ETV Bharat / bharat

24ನೇ ಮುಖ್ಯ ಚುನಾವಣಾ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಸುಶೀಲ್ ಚಂದ್ರ - ಅಧಿಕಾರ ವಹಿಸಿಕೊಂಡ ಸುಶೀಲ್​ ಚಂದ್ರ

24ನೇ ಮುಖ್ಯ ಚುನಾವಣಾ ಆಯುಕ್ತರಾಗಿ ಸುಶೀಲ್ ಚಂದ್ರ ಅವರು ಇಂದು ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು. ಮುಂಬರುವ ಉತ್ತರ ಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಹಾಗೂ ಮಣಿಪುರ ವಿಧಾನಸಭೆಯ ಚುನಾವಣೆಗಳು ಇವರ ಅಧಿಕಾರಾವಧಿಯಲ್ಲಿಯೇ ನಡೆಯಲಿವೆ.

Delhi: Sushil Chandra took charge as the 24th Chief Election Commissioner (CEC) today
ಸುಶೀಲ್ ಚಂದ್
author img

By

Published : Apr 13, 2021, 2:12 PM IST

ನವದೆಹಲಿ:‌ ದೇಶದ 24ನೇ ಮುಖ್ಯ ಚುನಾವಣಾ ಆಯುಕ್ತರಾಗಿ ನೇಮಕವಾಗಿರುವ ಸುಶೀಲ್ ಚಂದ್ರ ಅವರು ಇಂದು ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು.

63 ವರ್ಷದ ಚಂದ್ರ ಅವರು ಮೇ 14, 2022ರ ವರೆಗೆ ಚುನಾವಣಾ ಆಯೋಗದ ಮುಖ್ಯ ಆಯಕ್ತರಾಗಿ ಕಾರ್ಯನಿರ್ವಹಿಸಲಿದ್ದಾರೆ. ಇದೀಗ ಮುಖ್ಯ ಆಯುಕ್ತರಾಗಿ ಬಡ್ತಿ ಪಡೆದಿರುವ ಇವರು 2019 ರಲ್ಲಿ ಚುನಾವಣಾ ಆಯುಕ್ತರಾಗಿ ನೇಮಕೊಂಡಿದ್ದರು. ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಚಂದ್ರ ಅವರ ಹಿರಿತನವನ್ನು ಪರಿಗಣಿಸಿ ಈ ಆದೇಶ ನೀಡಿದ್ದಾರೆ.

ಇದನ್ನೂ ಓದಿ: ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರಾಗಿ ಸುಶೀಲ್​ ಚಂದ್ರ ನೇಮಕ!

ಸುಶೀಲ್ ಚಂದ್ರ ಅವರ ಅಧಿಕಾರಾವಧಿಯಲ್ಲಿ ಉತ್ತರ ಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಹಾಗೂ ಮಣಿಪುರ ವಿಧಾನಸಭೆಯ ಚುನಾವಣೆಗಳು ನಡೆಯಲಿವೆ.

ಮೇ 15, 1957 ರಂದು ಜನಿಸಿದ ಸುಶೀಲ್​ ಚಂದ್ರ ಅವರು ರೂರ್ಕಿ ವಿಶ್ವವಿದ್ಯಾಲಯದಲ್ಲಿ ಬಿ-ಟೆಕ್ ಅಧ್ಯಯನ ಪೂರ್ಣಗೊಳಿಸಿದರೆ, ಡೆಹ್ರಾಡೂನ್‌ನ ಡಿಎವಿ ಕಾಲೇಜಿನಿಂದ ಎಲ್‌ಎಲ್‌ಬಿಯಲ್ಲಿ ಪದವಿ ಪಡೆದಿದ್ದಾರೆ. 63 ವರ್ಷದ ಚಂದ್ರ 1980ರ ಬ್ಯಾಚ್‌ನ ಐಆರ್‌ಎಸ್ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.