ETV Bharat / bharat

ಗನ್​ ತೋರಿಸಿ ಸಾಮಾಜಿಕ ಕಾರ್ಯಕರ್ತೆ ಮೇಲೆ ರೇಪ್​; ಟ್ಯೂಷನ್​ಗೆ ಹೋಗುತ್ತಿದ್ದ ಬಾಲಕಿ ಮೇಲೆ ಅತ್ಯಾಚಾರ: ಹುಡುಗಿ ಕುತ್ತಿಗೆಗೆ ಚಾಕು ಇಟ್ಟು ತಲೆಗೆ ಸಿಂಧೂರವಿಟ್ಟ ಭೂಪ - kannada news

ಮನೆ ಹುಡುಕಿ ಕೊಡುವಂತೆ ನಟಿಸಿ ಮಹಿಳೆ ಮೇಲೆ ಅತ್ಯಾಚಾರ - ಚಿಕಿತ್ಸೆಗಾಗಿ ದೆಹಲಿಯಿಂದ ಪುಣೆಗೆ ಆಗಮಿಸಿದ್ದ ಸಮಾಜಿಕ ಕಾರ್ಯಕರ್ತೆ- ಟ್ಯೂಷನ್​ಗೆ ತೆರಳುತ್ತಿದ್ದ 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ.

delhi-social-worker-was-raped-at-gunpoint-in-pune-by-a-house-showman
Etv Bharatಪ್ರತ್ಯೆಕ ಘಟನೆ: ಗನ್​ ತೋರಿಸಿ ಸಾಮಾಜಿಕ ಕಾರ್ಯಕರ್ತೆ, ಟ್ಯೂಷನ್​ಗೆ ಹೋಗುತ್ತಿದ್ದ ಬಾಲಕಿ ಮೇಲೆ ಅತ್ಯಾಚಾರ
author img

By

Published : Jan 9, 2023, 8:24 PM IST

ಪುಣೆ(ಮಹಾರಾಷ್ಟ್ರ): ದೆಹಲಿ ಮೂಲದ ಸಾಮಾಜಿಕ ಕಾರ್ಯಕರ್ತೆಯೊಬ್ಬರು ಮೇಲೆ ಗನ್​ ತೋರಿಸಿ ಅತ್ಯಾಚಾರ ಎಸಗಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಮಹಿಳೆಯು ವಾಸಕ್ಕೆಂದು ಮನೆ ಬಾಡಿಗೆಗೆ ಹುಡುಕುತ್ತಿದ್ದಳು, ಆರೋಪಿ ಸಂಜಯ್ ಬಾಬುರಾವ್ ಭೋಸ್ಲೆ ಎಂಬಾತನು ಮಹಿಳೆಗೆ ಬಾಡಿಗೆಗೆ ಮನೆ ತೋರಿಸುತ್ತೇನೆ ಎಂದು ಪ್ಲಾಟ್​ಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ.

ಮಹಿಳೆಯು ವಾಸಮಾಡಲು ಮನೆಯನ್ನು ಹುಡುಕುವ ಸಂದರ್ಭದಲ್ಲಿ ಆರೋಪಿ ಸಂಜಯ್ ಬಾಜಿರಾವ್ ಭೋಸ್ಲೆ ಮಹಿಳೆಗೆ ಮನೆ ತೋರಿಸುವಂತೆ ನಟಿಸಿ ಪುಣೆಯ ಹಡಪ್ಸರ್‌ನಲ್ಲಿರುವ ಪ್ರಸಿದ್ಧ ಫ್ಲಾಟ್​ಗೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ. ಈ ಬಗ್ಗೆ ಪುಣೆಯ ಹಡಪ್ಸರ್ ಪೊಲೀಸ್​ ಠಾಣೆಯಲ್ಲು ಆರೋಪಿ ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗಿದೆ.

ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣಗಳು: ಇತ್ತೀಚಿಗೆ ಕೌಟುಂಬಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಪುಣೆ ನಗರವು ಜಾಗತಿಕ ನಗರವಾಗಿರುವುದರಿಂದ ಜನರು ಉದ್ಯೋಗಕ್ಕಾಗಿ ಮೊದಲಿನಂತೆ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಿದ್ದಾರೆ. ಈಗ ಆಧುನಿಕ ವೈದ್ಯಕೀಯ ವಿಧಾನಗಳಿಂದ ಅನೇಕ ಜನರು ಚಿಕಿತ್ಸೆಗಾಗಿ ಮುಂಬೈ, ಪುಣೆಯಂತಹ ನಗರಗಳಿಗೆ ಕಳೆದ ಐದಾರು ವರ್ಷಗಳಿಂದ, ದೇಶದ ವಿವಿಧ ಭಾಗಗಳಿಂದ ಜನರು ವೈದ್ಯಕೀಯ ಚಿಕಿತ್ಸೆಗಾಗಿ ಪುಣೆಗೆ ಬರುತ್ತಿದ್ದಾರೆ.

