯಾ ಅವರು, ಚುನಾವಣಾ ಆಯೋಗವು ಜುಲೈ 7ರಂದು ಅತಿ ಸೂಕ್ಷ್ಮ ಬೂತ್​ಗಳ ಒಂದು ಪಟ್ಟಿಯನ್ನು ಮಾತ್ರ ನೀಡಿದೆ. ಅದರಲ್ಲಿ ಬೂತ್​ಗಳ ಸಂಖ್ಯೆಗಳನ್ನು ನೀಡಿದೆ. ಯಾವ ಪ್ರದೇಶ, ಸೂಕ್ಷ್ಮತೆ ಬಗ್ಗೆ ಯಾವ ವಿವರ ನೀಡಿಲ್ಲ. ಈ ಬಗ್ಗೆ ನಾವು ಹಲವು ಪತ್ರಗಳನ್ನು ಬರೆದಿದ್ದೇವೆ. ಅದಕ್ಕೆ ಉತ್ತರವಾಗಿ ಒಂದು ಪತ್ರ ಮಾತ್ರ ಬಂದಿದೆ ಎಂದು ಅವರು ದೂರಿದರು.

ಆಯಾ ಜಿಲ್ಲಾಡಳಿತದ ಮಾರ್ಗದರ್ಶನದಂತೆ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. 4834 ಸೂಕ್ಷ್ಮ ಬೂತ್‌ಗಳಲ್ಲಿ ಸಿಎಪಿಎಫ್ ಪಡೆಯನ್ನು ನಿಯೋಜಿಸಲಾಗಿದೆ. ಆದರೆ, ಸೂಕ್ಷ್ಮ ಮತಗಟ್ಟೆಗಳ ಸಂಖ್ಯೆ ಇದಕ್ಕಿಂತಲೂ ಹೆಚ್ಚಾಗಿದೆ. ಈ ಬಗ್ಗೆ ಆಯೋಗ ನಮಗೆ ತಿಳಿಸಿಲ್ಲ. ರಾಜ್ಯದ 25 ಪೊಲೀಸ್​ ಪಡೆಗಳಳ್ಲದೇ, 59,000 ಕೇಂದ್ರೀಯ ಸಶಸ್ತ್ರ ಪೊಲೀಸರನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಆದರೆ, ಸೂಕ್ಷ್ಮ ಬೂತ್‌ಗಳಲ್ಲಿ ಅವುಗಳನ್ನು ಸಮರ್ಥವಾಗಿ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು.

ಶನಿವಾರ 3317 ಗ್ರಾಮ ಪಂಚಾಯಿತಿಗಳು, 341 ತಾಲೂಕು ಪಂಚಾಯಿತಿ ಮತ್ತು 20 ಜಿಲ್ಲಾ ಪರಿಷತ್‌ಗಳಿಗೆ ಚುನಾವಣೆ ನಡೆಯಿತು. ಇದಕ್ಕಾಗಿ 61,636 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತದಾನದ ವೇಳೆ ಬಾಂಬ್ ಸ್ಫೋಟ, ಬೂತ್ ವಶಪಡಿಸಿಕೊಳ್ಳುವಿಕೆ, ಚುನಾವಣಾ ಅಧಿಕಾರಿಗಳ ಮೇಲೆ ಹಲ್ಲೆ, ಕಾರ್ಯಕರ್ತರ ಹೊಡೆದಾಟದ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 19 ಮಂದಿ ಜೀವ ಕಳೆದುಕೊಂಡಿದ್ದಾರೆ. 13 ಜನರು ಆಡಳಿತಾರೂಢ ಟಿಎಂಸಿಗೆ ಸೇರಿದವರಾಗಿದ್ದರೆ, ತಲಾ ಇಬ್ಬರು ಬಿಜೆಪಿ ಮತ್ತು ಸಿಪಿಐ-ಎಂ, ಕಾಂಗ್ರೆಸ್‌ನ ಒಬ್ಬರು ಮತ್ತು ಒಬ್ಬ ಮತದಾರನಾಗಿದ್ದಾನೆ.

ರಾಜ್ಯಪಾಲ ಬೋಸ್​ ಖಂಡನೆ: ಚುನಾವಣೆಯಲ್ಲಿ ನಡೆದ ಹಿಂಸಾಚಾರದಲ್ಲಿ ಜನರು ಬಲಿಯಾಗಿದ್ದನ್ನು ರಾಜ್ಯಪಾಲ ಡಾ.ಸಿ.ವಿ. ಆನಂದ್​ ಬೋಸ್ ಖಂಡಿಸಿದ್ದಾರೆ. ಶನಿವಾರ ಅವರು ಉತ್ತರ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳ ವಿವಿಧೆಡೆ ಭೇಟಿ ನೀಡಿದ ಅವರು, ಕೆಲ ಕ್ಷೇತ್ರಗಳಲ್ಲಿ ಪರಿಸ್ಥಿತಿ ತುಂಬಾ ಆತಂಕಕಾರಿಯಾಗಿದೆ. ಹಿಂಸಾಚಾರ, ಕೊಲೆ ಮತ್ತು ಬೆದರಿಕೆಗಳು ನಡೆಯುತ್ತಿವೆ. ಇಲ್ಲಿ ಅಮಾಯಕರು ಕೊಲ್ಲಲ್ಪಡುತ್ತಿದ್ದಾರೆ. ನಾಯಕರು ಅಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಇದನ್ನೂ ಓದಿ: WB Panchayat polls: ಪಶ್ಚಿಮಬಂಗಾಳ ಚುನಾವಣೆಯಲ್ಲಿ ಭಾರೀ ಹಿಂಸಾಚಾರ: 9 ಮಂದಿ ಸಾವು, ಮತಗಟ್ಟೆಗಳು ಧ್ವಂಸ, ಬೆಂಕಿ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.