ETV Bharat / bharat

ಉತ್ತರ ಭಾರತದಲ್ಲಿ ರೆಡ್​​​ ಅಲರ್ಟ್​​: ಮುಂದಿನ ಐದು ದಿನ ಭಾರೀ ಚಳಿ ಮತ್ತು ದಟ್ಟ ಮಂಜಿನ ವಾತಾವರಣ

author img

By ETV Bharat Karnataka Team

Published : Jan 19, 2024, 4:01 PM IST

ಉತ್ತರ ಭಾರತದ ಅನೇಕ ಪ್ರದೇಶದಲ್ಲಿ ಈಗಾಗಲೇ ಚಳಿಯ ತೀವ್ರತೆ ಹೆಚ್ಚಿದ್ದು, ಮುಂದಿನ ಐದು ದಿನ ಮತ್ತಷ್ಟು ಪರಿಸ್ಥಿತಿ ಬಿಗಾಡಾಯಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

dense-to-very-dense-fog-conditions-continue-in-north-india

ನವದೆಹಲಿ: ಉತ್ತರ ಭಾರತದಲ್ಲಿ ಮುಂದಿನ ಐದು ದಿನಗಳ ಕಾಲ ದಟ್ಟವಾದ ಮಂಜಿನ ವಾತಾವರಣ ಇದ್ದು, ಚಳಿ ಹೆಚ್ಚರಲಿದೆ ಎಂದು ಐಎಂಡಿ ತಿಳಿಸಿದ್ದು, ರೆಡ್​ ಅಲರ್ಟ್​ ಘೋಷಣೆ ಮಾಡಿದೆ. ಅಲ್ಲದೇ ಮುಂದಿನ ಮೂರು ದಿನಗಳು ಉತ್ತರ ಭಾರತದ ಮಂದಿ ಭಾರೀ ಚಳಿಗೆ ನಡುಗಲಿದ್ದಾರೆ ಎಂದಿದೆ.

ಉತ್ತರ ಭಾರತದ ಜೆಟ್​ ಸ್ಟ್ರೀಮ್​ ವಿಂಡ್​​ ವೇಗ ಸಮುದ್ರ ಮಟ್ಟದಿಂದ 12.6 ಕಿ.ಮೀ ಎತ್ತರದಲ್ಲಿ 130-140 ನಾಟ್​ನಲ್ಲಿ ವೇಗವಾಗಿ ಬೀಸಲಿದ್ದು, ಇದು ಚಳಿಯನ್ನು ಮತ್ತಷ್ಟು ಹೆಚ್ಚಿಸಲಿದೆ. ಇದು ಇನ್ನಷ್ಟು ಶೀತ ಗಾಳಿಯ ತೀವ್ರತೆಗೆ ಕಾರಣವಾಗುತ್ತದೆ. ಈ ಜೆಟ್​ ಸ್ಟ್ರೀಮ್​ ಗಾಳಿ ಮುಂದಿನ 3-4 ದಿನಗಳ ಕಾಲ ಮಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ತಿಳಿಸಿದೆ.

ಈ ಶೀತದ ವಾತಾವರಣ ಹಿನ್ನೆಲೆ ಉತ್ತರ ರಾಜಸ್ಥಾನ, ದಕ್ಷಿಣ ಹರಿಯಾಣದಲ್ಲಿ ಕನಿಷ್ಠ ತಾಪಮಾನ 2 ರಿಂದ 5 ಡಿಗ್ರಿ ಸೆಲ್ಸಿಯಸ್​ ಇರಲಿದ್ದು, ಪಂಜಾಬ್​​, ಚಂಡೀಗಢ, ದೆಹಲಿ, ಉತ್ತರ ಪ್ರದೇಶ ಮತ್ತು ರಾಜಸ್ಥಾನ ಮತ್ತು ಮಧ್ಯಪ್ರದೇಶದ ಕೆಲ ಭಾಗದಲ್ಲಿ 6 ರಿಂದ 10 ಡಿಗ್ರಿ ಸೆಲ್ಸಿಯಸ್​ ಇರಲಿದೆ.

