ನವದೆಹಲಿ: 2048ರ ಒಲಿಂಪಿಕ್ಸ್ಗಾಗಿ ದೆಹಲಿ ಸರ್ಕಾರ ಬಿಡ್ ನಡೆಸಲಿದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದು, ಅದಕ್ಕಾಗಿ ಬೇಕಾಗುವ ಎಲ್ಲ ಮೂಲಸೌಕರ್ಯಗಳ ತಯಾರಿ ಮಾಡಿಕೊಳ್ಳಲಾಗುವುದು ಎಂದಿದ್ದಾರೆ.
ದೇಶದ ಆದಾಯ ಹೆಚ್ಚಾಗಬೇಕಾದರೆ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಈಗಿನಿಂದಲೇ ನಾವು 2048ರ ಒಲಿಂಪಿಕ್ಸ್ ನಡೆಸುವ ಯೋಜನೆ ಹಾಕಿಕೊಂಡಿದ್ದೇವೆ. ಅದಕ್ಕಾಗಿ ಬೇಕಾಗುವ ಎಲ್ಲ ರೀತಿಯ ಸೌಲಭ್ಯ, ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಯೋಜನೆ ರೂಪಿಸಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ಇದನ್ನೂ ಓದಿ: ಸೀಟು ಹಂಚಿಕೆಯಲ್ಲಿ ಮೂಡದ ಒಮ್ಮತ: ಎಐಎಡಿಎಂಕೆ-ಬಿಜೆಪಿ ಮೈತ್ರಿಯಿಂದ ಹೊರನಡೆದ ಡಿಎಂಡಿಕೆ
ದೆಹಲಿ ಹಣಕಾಸು ಸಚಿವ ಮನೀಷ್ ಸಿಸೋಡಿಯಾ 2021-22ನೇ ಸಾಲಿನ ಬಜೆಟ್ ಮಂಡಿಸಿದ್ದು, ಇದ್ರ ಒಟ್ಟು ಮೌಲ್ಯ 69,000 ಕೋಟಿ ಆಗಿದೆ. ಈ ವೇಳೆ 2047ರ ವೇಳೆಗೆ ದೆಹಲಿ ತಲಾ ಆದಾಯವನ್ನು ಸಿಂಗಪೂರ ಆದಾಯದ ಮಟ್ಟಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು. ಪ್ರಮುಖವಾಗಿ ಬಜೆಟ್ನಲ್ಲಿ ಕೋವಿಡ್ ಲಸಿಕೆಗಾಗಿ 50 ಕೋಟಿ ರೂ. ಅನುದಾನ ನೀಡಲಾಗಿದ್ದು, ಶಿಕ್ಷಣ, ಆರೋಗ್ಯ ಹಾಗೂ ಗ್ರಾಮೀಣಾಭಿವೃದ್ಧಿಗೆ ಆದ್ಯತೆ ನೀಡಲಾಗಿದೆ.