ದೆಹಲಿಯಿಂದ ಸಾಮಾಜಿಕ ಕಾರ್ಯಕರ್ತರೊಬ್ಬರು ಪುಣೆಯ ಉರ್ಲಿ ಕಾಂಚನ್ ಪ್ರದೇಶದ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆಗಾಗಿ ಆಗಮಿಸಿದ್ದರು. ಚಿಕಿತ್ಸೆಯು ಬಹುದಿನಗಳ ಕಾಲ ನಡೆಯುವುದರಿಂದ ಉಳಿದುಕೊಳ್ಳಲು ಬಾಡಿಗೆ ಮನೆ ಹುಡುಕಲು ಆರಂಭಿಸಿದರು, ಮನೆ ಹುಡುಕುಕವುದಕ್ಕಾಗಿ ಮಹಿಳೆಯು ಸ್ಥಳೀಯ ರಿಯಲ್ ಎಸ್ಟೇಟ್ ಏಜೆಂಟ್ ರನ್ನು ಸಂಪರ್ಕಿಸಿದ್ದಾರೆ.

ಮನೆ ತೋರಿಸುವ ನೆಪದಲ್ಲಿ ರಿಯಲ್​ ಎಸ್ಟೆಟ್​ ಏಜೆಂಟ್​ ಆದ ಸಂಜಯ್​ ಬಾಜಿರಾವ್​ ಭೋಸ್ಲೆ ಮಹಿಳೆಯನ್ನು ನಿರ್ಜನವಾದ ಫ್ಲಾಟ್​ಗೆ ಕರೆದೊಯ್ದು ಗನ್ ತೋರಿಸಿ ಅತ್ಯಾಚಾರ ಎಸಗಿದ್ದಾರೆ. ನಂತರ ಈ ಬಗ್ಗೆ ಹಡಪ್ಸರ್ ಠಾಣೆಯಲ್ಲಿ ಸಂತ್ರಸ್ತೆಯು ದೂರು ನೀಡಿದ್ದು, ಪಿಸ್ತೂಲ್ ತೋರಿಸಿ ಅತ್ಯಾಚಾರವೆಸಗಿದ್ದಾನೆ ಎಂದು ದೂರು ದಾಖಲಾಗಿದೆ. ಇದೀಗ ಆರೋಪಿ ರಿಯಲ್​ ಎಸ್ಟೆಟ್​ ಏಜೆಂಟ್​ ಸಂಜಯ್​ ಬಾಜಿರಾವ್​ ಭೋಸ್ಲೆ ವಿರುದ್ಧ ಪ್ರಕರಣ ದಾಖಲಾಗಿದ್ದು. ಹೆಚ್ಚಿನ ಮಾಹಿತಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನವದೆಹಲಿ - 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ: ರಾಷ್ಟ್ರ ರಾಜಧಾನಿಯಲ್ಲಿ ಇಂತಹ ಘಟನೆಗಳು ನಿರಂತರವಾಗಿ ಮುನ್ನಲೆಗೆ ಬರುತ್ತಿದ್ದು, ಇದು ಮಹಿಳೆಯರ ಸುತಕ್ಷತೆಯ ಪ್ರಶ್ನೆಯನ್ನು ಹುಟ್ಟುಹಾಕುತ್ತಿದೆ. ದೆಹಲಿ ನಗರದ ಸ್ವರೂಪ್​ ನಗರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಟ್ಯೂಷನ್​ ಗೆ ಹೋಗುತ್ತಿದ್ದ 14 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಲಾಗಿದೆ, ದಿನನಿತ್ಯದಂತೆ ಟ್ಯೂಷನ್​ ಗೆ ಹೋಗುವ ಸಂದರ್ಭಲ್ಲಿ ಸೋನು ಎಂಬ ಯುವಕ ಸಂತ್ರಸ್ತೆಯನ್ನು ಹಿಂಬಾಲಿಸಿ ಅತ್ಯಾಚಾರವೆಸಗಿ ಪರಾರಿಯಾಗಿದ್ದಾನೆ. ಸಂತ್ರಸ್ತೆಯು ಮನೆಗೆ ಹೋಗಿ ತನ್ನ ತಾಯಿಗೆ ಸಂಪೂರ್ಣ ಘಟನೆಯನ್ನು ವಿವರಿಸಿದ ನಂತರ, ಬಾಲಕಿಯ ಪೋಷಕರು ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಈ ಪ್ರಕರಣ ಸಂಬಂಧ ಪೊಲೀಸರು ಆರೋಪಿಯ ವಿರುದ್ಧ ಆತ್ಯಾಚಾರ ಮತ್ತು ಪೋಸ್ಕೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.