ಹರಿಯಾಣದ ಕೆಲ ಪ್ರದೇಶ, ದಕ್ಷಿಣ ಉತ್ತರ ಪ್ರದೇಶ ಮತ್ತು ಉತ್ತರ ರಾಜಸ್ಥಾನದಲ್ಲಿ 2 - 4 ಡಿಗ್ರಿ ಸೆಲ್ಸಿಯಸ್​​ಗಿಂತ ಕಡಿಮೆ ತಾಪಮಾನ ಇರಲಿದೆ. ಇಂದು ಪಶ್ಚಿಮ ರಾಜಸ್ಥಾನ್​ ಬಿಕಾನೇರ್, ಪೂರ್ವ ಉತ್ತರ ಪ್ರದೇಶ ಕಾನ್ಫುರ್​ನಲ್ಲಿ ತಾಪಮಾನ 2.4 ಡಿಗ್ರಿ ಸೆಲ್ಸಿಯಸ್​ ದಾಖಲಾಗಿದೆ ಎಂದು ಐಎಂಡಿ ತಿಳಿಸಿದೆ.

ಶೀತ ಗಾಳಿ ಜೊತೆಗೆ ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ದಟ್ಟ ಮಂಜು ಕೂಡ ಆವರಿಸಲಿದೆ. ಪಂಜಾಬ್​, ಹರಿಯಾಣ ಮತ್ತು ಚಂಡೀಗಡದಲ್ಲಿ ಶನಿವಾರದವರೆಗೆ ಈ ರೀತಿಯ ಮಂಜಿನ ವಾತಾವರಣ ಕಾಣಲಿದೆ. ಇದರಿಂದ ಗೋಚರಣೆ ಕ್ಷೀಣಿಸಲಿದೆ ಎಂದು ಐಎಂಡಿ ಅಂದಾಜಿಸಿದೆ.

ಉತ್ತರ ಪ್ರದೇಶದಲ್ಲಿ ಶುಕ್ರವಾರದಿಂದ ಭಾನುವಾರದವರೆಗೆ ಬೆಳಗ್ಗೆ ಮತ್ತು ಸಂಜೆಯ ಕೆಲಸ ಸಮಯ ದಟ್ಟ ಮಂಜಿನ ಹೊದಿಕೆ ಕಾಣಲಿದೆ. ಉತ್ತರಾಖಂಡದಲ್ಲೂ ಜನವರಿ 23ರವರೆಗೆ ಇದೇ ರೀತಿ ವಾತಾವರಣ ಕಾಣಲಿದೆ ಎಂದು ಐಎಂಡಿ ತಿಳಿಸಿದೆ.

ಬಿಹಾರ ಮತ್ತು ಪಂಜಾಬ್​, ಹರಿಯಾಣ ಮತ್ತು ಉತ್ತರ ರಾಜಸ್ಥಾನದಲ್ಲಿ ಭಾನುವಾರದವರೆಗೆ ಚಳಿಯ ತೀವ್ರತೆ ಹೆಚ್ಚಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳು ತಿಳಿಸಿದ್ದಾರೆ. ಪೂರ್ವ ಭಾರತದಲ್ಲೂ ಮುಂದಿನ ಮೂರು ದಿನಗಳ ಕಾಲ ತಾಪಮಾನದಲ್ಲಿ ತೀವ್ರ ಕುಸಿತ ಕಾಣಲಿದೆ. ಅಲ್ಲಿ ಕನಿಷ್ಠ ತಾಪಮಾನ 2-3 ಡಿಗ್ರಿ ಸೆಲ್ಸಿಯಸ್​ ಇರಲಿದೆ. ಉತ್ತರ ಭಾರತದಲ್ಲಿ ಮುಂದಿನ ಐದು ದಿನದಲ್ಲಿ ಹವಾಮಾನ ಪರಿಸ್ಥಿತಿ ಹೀಗೆ ಮುಂದುವರೆಯಲಿದ್ದು, ಇದರಲ್ಲಿ ಗಮನಾರ್ಹ ಬದಲಾವಣೆ ಕಾಣುವುದಿಲ್ಲ ಎಂದಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ಮಹಾರಾಷ್ಟ್ರ: ಪ್ರತ್ಯೇಕ ಬೆಂಕಿ ಅವಘಡ, ಮಕ್ಕಳು ಸೇರಿ ನಾಲ್ವರು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.