ETV Bharat / bharat

ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ಮೂರ್ಛೆ ಹೋದ ಮಹಿಳೆ: ಆರೋಪ ನಿರಾಕರಿಸಿದ ಏರ್​ ಇಂಡಿಯಾ! - ಮಾಧ್ಯಮದಲ್ಲಿ ಬಿತ್ತರಗೊಂಡ ವೈರಲ್​​​​ ವಿಡಿಯೋಗೆ ಸ್ಪಷ್ಟನೆ ಕೊಟ್ಟಿರುವ ಏರ್​ ಇಂಡಿಯಾ:

ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಏರ್‌ಪೋರ್ಟ್ ಏರ್‌ಪೋರ್ಟ್‌ನ ಟರ್ಮಿನಲ್ 3ರಲ್ಲಿ ಈ ಘಟನೆ ವರದಿಯಾಗಿದೆ. ಪ್ರಯಾಣಿಕರು ಮೇ 5 ರಂದು ಏರ್ ಇಂಡಿಯಾ ವಿಮಾನ 823ರಲ್ಲಿ ಪ್ರಯಾಣ ಬೆಳೆಸಬೇಕಿತ್ತು. ಬೆಳಗ್ಗೆ 4.45ಕ್ಕೆ ವಿಮಾನ ದೆಹಲಿಯಿಂದ ತೆರಳಬೇಕಾಗಿತ್ತು. ಈ ಸಂದರ್ಭದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ತನ್ನ ಚಿಕ್ಕಮ್ಮ ಮತ್ತು ಸೋದರ ಸಂಬಂಧಿಯೊಂದಿಗೆ ಏರ್ ಇಂಡಿಯಾ ವಿಮಾನವನ್ನು ಏರಲು ಹೊರಟಿದ್ದ ಪ್ರಯಾಣಿಕರೊಬ್ಬರು ಈ ವಿಡಿಯೋವನ್ನು ತಮ್ಮ Instagram ನಲ್ಲಿ ಹಂಚಿಕೊಂಡಿದ್ದಾರೆ.

Delhi: Woman suffers panic attack after Air India 'denies her request to board flight'
ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ಮೂರ್ಛೆ ಹೋದ ಮಹಿಳೆ: ಆರೋಪ ನಿರಾಕರಿಸಿದ ಏರ್​ ಇಂಡಿಯಾ!
author img

By

Published : May 11, 2022, 8:06 PM IST

ನವದೆಹಲಿ: ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಒಳಗಿನ ಗೇಟ್​ ಬಳಿ ಮಹಿಳೆಯೊಬ್ಬರು ಮೂರ್ಚೆ ಹೋಗಿ ನೆಲದ ಮೇಲೆ ಕುಸಿದ ವಿಡಿಯೋ ವೈರಲ್​ ಆಗಿದೆ. ಮಹಿಳೆ ತಡವಾಗಿ ಬಂದಿರುವ ಹಿನ್ನೆಲೆಯಲ್ಲಿ ಏರ್​ ಇಂಡಿಯಾ ಸಿಬ್ಬಂದಿ ವಿಮಾನ ನಿಲ್ದಾಣದೊಳಗೆ ಬಿಡಲು ನಿರಾಕರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಸಂಬಂಧದ ವಿಡಿಯೋ ಸಹ ವೈರಲ್​ ಆಗಿದೆ. ಏರ್ ಇಂಡಿಯಾ ಸಿಬ್ಬಂದಿ ಮಹಿಳೆಯನ್ನು ವಿಮಾನ ಹತ್ತುವ ಮನವಿಯನ್ನು ನಿರಾಕರಿಸಿದ್ದಾರೆ ಎಂಬ ಆರೋಪ ಸಹ ಕೇಳಿ ಬಂದಿದೆ. ಆದರೆ, ಈ ಆರೋಪವನ್ನು ಏರ್​ ಇಂಡಿಯಾ ತಳ್ಳಿ ಹಾಕಿದ್ದು, ಇದಕ್ಕೆ ಸ್ಪಷ್ಟನೆ ನೀಡಿದೆ.

ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ಮೂರ್ಛೆ ಹೋದ ಮಹಿಳೆ: ಆರೋಪ ನಿರಾಕರಿಸಿದ ಏರ್​ ಇಂಡಿಯಾ!
ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ಮೂರ್ಛೆ ಹೋದ ಮಹಿಳೆ: ಇನ್​ಸ್ಟಾಗ್ರಾಂನಲ್ಲಿ ಆರೋಪ

