ನವದೆಹಲಿ: ಪ್ರವಾದಿ ಮೊಹಮ್ಮದ್ ಕುರಿತ ವಿವಾದಾತ್ಮಕ ಪೋಸ್ಟ್‌ಗಾಗಿ ಭಾರತೀಯ ಜನತಾ ಪಕ್ಷದಿಂದ(ಬಿಜೆಪಿ) ಉಚ್ಛಾಟಿತರಾಗಿರುವ ಮಾಜಿ ರಾಜ್ಯ ಮಾಧ್ಯಮ ಉಸ್ತುವಾರಿ ನವೀನ್ ಕುಮಾರ್ ಜಿಂದಾಲ್ ಅವರು ಇಂದು ಬೇಸರ ಹೊರಹಾಕಿದ್ದಾರೆ. ತಮ್ಮ ಭದ್ರತೆಗಾಗಿ ನಿಯೋಜಿಸಲಾಗಿದ್ದ ಪೊಲೀಸ್ ವಾಹನವನ್ನು ಧ್ವಂಸಗೊಳಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ದೆಹಲಿ ಪೊಲೀಸರು ಟ್ವೀಟ್ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ. ನವೀನ್ ಜಿಂದಾಲ್ ಅವರ ಮನೆಗೆ ಕಲ್ಲು ತೂರಾಟದ ಸುದ್ದಿ ತಪ್ಪುದಾರಿಗೆಳೆಯುವಂತಿದೆ. ಕೆಲವು ಮಾಧ್ಯಮಗಳು ಸುಳ್ಳು ಸುದ್ದಿಗಳನ್ನು ತೋರಿಸುತ್ತಿವೆ. ಘಟನೆಯಲ್ಲಿ ಟ್ರಕ್‌ನ ಟೈರ್‌ನ ತೊಂದರೆಯಿಂದ ಜಲ್ಲಿಕಲ್ಲು ಹಾರಿ ಮನೆ ಮುಂದೆ ನಿಲ್ಲಿಸಿದ್ದ ಪಿಸಿಆರ್ ವಾಹನದ ಗಾಜಿಗೆ ತಗುಲಿದೆ ಎಂದು ಸ್ಪಷ್ಟಪಪಡಿಸಿದ್ದಾರೆ.
ನವೀನ್ ಜಿಂದಾಲ್ ಇದಕ್ಕೆ ಪ್ರತಿಯಾಗಿ, ನನ್ನ ಕುಟುಂಬ ಇಸ್ಲಾಮಿಕ್ ಜಿಹಾದಿಗಳಿಂದ ಅಪಾಯದಲ್ಲಿದೆ. ನಾನು ದೆಹಲಿ ಪೊಲೀಸರಿಗೆ ಹಲವಾರು ಬಾರಿ ಸಾಕ್ಷ್ಯಗಳೊಂದಿಗೆ ಲಿಖಿತವಾಗಿ ಮಾಹಿತಿ ನೀಡಿದ್ದೇನೆ. ನನ್ನ ನಿವಾಸದಲ್ಲಿ ಕಾನ್‌ಸ್ಟೇಬಲ್‌ನೊಂದಿಗೆ ಪಿಸಿಆರ್ ಅನ್ನು ಪೋಸ್ಟ್ ಮಾಡಲಾಗಿದೆ. ರಾತ್ರಿ ವೇಳೆ ಜಿಹಾದಿಗಳು ಪಿಸಿಆರ್ ವಾಹನದ ಗ್ಲಾಸ್ ಒಡೆದು ಈ ಮೂಲಕ ನನಗೆ ಸಂದೇಶ ನೀಡಿದ್ದಾರೆ. ದೆಹಲಿ ಪೊಲೀಸ್ ಆಯುಕ್ತರು ನನ್ನ ಮತ್ತು ನನ್ನ ಕುಟುಂಬದ ಸುರಕ್ಷತೆಗೆ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: World Crocodile Day: ದಾಂಡೇಲಿಯಲ್ಲಿದೆ ರಾಜ್ಯದ ಮೊದಲ ಮೊಸಳೆ ಪಾರ್ಕ್