ಸುಲ್ತಾನಪುರ ಪ್ರದೇಶದಲ್ಲೂ ಇಂತಹದ್ದೇ ಘಟನೆ: ಇನ್ನೊಂದು ಪ್ರಕರಣದಲ್ಲಿ ದೆಹಲಿಯ ಸುಲ್ತಾನ್​ಪುರಿ ಪ್ರದೇಶದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಬ್ಲಾಕ್​ಮೇಲ್​ ಮಾಡಿ ಅತ್ಯಾಚಾರ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಶೋಯೆಬ್​ ಖಾನ್​ ಎಂಬ ಯುವಕನು ಬಾಲಕಿಯ ಖಾಸಗಿ ಪೋಟೊಗಳನ್ನು ಇಟ್ಟುಕೊಂಡು, ಒಂದು ಲಕ್ಷ ನೀಡಿದರೆ ಫೋಟೋವನ್ನು ಡಿಲೀಟ್​ ಮಾಡುತ್ತೇನೆ ಎಂದು ಬ್ಲಾಕ್​ಮೇಲೆ ಮಾಡುತ್ತಿದ್ದನ್ನು, ಇದರಿಂದ ನೊಂದ ಸಂತ್ರಸ್ತೆಯು ಪೊಲೀಸರಿಗೆ ದೂರನ್ನು ನೀಡಿದ್ದಾರೆ. ಪೊಲೀಸರು ಯುವಕನ ಮೇಲೆ ಅತ್ಯಾಚಾರ ಮತ್ತು ಇತರ ಸಂಬಂಧಿತ ಸೆಕ್ಷನ್​ಗಳ ಅಡಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಮಹರಾಜ್​ಗಂಜ್​(ಉತ್ತರಪ್ರದೇಶ): ಹುಡುಗಿ ಕುತ್ತಿಗೆಗೆ ಚಾಕು ಇಟ್ಟು ತಲೆಗೆ ಸಿಂಧೂರವಿಟ್ಟ ಭೂಪ: ಉತ್ತರ ಪ್ರದೇಶದ ಮಹಾರಾಜಗಂಜ್ ಜಿಲ್ಲೆಯಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಎಂಟನೇ ತರಗತಿಯಲ್ಲಿ ಓದುತ್ತಿರುವ ಅಪ್ರಾಪ್ತ ವಿದ್ಯಾರ್ಥಿಯೊಬ್ಬ ಏಕಪಕ್ಷೀಯ ಪ್ರೇಮಕ್ಕೆ ಒಳಗಾಗಿ ಕಳೆದ ಶನಿವಾರ ಸಂಜೆ ತನ್ನ ಪ್ರೇಯಸಿಯ ಮನೆಗೆ ಹೋಗಿದ್ದಾನೆ. ಮೆನೆಗೆ ಹೋಗಿ ಬಾಲಕಿಯ ಕೊರಳಿಗೆ ಚಾಕು ಇಟ್ಟು ಹಣೆಯಲ್ಲಿ ಸಿಂಧೂರ ಇಟ್ಟಿದ್ದಾನೆ. ಈ ಬಗ್ಗೆ ಬಾಲಕಿಯ ಪೋಷಕರು ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಉತ್ತರ ಪ್ರದೇಶದ ಎಸ್​ಪಿ ಅಜಯ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.

ಇದನ್ನೂ ಓದಿ: ಅತ್ಯಾಚಾರ ವಿರೋಧಿಸಿದ್ದಕ್ಕೆ ಮಹಿಳೆಗೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ ದುರುಳರು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.