ETV Bharat / bharat

ಮುಂದಿನ ವಾರದಿಂದ ದೆಹಲಿಯಲ್ಲಿ 10, 12ನೇ ತರಗತಿಗಳು ಆರಂಭ: ಹಾಜರಾತಿ ಕಡ್ಡಾಯವಲ್ಲ! - ಶಿಕ್ಷಣ ಸಚಿವ ಮನೀಷ್ ಸಿಸೋಡಿಯಾ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜನವರಿ 18ರಿಂದ 10 ಹಾಗೂ 12ನೇ ತರಗತಿಗಳು ಆರಂಭಗೊಳ್ಳಲಿದ್ದು, ಅದಕ್ಕೆ ಸಂಬಂಧಿಸಿದಂತೆ ಶಿಕ್ಷಣ ಸಚಿವ ಮನೀಷ್​ ಸಿಸೋಡಿಯಾ ಪ್ರಕಟಣೆ ಹೊರಡಿಸಿದ್ದಾರೆ.

Delhi schools
Delhi schools
author img

By

Published : Jan 13, 2021, 3:46 PM IST

ನವದೆಹಲಿ: ದೇಶಾದ್ಯಂತ ಕೊರೊನಾ ಹಾವಳಿ ಕಡಿಮೆಯಾಗ್ತಿದ್ದು, ಇದರ ಬೆನ್ನಲ್ಲೇ ಎಲ್ಲಾ ರಾಜ್ಯಗಳಲ್ಲಿ ಶಾಲಾ-ಕಾಲೇಜು ಪುನಾರಂಭಗೊಳ್ಳುತ್ತಿವೆ. ಇದೀಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಶಾಲಾ-ಕಾಲೇಜು ಪುನಾರಂಭಗೊಳ್ಳಲಿವೆ.

ಮೆಟ್ರಿಕ್ ಪರೀಕ್ಷಾ ಶುಲ್ಕ ಮನ್ನಾ ಮಾಡಿ ಒಡಿಶಾ ಸಿಎಂ ಆದೇಶ: 6 ಲಕ್ಷ ವಿದ್ಯಾರ್ಥಿಗಳಿಗೆ ಲಾಭ

10 ಹಾಗೂ 12ನೇ ತರಗತಿಗಳು ಮುಂದಿನ ವಾರ ಜನವರಿ 18ರಿಂದ ಆರಂಭಗೊಳ್ಳಲಿದ್ದು, ಸಿಬಿಎಸ್​ಸಿ ಬೋರ್ಡ್ ಪರೀಕ್ಷೆ ಮೇ 4ರಿಂದ ಆರಂಭಗೊಳ್ಳಲಿದೆ ಎಂದು ದೆಹಲಿ ಶಿಕ್ಷಣ ಸಚಿವ ಮನೀಷ್ ಸಿಸೋಡಿಯಾ ತಿಳಿಸಿದ್ದಾರೆ. ಪೋಷಕರ ಅನುಮತಿ ಪಡೆದುಕೊಂಡು ವಿದ್ಯಾರ್ಥಿಗಳು ಶಾಲೆಗೆ ಬರಬಹುದು. ಇದರಲ್ಲಿ ಯಾವುದೇ ರೀತಿಯ ಬಲವಂತ ಇಲ್ಲ ಎಂದು ತಿಳಿಸಿದ್ದು, ಶಾಲೆಗಳು ಪುನಾರಂಭಗೊಳ್ಳಲಿವೆ ಎಂದಿದ್ದಾರೆ. ಶಾಲೆಗೆ ಬರುವ ವಿದ್ಯಾರ್ಥಿಗಳ ದಾಖಲೆ ಇಡುತ್ತೇವೆ. ಆದರೆ ಹಾಜರಾತಿ ಕಡ್ಡಾಯವಲ್ಲ ಎಂದು ತಿಳಿಸಿದ್ದಾರೆ.

ವಾರ್ಷಿಕ ಪರೀಕ್ಷೆ ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಸಚಿವರು ತಿಳಿಸಿದ್ದು, ಕೊರೊನಾ ವೈರಸ್​ ಮಾರ್ಗಸೂಚಿ ಅನುಸರಣೆ ಕಡ್ಡಾಯವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.