ನವದೆಹಲಿ: ಭಾರತೀಯ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಮತ್ತು ರೆಸ್ಟ್ಲಿಂಗ್ ಫೆಡರೇಶನ್‌ನ ಮಾಜಿ ಕಾರ್ಯದರ್ಶಿ ವಿನೋದ್ ತೋಮರ್‌ಗೆ ದೆಹಲಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಗುರುವಾರ ನ್ಯಾಯಾಲಯ ಅವರಿಗೆ ಸಾಮಾನ್ಯ ಜಾಮೀನು ಮಂಜೂರು ಮಾಡಿದೆ. ಇದಕ್ಕೂ ಮೊದಲು, ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಸಾಮಾನ್ಯ ಜಾಮೀನು ಅರ್ಜಿಯ ಆದೇಶವನ್ನು ರೂಸ್ ಅವೆನ್ಯೂ ನ್ಯಾಯಾಲಯವು ಸಂಜೆ 4 ಗಂಟೆಗೆ ಕಾಯ್ದಿರಿಸಿತ್ತು.
-
Rouse Avenue Court of Delhi grants regular bail to outgoing Wrestling Federation of India's President Brij Bhushan Sharan Singh and the Federation's assistant secretary Vinod Tomar Singh in the sexual harassment case registered on the basis of complaints of several wrestlers.
— ANI (@ANI) July 20, 2023 " class="align-text-top noRightClick twitterSection" data="
">Rouse Avenue Court of Delhi grants regular bail to outgoing Wrestling Federation of India's President Brij Bhushan Sharan Singh and the Federation's assistant secretary Vinod Tomar Singh in the sexual harassment case registered on the basis of complaints of several wrestlers.
— ANI (@ANI) July 20, 2023Rouse Avenue Court of Delhi grants regular bail to outgoing Wrestling Federation of India's President Brij Bhushan Sharan Singh and the Federation's assistant secretary Vinod Tomar Singh in the sexual harassment case registered on the basis of complaints of several wrestlers.
— ANI (@ANI) July 20, 2023
ಜಾಮೀನು ಅರ್ಜಿಯನ್ನು ವಿರೋಧಿಸದ ದೆಹಲಿ ಪೊಲೀಸರು: ಈ ವಿಚಾರದಲ್ಲಿ ದೆಹಲಿ ಪೊಲೀಸರ ನಿಲುವು ಗೊಂದಲಮಯವಾಗಿತ್ತು. ನ್ಯಾಯಾಲಯದಲ್ಲಿ, ದೆಹಲಿ ಪೊಲೀಸರ ಪರ ವಕೀಲರು ಅವರು ಜಾಮೀನು ಅರ್ಜಿಯನ್ನು ವಿರೋಧಿಸುವುದಿಲ್ಲ ಅಥವಾ ಬೆಂಬಲಿಸುವುದಿಲ್ಲ ಎಂದು ಹೇಳಿದರು. ಈ ವಿಚಾರದಲ್ಲಿ ನ್ಯಾಯಾಲಯ ಕಾನೂನು ಪ್ರಕಾರ ತೀರ್ಮಾನ ಕೈಗೊಳ್ಳಬೇಕು ಎಂದು ವಿನಂತಿಸಿದ್ದರು.
ಮೊನ್ನೆ ಮಂಗಳವಾರ ಅಂದರೆ ಜುಲೈ 18 ರಂದು ಕುಸ್ತಿಪಟುಗಳ ಲೈಂಗಿಕ ಶೋಷಣೆ ಪ್ರಕರಣದಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ರಿಲೀಫ್ ಪಡೆದುಕೊಂಡಿದ್ದರು. ಈ ಪ್ರಕರಣದಲ್ಲಿ ಬ್ರಿಜ್ ಭೂಷಣ್ ಮತ್ತು ಅವರ ಸಹ ಆರೋಪಿ ವಿನೋದ್ ತೋಮರ್‌ಗೆ ರೋಸ್ ಅವೆನ್ಯೂ ಕೋರ್ಟ್ ಮಂಗಳವಾರ ಎರಡು ದಿನಗಳ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಈ ವೇಳೆ, ಭಾರಿ ಪೊಲೀಸ್ ಭದ್ರತೆಯ ನಡುವೆ ಬ್ರಿಜ್ ಭೂಷಣ್ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಕಳೆದ ವಿಚಾರಣೆಯ ಸಂದರ್ಭದಲ್ಲಿ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಹರ್ಜೀತ್ ಸಿಂಗ್ ಜಸ್ಪಾಲ್ ಪ್ರಕರಣದ ಮುಂದಿನ ವಿಚಾರಣೆ ಸಮಯದಲ್ಲಿ ಸಾಮಾನ್ಯ ಜಾಮೀನು ಅರ್ಜಿ ವಿಚಾರಣೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದರು. ಆರೋಪಿಗಳ ವಿರುದ್ಧ ಸಲ್ಲಿಸಲಾಗಿರುವ ಚಾರ್ಜ್‌ಶೀಟ್ ಪರಿಗಣಿಸಿದ ನ್ಯಾಯಾಲಯವು ಜುಲೈ 7 ರಂದು ಸಮನ್ಸ್ ಜಾರಿಗೊಳಿಸಿ ಹಾಜರಾಗುವಂತೆ ಆದೇಶಿಸಿತು.
