ETV Bharat / bharat

G20 Meeting: ಪ್ರಜಾಪ್ರಭುತ್ವದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ ಡಿಜಿಟಲೀಕರಣ: ಪ್ರಧಾನಿ ಮೋದಿ ಬಣ್ಣನೆ - ವಾರಾಣಸಿ ಕ್ಷೇತ್ರ

ಜಿ20 ಶೃಂಗಸಭೆ ಹಿನ್ನೆಲೆಯಲ್ಲಿ ವಾರಾಣಸಿಯಲ್ಲಿ 3 ದಿನಗಳ ಅಭಿವೃದ್ಧಿ ಕುರಿತ ಸಭೆ ನಡೆಯುತ್ತಿದ್ದು, ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫ್​ರೆನ್ಸ್​ ಮೂಲಕ ಮಾತನಾಡಿ ಕೆಲ ಸಲಹೆಗಳನ್ನು ನೀಡಿದ್ದಾರೆ.

ಪ್ರಧಾನಿ ಮೋದಿ
ಪ್ರಧಾನಿ ಮೋದಿ
author img

By

Published : Jun 12, 2023, 12:48 PM IST

ವಾರಾಣಸಿ (ಉತ್ತರ ಪ್ರದೇಶ): ಡಿಜಿಟಲೀಕರಣವು ಭಾರತದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತಂದಿದೆ. ಅರ್ಥಪೂರ್ಣ ನೀತಿ ನಿರೂಪಣೆ, ಸಂಪನ್ಮೂಲಗಳ ಸಮರ್ಥ ಹಂಚಿಕೆ, ಸಾರ್ವಜನಿಕ ಸೇವೆಯನ್ನು ಪರಿಣಾಮಕಾರಿಯಾಗಿ ತಲುಪಿಸಲು ಡಿಜಿಟಲೀಕರಣ ನಿರ್ಣಾಯಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಜಿ20 ಶೃಂಗಸಭೆಗೆ ಭಾರತ ಅಧ್ಯಕ್ಷತೆ ವಹಿಸಿದ್ದು, ಈ ಹಿನ್ನೆಲೆಯಲ್ಲಿ ವಾರಾಣಸಿಯಲ್ಲಿ ನಡೆಯುತ್ತಿರುವ 3 ದಿನಗಳ ಅಭಿವೃದ್ಧಿ ಸಭೆಯಲ್ಲಿ ವಿಡಿಯೋ ಕಾನ್ಫ್​ರೆನ್ಸ್​ ಮೂಲಕ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ತಂತ್ರಜ್ಞಾನ ನಿರ್ಣಾಯಕ ಘಟ್ಟವಾಗಿದೆ. ಭಾರತದಲ್ಲಿ ಡಿಜಿಟಲೀಕರಣವು ಕ್ರಾಂತಿಕಾರಿ ಬದಲಾವಣೆಯನ್ನು ತಂದಿದೆ. ಪಾಲುದಾರ ರಾಷ್ಟ್ರಗಳೊಂದಿಗೆ ತನ್ನ ಅನುಭವವನ್ನು ಹಂಚಿಕೊಳ್ಳಲು ಭಾರತ ಸಿದ್ಧವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಇದೇ ವೇಳೆ, ಸಭೆಯಲ್ಲಿ ಭಾಗವಹಿಸಲು ಆಗಮಿಸಿರುವ ಜಿ20 ರಾಷ್ಟ್ರಗಳ ಮುಖ್ಯಸ್ಥರನ್ನು ವಾರಾಣಸಿಗೆ ಸ್ವಾಗತಿಸಿದ ಮೋದಿ, ಇದು ಪ್ರಜಾಪ್ರಭುತ್ವವೆಂಬ ತಾಯಿಯ ಅತ್ಯಂತ ಹಳೆಯ ಜೀವಂತ ನಗರವಾಗಿದೆ ಎಂದು ಹೇಳಿದರು. ಕಾಶಿಯ ಮಹತ್ವದ ಬಗ್ಗೆ ಅರುಹಿದ ಅವರು, ಕಾಶಿ ಕ್ಷೇತ್ರ ಶತಮಾನಗಳಿಂದಲೂ ಜ್ಞಾನ, ಚರ್ಚೆ, ಸಂಸ್ಕೃತಿ ಮತ್ತು ಆಧ್ಯಾತ್ಮಿಕತೆಯ ಕೇಂದ್ರವಾಗಿದೆ. ಭಾರತದ ವೈವಿಧ್ಯಮಯ ಪರಂಪರೆಯ ಸಾರವನ್ನು ಹೊಂದಿದೆ ಎಂದು ಬಣ್ಣಿಸಿದರು.

ಸುಸ್ಥಿರ ಅಭಿವೃದ್ಧಿ: ಜಿ 20 ಅಭಿವೃದ್ಧಿ ಕಾರ್ಯಸೂಚಿಯು ಕಾಶಿಯನ್ನೂ ತಲುಪಿದೆ ಎಂಬುದು ಸಂತೋಷದ ವಿಷಯವಾಗಿದೆ. ಜಾಗತಿಕ ಅಭಿವೃದ್ಧಿಯು ಒಂದು ಪ್ರಮುಖ ವಿಷಯವಾಗಿದೆ. ಸುಸ್ಥಿರ ಅಭಿವೃದ್ಧಿ ಹಿಂದೆ ಬೀಳದಂತೆ ಮಾಡುವುದು ನಮ್ಮೆಲ್ಲರ ಸಾಮೂಹಿಕ ಜವಾಬ್ದಾರಿ ಎಂದು ನಾನು ಬಲವಾಗಿ ನಂಬುತ್ತೇನೆ. ಇದರಿಂದ ಯಾರೂ ಹಿಂದೆ ಉಳಿದಿಲ್ಲ ಎಂಬುದನ್ನು ನಾವು ಖಚಿತಪಡಿಸಿಕೊಳ್ಳಬೇಕಿದೆ" ಎಂದು ಪ್ರಧಾನಿ ಹೇಳಿದರು.

ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಸೃಷ್ಟಿಯಾದ ಅಡೆತಡೆಗಳಿಂದ ವಿಶ್ವದ ದಕ್ಷಿಣ ಭಾಗದ ದೇಶಗಳು ತೀವ್ರವಾಗಿ ಹಾನಿಗೀಡಾಗಿವೆ. ಭೌಗೋಳಿಕ, ರಾಜಕೀಯ ಮೇಲೆ ಪರಿಣಾಮಗಳು ಉಂಟಾಗಿವೆ. ಇಂಧನ ಮತ್ತು ರಸಗೊಬ್ಬರ ಬಿಕ್ಕಟ್ಟು ತಲೆದೋರಿದೆ. ಇಂತಹ ಸಂದರ್ಭಗಳಲ್ಲಿ ನಾವೆಲ್ಲರೂ ತೆಗೆದುಕೊಳ್ಳುವ ನಿರ್ಧಾರಗಳು ಮಾನವೀಯತೆಯನ್ನು ಎತ್ತಿಹಿಡಿಯಬೇಕಿದೆ ಎಂದು ಪ್ರಧಾನಿ ಹೇಳಿದರು.

ನಮ್ಮೆಲ್ಲರ ಪ್ರಯತ್ನಗಳು ಸಮಗ್ರ, ನ್ಯಾಯೋಚಿತ ಮತ್ತು ಸಮರ್ಥನೀಯವಾಗಿರಬೇಕು. ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಪೂರೈಸುವಲ್ಲಿ ಹೂಡಿಕೆಯನ್ನು ಹೆಚ್ಚಿಸಬೇಕು. ಅನೇಕ ದೇಶಗಳು ಎದುರಿಸುತ್ತಿರುವ ಸಾಲದ ಹೊರೆಯನ್ನು ತಗ್ಗಿಸಲು ಪರಿಹಾರಗಳನ್ನು ಕಂಡುಕೊಳ್ಳಬೇಕು ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು.

'ಮಾದರಿ ಅಭಿವೃದ್ಧಿ'ಯ ಬಗ್ಗೆ ಅಧ್ಯಯನ ಮಾಡುವಂತೆ ಪ್ರಧಾನಮಂತ್ರಿಗಳು ಜಿ20 ಅಭಿವೃದ್ಧಿ ಮಂತ್ರಿಗಳನ್ನು ಒತ್ತಾಯಿಸಿದರು. 'ಅಜೆಂಡಾ 2030' ಮನದಲ್ಲಿಟ್ಟುಕೊಂಡು ಕಾರ್ಯ ವೇಗಗೊಳಿಸಿದರೆ, ನಮ್ಮ ಕಾರ್ಯ ಪ್ರಸ್ತುತವಾಗಬಹುದು ಎಂದು ಅಭಿಪ್ರಾಯಪಟ್ಟರು.

ಕಾಶಿ ಸುತ್ತಿ ಬನ್ನಿ: ತಾವು ಪ್ರತಿನಿಧಿಸುವ ವಾರಾಣಸಿ ಕ್ಷೇತ್ರ ಮತ್ತು ವಿಶೇಷವಾಗಿ ಕಾಶಿಯನ್ನು ಎಲ್ಲ ರಾಷ್ಟ್ರಗಳು ಗಣ್ಯರು ಸುತ್ತಿ ಬನ್ನಿ ಎಂದು ಸಲಹೆ ನೀಡಿದರು. ಈ ನಗರ ಪ್ರಜಾಪ್ರಭುತ್ವದ ಹಳೆಯ ನಗರಗಳಲ್ಲಿ ಒಂದಾಗಿದೆ. ಇಲ್ಲಿ ಆಧ್ಯಾತ್ಮಿಕತೆ, ಚಿಂತನೆ, ಜ್ಞಾನ ಹರಡಿದೆ. ಅನಾದಿ ಕಾಲದ ಸಂಪ್ರದಾಯಗಳಿಂದ ಕಾಶಿಯು ಚೈತನ್ಯಯುತವಾಗಿದೆ. ಸಭೆಗಳ ಜೊತೆಗೆ ಬಳಿಕ ಸಮಯದಲ್ಲಿ ವ್ಯರ್ಥ ಮಾಡದೇ, ಕಾಶಿ ಕ್ಷೇತ್ರವನ್ನು ಸುತ್ತಿ ಆನಂದಿಸಿ ಎಂದು ಪ್ರಧಾನಿ ಮೋದಿ ಗಣ್ಯರನ್ನು ಒತ್ತಾಯಿಸಿದರು.

ಇದನ್ನೂ ಓದಿ: Life Insurance: ಜೀವವಿಮಾ ಮಾರುಕಟ್ಟೆಗೆ ಮತ್ತೊಂದು ಕಂಪನಿ ಎಂಟ್ರಿ: Go Digitಗೆ ಐಆರ್​ಡಿಎಐ ಅನುಮೋದನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.