ನವದೆಹಲಿ : ಪಶ್ಚಿಮ ಹಿಮಾಲಯದಿಂದ ಶೀತ ಮತ್ತು ಶುಷ್ಕ ಗಾಳಿ ಬೀಸುತ್ತಿರುವುದರಿಂದ ದೆಹಲಿಯ ಕನಿಷ್ಟ ತಾಪಮಾನವು 6.8 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ.
ಪಾಶ್ಚಿಮಾತ್ಯ ಅವಾಂತರದ ಪ್ರಭಾವದಿಂದ ನಗರದಲ್ಲಿ ಗುರುವಾರ 2.1 ಮಿ.ಮೀ ಮಳೆಯಾಗಿದೆ. ಇದು ಗುಡ್ಡಗಾಡು ಪ್ರದೇಶದಲ್ಲಿ ವ್ಯಾಪಕ ಹಿಮಪಾತಕ್ಕೆ ಕಾರಣವಾಯಿತು. ಇದರಿಂದ ಪರ್ವತಗಳಿಂದ ಶೀತ, ಶುಷ್ಕ ಗಾಳಿ ಬಯಲು ಪ್ರದೇಶಗಳ ಕಡೆಗೆ ಬೀಸಲು ಪ್ರಾರಂಭಿಸಿದೆ. ಇದರ ಪರಿಣಾಮವಾಗಿ ತಾಪಮಾನದಲ್ಲಿ ಕುಸಿತ ಕಂಡಿದೆ ಎಂದು ಐಎಂಡಿ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ರಾಜ್ಯಸಭೆಯಲ್ಲಿ ಕೃಷಿ ಕಾನೂನುಗಳನ್ನು ಸಮರ್ಥಿಸಿಕೊಳ್ಳಲಿದ್ದಾರಾ ಪ್ರಧಾನಿ ಮೋದಿ.!?
ನಗರಕ್ಕೆ ಪ್ರತಿನಿಧಿ ದತ್ತಾಂಶವನ್ನು ಒದಗಿಸುವ ಸಫ್ದರ್ಜಂಗ್ ವೀಕ್ಷಣಾಲಯವು ಶುಕ್ರವಾರ ಕನಿಷ್ಟ 6.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಿಸಿದೆ. ಗುರುವಾರ ಗರಿಷ್ಠ ತಾಪಮಾನ 23.2 ಡಿಗ್ರಿ ಸೆಲ್ಸಿಯಸ್ ಆಗಿದ್ದು, ವರ್ಷದ ಈ ಸಮಯಕ್ಕೆ ಸಾಮಾನ್ಯವಾಗಿದೆ. ಕನಿಷ್ಟ ತಾಪಮಾನವು ಬುಧವಾರ 10.2 ಡಿಗ್ರಿ ಸೆಲ್ಸಿಯಸ್, ಮಂಗಳವಾರ 6.2 ಡಿಗ್ರಿ ಸೆಲ್ಸಿಯಸ್ ಮತ್ತು ಸೋಮವಾರ 5.3 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ.