ಕೊರೊನಾ ಬಂದಿದ್ದೇ ಬಂದಿದ್ದು ಮನುಷ್ಯನ ಜೀವನಶೈಲಿಯನ್ನೇ ಬದಲಿಸಿದೆ. ಪ್ರತಿ ವ್ಯಕ್ತಿಯ ವೈಯಕ್ತಿಕ ಜೀವನ, ಸಾಮಾಜಿಕ ಮತ್ತು ವೃತ್ತಿ ಜೀವನವನ್ನು ಬುಡಮೇಲು ಮಾಡಿದೆ. ಸಾವಿರಾರು ಜನರ ಮಧ್ಯೆ ನಡೆಯುತ್ತಿದ್ದ ವಿವಾಹ ಸಮಾರಂಭಗಳು ಇಂದು ಎರಡಂಕಿಯ ಜನರಿಗೆ ಸೀಮಿತವಾಗಿವೆ. ಇನ್ನೂ ಕೆಲಸ ಮಾಡಲು ಕಚೇರಿಗೆ ತೆರಳಬೇಕಿದ್ದ ಕಾಲ ಬದಲಾಗಿ, ಮನೆಯಿಂದಲೇ ಕೆಲಸ ಮಾಡುವ ಪರಿ ಶುರುವಾಗಿದೆ. ಅದು ಹೆಚ್ಚಿನ ಜನರ ಜೀವನದ ಒಂದು ಭಾಗವಾಯಿತು.
- " class="align-text-top noRightClick twitterSection" data="
">
ಹೀಗೆ ಕೋವಿಡ್ನಿಂದ ಶುರುವಾದ ವರ್ಕ್ ಫ್ರಮ್ ಹೋಮ್ ಕಾನ್ಸೆಪ್ಟ್ ಇಲ್ಲೊಬ್ಬ ವರನ ಮೇಲೆ ಅತೀವ ಪರಿಣಾಮ ಬೀರಿದಂತಿದೆ. ಎಷ್ಟರ ಮಟ್ಟಿಗೆಂದರೆ, ವರನೋರ್ವ ತನ್ನ ಮದುವೆಯ ದಿನದಂದು ಸಹ ಲ್ಯಾಪ್ಟಾಪ್ ಹಿಡಿದು ಕೆಲಸ ಮಾಡುತ್ತಿರುವಷ್ಟರ ಮಟ್ಟಿಗೆ.
ಮದುವೆಯ ದಿನದಂದು ವರನು ತನ್ನ ಲ್ಯಾಪ್‌ಟಾಪ್‌ನೊಂದಿಗೆ ಮಂಟಪದಲ್ಲಿ ಕುಳಿತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವರನು ತನ್ನ ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಲೇ ಮದುವೆಗೆ ರೆಡಿಯಾಗಿ ಕುಳಿತಿರುವುದನ್ನು ಕಾಣಬಹುದು. ಈ ವಿಡಿಯೋವನ್ನು ಮೊದಲು ಜೇ-ರಾಜ್ ವಿಜಯಸಿಂಗ್ ದೇಶ್ಮುಖ್ ಎಂಬುವರು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಈ ಕ್ಲಿಪ್ 1 ಮಿಲಿಯನ್ ವೀಕ್ಷಣೆಗಳನ್ನು ಹೊಂದಿದೆ.