ಏನಿದು ಘಟನೆ: ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಏರ್‌ಪೋರ್ಟ್ ಏರ್‌ಪೋರ್ಟ್‌ನ ಟರ್ಮಿನಲ್ 3ರಲ್ಲಿ ಈ ಘಟನೆ ವರದಿಯಾಗಿದೆ. ಪ್ರಯಾಣಿಕರು ಮೇ 5 ರಂದು ಏರ್ ಇಂಡಿಯಾ ವಿಮಾನ 823ರಲ್ಲಿ ಪ್ರಯಾಣ ಬೆಳೆಸಬೇಕಿತ್ತು. ಬೆಳಗ್ಗೆ 4.45ಕ್ಕೆ ವಿಮಾನ ದೆಹಲಿಯಿಂದ ತೆರಳಬೇಕಾಗಿತ್ತು. ಈ ಸಂದರ್ಭದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ತನ್ನ ಚಿಕ್ಕಮ್ಮ ಮತ್ತು ಸೋದರ ಸಂಬಂಧಿಯೊಂದಿಗೆ ಏರ್ ಇಂಡಿಯಾ ವಿಮಾನವನ್ನು ಏರಲು ಹೊರಟಿದ್ದ ಪ್ರಯಾಣಿಕರೊಬ್ಬರು ಈ ವಿಡಿಯೋವನ್ನು ತಮ್ಮ Instagram ನಲ್ಲಿ ಹಂಚಿಕೊಂಡಿದ್ದಾರೆ.

ವಿಡಿಯೊ ಸಹಿತ ಪೋಸ್ಟ್‌ನಲ್ಲಿ, ಅವರು ವಿಮಾನ ನಿಲ್ದಾಣದಲ್ಲಿ ಮೂರು ಜನರಿದ್ದರು ಮತ್ತು ಭದ್ರತಾ ಚೆಕ್-ಇನ್ ಪಾಯಿಂಟ್‌ನಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳಿವೆ ಎಂದು ಅವರು ತಮ್ಮ ಇನ್​​​ಸ್ಟಾಗ್ರಾಂ ಬರಹದಲ್ಲಿ ಉಲ್ಲೇಖಿಸಿದ್ದಾರೆ. ನಾವು ನಮ್ಮೊಂದಿಗೆ ಹೃದಯ ಮತ್ತು ಮಧುಮೇಹ ರೋಗಿಗಳನ್ನು ಹೊಂದಿದ್ದರಿಂದ ಐದು ನಿಮಿಷ ತಡವಾಗಿ ಬರುತ್ತೇವೆ ಮತ್ತು ಅವರಿಗೆ ಓಡಲು ಸಾಧ್ಯವಿಲ್ಲ. ನನ್ನ ಸೋದರ ಸಂಬಂಧಿ ಎರಡು ನಿಮಿಷಗಳಲ್ಲಿ ಬೋರ್ಡಿಂಗ್ ಗೇಟ್ ತಲುಪಲಿದ್ದಾರೆ. ನಾನು ನನ್ನ ಚಿಕ್ಕಮ್ಮನೊಂದಿಗೆ ಅವರನ್ನು ಹಿಂಬಾಲಿಸಿದ್ದೇನೆ ಎಂದು ಗೇಟ್​ ಸಿಬ್ಬಂದಿಗೆ ಫೋನ್​ ಮಾಡಿ ತಿಳಿಸಿದ್ದೆವು ಎಂದು ಪೋಸ್ಟ್​ನಲ್ಲಿ ತಿಳಿಸಿದ್ದಾರೆ.

ಮೊದಲೇ ತಿಳಿಸಿದರೂ ಗೇಟ್​ ಮುಚ್ಚಿದರು ಎಂದು ಆರೋಪ: ಗೇಟ್​ನಲ್ಲಿದ್ದ ಸಿಬ್ಬಂದಿಗೆ ಹೀಗೆ ತಿಳಿಸಿದ ಮೇಲೆಯೂ ನಮ್ಮಂತಹ ಇತರ ಪ್ರಯಾಣಿಕರಿಗೂ ಗೇಟ್‌ಗಳನ್ನು ಮುಚ್ಚಿದರು. ನನ್ನ ಸೋದರ ಸಂಬಂಧಿ ಅದೇ ದಿನದಲ್ಲಿ ಅವರ ಅಂತಿಮ ವರ್ಷದ VIVA ಕೂಡಾ ಹೊಂದಿದ್ದರು, ಸಿಬ್ಬಂದಿ ಗೇಟ್​​ನಲ್ಲಿ ಬಿಡದ ಕಾರಣ ವಿಮಾನದಲ್ಲಿ ಪ್ರಯಾಣ ಬೆಳೆಸಲು ಸಾಧ್ಯವಾಗಲಿಲ್ಲ. ಈ ಎಲ್ಲ ಘಟನೆಗಳಿಂದ ನನ್ನ ಚಿಕ್ಕಮ್ಮ ಆತಂಕಕ್ಕೊಳಗಾದರು, ಇದರಿಂದ ಉದ್ವೇಗಕ್ಕೆ ಒಳಗಾದ ಅವರು ಸ್ಥಳದಲ್ಲೇ ಮೂರ್ಛೆ ಹೋದರು. ನಾವು ವೈದ್ಯಕೀಯ ತುರ್ತುಸ್ಥಿತಿಯನ್ನು ಕೇಳಿದರೆ, ಗೇಟ್​ ಸಿಬ್ಬಂದಿ, ಭದ್ರತಾ ಸಿಬ್ಬಂದಿಯನ್ನು ಕರೆದು ನಿರ್ಗಮನ ಗೇಟ್‌ನಲ್ಲಿ ಬಿಡಲು ಹೇಳಿದರು ಎಂದು ವಿಫುಲ್​ ಬಿವಾನಿ ಎಂಬುವವರು ತಮ್ಮ ಇನ್​ಸ್ಟಾಗ್ರಾಂ ಪೋಸ್ಟ್​ನಲ್ಲಿ ಆರೋಪಿಸಿದ್ದಾರೆ.

ಮಾಧ್ಯಮದಲ್ಲಿ ಬಿತ್ತರಗೊಂಡ ವೈರಲ್​​​​ ವಿಡಿಯೋಗೆ ಸ್ಪಷ್ಟನೆ ಕೊಟ್ಟಿರುವ ಏರ್​ ಇಂಡಿಯಾ: ಇನ್​​ಸ್ಟಾಗ್ರಾಂ ಪೋಸ್ಟ್​ನಲ್ಲಿ ಮಾಡಿರುವ ಆರೋಪವನ್ನು ಏರ್​ ಇಂಡಿಯಾ ತಳ್ಳಿ ಹಾಕಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಏರ್​ ಇಂಡಿಯಾ ವಕ್ತಾರ, ಬೋರ್ಡಿಂಗ್​ ಗೇಟ್​ ಮುಚ್ಚಿದ ಬಳಿಕ ಮೂವರು ಪ್ರಯಾಣಿಕರು, ಅಲ್ಲಿಗೆ ಬಂದಿದ್ದಾರೆ. ಶೀಘ್ರದಲ್ಲೇ ಬೋರ್ಡಿಂಗ್​ ಗೇಟ್​ ಮುಚ್ಚಲಾಗುತ್ತದೆ, ಅಷ್ಟರೊಳಗೆ ಇಲ್ಲಿ ಬರಬೇಕೆಂದು ಮನವಿ ಮಾಡಿದರೂ ಅವರೆಲ್ಲ ಬಂದಿಲ್ಲ ಎಂದು ಹೇಳಿದ್ದಾರೆ.

ಇದೇ ವೇಳೆ, ಅವರಲ್ಲಿ ಒಬ್ಬರು ಬೋರ್ಡಿಂಗ್ ಗೇಟ್ ಬಳಿ ನೆಲದ ಮೇಲೆ ಮಲಗಿರುವುದು ಕಂಡುಬಂದಿದೆ. ತಕ್ಷಣ ಈ ಬಗ್ಗೆ ಗಮನ ಹರಿಸಿದ ಸಿಬ್ಬಂದಿ ಅವರಿಗೆ ಸಹಾಯ ಮಾಡಲು ವೈದ್ಯರು ಮತ್ತು ಸಿಐಎಸ್ಎಫ್ ಸಿಬ್ಬಂದಿಯನ್ನು ತಕ್ಷಣವೇ ಕರೆದಿದ್ದಾರೆ. ಸಿಬ್ಬಂದಿ ಮನವಿಯಂತೆ ವೈದ್ಯರು ಸ್ಥಳಕ್ಕೆ ಆಗಮಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಪ್ರಯಾಣಿಕಳು ಸುಧಾರಿಸಿಕೊಂಡಿದ್ದು, ವೈದ್ಯರ ಚಿಕಿತ್ಸೆಯನ್ನು ನಿರಾಕರಿಸಿದರು. ಗಾಲಿ ಖುರ್ಚಿಯೂ ಬೇಡ ಎಂದು ಹೇಳಿದರು ಎಂದು ಏರ್​ ಇಂಡಿಯಾ ವಕ್ತಾರರು ಸ್ಪಷ್ಟನೆ ನೀಡಿದ್ದಾರೆ.

ಇದೇ ವೇಳೆ ಮಾಧ್ಯಮಗಳು, ಸೋಷಿಯಲ್ ಮೀಡಿಯಾದಲ್ಲಿ ವರದಿ ಆಗಿರುವಂತೆ ಅಲ್ಲಿ ನಡೆದಿಲ್ಲ ಎಂದು ಇದೇ ವೇಳೆ ಏರ್​ ಇಂಡಿಯಾ ಸ್ಪಷ್ಟನೆ ನೀಡಿದೆ.

ಇದನ್ನು ಓದಿ: 12 ಗಂಟೆಗಳ ಕಾಲ ಊರಿಗೆ ಊರೇ ಖಾಲಿ.. ಅರಣ್ಯ ಸೇರುವ ಜನ ಅಲ್ಲಿ ಮಾಡೋದೇನು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.