ETV Bharat / bharat

ಗುರ್ಮಿತ್​ಗೆ ಅನಾರೋಗ್ಯ: ವೈದ್ಯಕೀಯ ತಪಾಸಣೆ ಬಳಿಕ ಮರಳಿ ಜೈಲಿಗೆ - ಗುರ್ಮಿತ್ ರಾಮ್ ರಹೀಮ್ ಸಿಂಗ್​ಗೆ ಅನಾರೋಗ್ಯ

ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ಅವರು ಹೊಟ್ಟೆ ನೋವು, ಬಿಪಿಯಿಂದ ಬಳಲುತ್ತಿದ್ದು, ರೋಹತಕ್ನ​ ಪಿಜಿಐಎಂಎಸ್ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಬಳಿಕ ಮತ್ತೆ ಜೈಲಿಗೆ ಕಳುಹಿಸಲಾಗಿದೆ.

ಗುರ್ಮಿತ್ಗೆ ಅನಾರೋಗ್ಯ
ಗುರ್ಮಿತ್ಗೆ ಅನಾರೋಗ್ಯ
author img

By

Published : Jun 3, 2021, 7:00 PM IST

ಚಂಡೀಗಢ: ಸುನಾರಿಯಾ ಜೈಲಿನಲ್ಲಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ಅವರು ಹೊಟ್ಟೆ ನೋವು, ಬಿಪಿಯಿಂದ ಬಳಲುತ್ತಿದ್ದು, ರೋಹತಕ್​ನ ಪಿಜಿಐಎಂಎಸ್ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಲಾಗಿತ್ತು.

ಭಾರಿ ಪೊಲೀಸ್ ಬೆಂಗಾವಲಿನಲ್ಲಿ ಗುರ್ಮಿತ್​​ ರನ್ನು ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಕರೆತರಲಾಯಿತು. ವೈದ್ಯಕೀಯ ಪರೀಕ್ಷೆಯ ಬಳಿಕ ಜೈಲಿಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏಳು ವೈದ್ಯರ ತಂಡವು ಗುರ್ಮಿತ್​ರನ್ನು ಪರೀಕ್ಷೆ ಮಾಡಿ, ಆರೋಗ್ಯ ಸ್ಥಿರ ಎಂದು ಹೇಳಿದ ಬಳಿಕ ಅವರನ್ನು ಕಾರಾಗೃಹಕ್ಕೆ ಕಳುಹಿಸಲಾಗಿದೆ.

ಇಬ್ಬರು ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ್ದು ಸಾಬೀತಾದ ಹಿನ್ನೆಲೆ, ಡೇರಾ ಮುಖ್ಯಸ್ಥನನ್ನು 2017 ರಿಂದ ರೋಹತಕ್​​​​​​ನ ಸುನಾರಿಯಾ ಜೈಲಿನಲ್ಲಿರಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.