ನ್ಯೂಯಾರ್ಕ್ : ಕೋವಿಡ್‌ನ ಡೆಲ್ಟಾ ರೂಪಾಂತರಿ ಈ ಹಿಂದಿನ ಎಲ್ಲಾ ಆವೃತ್ತಿಗಳ ವೈರಸ್‌ಗಿಂತ ಹೆಚ್ಚು ತೀವ್ರತರ ಅನಾರೋಗ್ಯ ಉಂಟುಮಾಡಬಹುದು. ಚಿಕನ್‌ಪಾಕ್ಸ್‌ನಂತೆ ಸುಲಭವಾಗಿ ಹರಡಬಹುದು ಎಂದು ಅಮೆರಿಕದ ಆರೋಗ್ಯ ಪ್ರಾಧಿಕಾರದ ಆಂತರಿಕ ದಾಖಲೆ ಉಲ್ಲೇಖಿಸಿ ಯುಎಸ್ ಮಾಧ್ಯಮಗಳು ವರದಿ ಮಾಡಿವೆ.
ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ)ನ ದಾಖಲೆಯು ಅಪ್ರಕಟಿತ ದತ್ತಾಂಶವನ್ನು ನೀಡಿದೆ. ಇದರಲ್ಲಿ ಸಂಪೂರ್ಣವಾಗಿ ಲಸಿಕೆ ಪಡೆದವರಿಲೂ ಡೆಲ್ಟಾ ರೂಪಾಂತರಿ ಹರಡಬಹುದು. ಈ ರೂಪಾಂತರಿಯನ್ನು ಮೊದಲು ಭಾರತದಲ್ಲಿ ಗುರುತಿಸಲಾಗಿದೆ. ಈ ಡಾಕ್ಯುಮೆಂಟ್‌ನ ವಿಷಯಗಳನ್ನು ವಾಷಿಂಗ್ಟನ್ ಪೋಸ್ಟ್ ಗುರುವಾರ ವರದಿ ಮಾಡಿದೆ.
ಸಿಡಿಸಿಯ ನಿರ್ದೇಶಕರಾದ ಡಾ ರೋಚೆಲ್ ಪಿ ವಾಲೆನ್ಸ್ಕಿ ಇದನ್ನು ಒಪ್ಪಿಕೊಂಡಿದ್ದಾರೆ. ಕೋವಿಡ್ ಲಸಿಕೆ ಪಡೆದವರಿಗೂ ಡೆಲ್ಟಾ ಅತಿ ಬೇಗ ಹರಡುತ್ತದೆ. ಅತಿ ಕಡಿಮೆ ಅವಧಿಯಲ್ಲಿ ಇತರರಲ್ಲಿ ಸುಲಭವಾಗಿ ಹರಡಬಹುದು ಎಂದಿದ್ದಾರೆ.
ಮರ್ಸ್, ಎಸ್ಎಆರ್‌ಎಸ್, ಎಬೋಲಾ, ನೆಗಡಿ, ಋತುಗಳು ಆಧಾರಿತ ಜ್ವರ ಮತ್ತು ಸಿಡುಬುಗೆ ಕಾರಣವಾಗುವ ವೈರಸ್‌ಗಳಿಗಿಂತ ಡೆಲ್ಟಾ ರೂಪಾಂತರವು ಹೆಚ್ಚು ಹರಡುತ್ತದೆ. ಇದು ಚಿಕನ್‌ಪಾಕ್ಸ್‌ನಂತೆ ಸಾಂಕ್ರಾಮಿಕ ಎಂಬ ಡಾಕ್ಯುಮೆಂಟರಿಯ ನಕಲನ್ನು ದಿ ನ್ಯೂಯಾರ್ಕ್ ಟೈಮ್ಸ್ ಪಡೆದುಕೊಂಡಿದೆ.
ಇದನ್ನೂ ಓದಿ: ಕೋವಿಡ್ ಮೂರನೇ ಅಲೆಗೆ ಕಾರಣವಾಗಲಿದ್ಯಾ ರೂಪಾಂತರಿ ವೈರಸ್!?
ವರದಿ ಪ್ರಕಾರ, ಡೆಲ್ಟಾ ರೂಪಾಂತರ - ಮೂಲತಃ ಬಿ .1.617.2 ಎಂದು ಕರೆಯಲ್ಪಡುತ್ತದೆ - ತೀವ್ರತರವಾದ ರೋಗದ ಪರಿಣಾಮವನ್ನು ಉಂಟುಮಾಡಬಹುದು ಎಂದು ವರದಿ ಹೇಳಿದೆ. 162 ಮಿಲಿಯನ್ ಲಸಿಕೆ ಹಾಕಿಸಿಕೊಂಡಿರುವ ಅಮೆರಿಕನ್ನರಲ್ಲಿ ವಾರಕ್ಕೆ ಸರಿಸುಮಾರು 35,000 ರೋಗಲಕ್ಷಣದ ಸೋಂಕುಗಳು ಇವೆ. ಸಿಡಿಸಿ ಸಂಗ್ರಹಿಸಿದ ಮಾಹಿತಿಯ ಪ್ರಕಾರ ಜುಲೈ 24ರವರೆಗೆ ಆಂತರಿಕ ಪ್ರಸ್ತುತಿಯಲ್ಲಿ ಈ ಮಾಹಿತಿ ಉಲ್ಲೇಖಿಸಲಾಗಿದೆ.