ಬಂಧನವಿಲ್ಲದೇ ಚಾರ್ಜ್ ಶೀಟ್ ಆಗಿದೆ ಎಂದು ಬ್ರಿಜ್ ಭೂಷಣ್ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು. ಈ ಕುರಿತು ಜಾಮೀನು ಅರ್ಜಿ ಸಲ್ಲಿಸಲಾಗಿದೆ. ದೆಹಲಿ ಪೊಲೀಸರ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಶ್ರೀವಾಸ್ತವ ವಾದ ಮಂಡಿಸಿದ್ದರು. ಜಾಮೀನಿಗೆ ಸಂಬಂಧಿಸಿದಂತೆ ನಿಮ್ಮ ವಾದಗಳೇನು ಎಂದು ನ್ಯಾಯಾಲಯ ಕೇಳಿತು. ಬ್ರಿಜ್ ಭೂಷಣ್ ಅವರನ್ನು ಬಂಧಿಸಿಲ್ಲ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ಬ್ರಿಜ್ ಭೂಷಣ್ ಪರ ವಕೀಲ ರಾಜೀವ್ ಮೋಹನ್ ವಾದ ಮಂಡಿಸಿ, ಪ್ರಕರಣದಲ್ಲಿ ಪೊಲೀಸರು ವಿಧಿಸಿರುವ ಯಾವುದೇ ಸೆಕ್ಷನ್ಗಳಲ್ಲಿ ಐದು ವರ್ಷಕ್ಕಿಂತ ಹೆಚ್ಚು ಶಿಕ್ಷೆ ವಿಧಿಸುವ ಅವಕಾಶವಿಲ್ಲ. ಬ್ರಿಜ್ ಭೂಷಣ್ ಸೇರಿದಂತೆ ಇಬ್ಬರೂ ಆರೋಪಿಗಳಿಗೆ ರಿಲೀಫ್ ನೀಡಿದ ನ್ಯಾಯಾಲಯವು ತಲಾ 20,000 ರೂಪಾಯಿಗಳ ವೈಯಕ್ತಿಕ ಬಾಂಡ್ ಮೇಲೆ ಜುಲೈ 20 ರವರೆಗೆ ಮಧ್ಯಂತರ ಜಾಮೀನು ನೀಡಿದೆ.
ಇದೀಗ ಆರೋಪಪಟ್ಟಿ ಪ್ರತಿಯನ್ನು ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ ಕಕ್ಷಿದಾರರಿಗೆ ನೀಡಲಾಗುವುದು. ಆದರೆ, ಈ ಪ್ರಕರಣದಲ್ಲಿ ಮಾಧ್ಯಮಗಳು ಪ್ರತ್ಯೇಕ ವಿಚಾರಣೆ ನಡೆಸಬಾರದು ಎಂದು ಬ್ರಿಜ್‌ಭೂಷಣ್ ಪರ ವಕೀಲ ಹೇಳಿದ್ದರು. ಈ ಕುರಿತು ನ್ಯಾಯಾಲಯವು ಪ್ರಕರಣದಲ್ಲಿ ಇನ್ - ಕ್ಯಾಮೆರಾ ಪ್ರಕ್ರಿಯೆಗಳನ್ನು ಬಯಸಿದರೆ ಅವರು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಬಹುದು ಎಂದು ಹೇಳಿತ್ತು. ದೆಹಲಿ ಪೊಲೀಸರ ಚಾರ್ಜ್‌ಶೀಟ್ ಸುಳ್ಳಿನ ಕಂತೆ ಎಂದು ಬ್ರಿಜ್ ಭೂಷಣ್ ಪರ ವಕೀಲ ಎಪಿ ಸಿಂಗ್ ಹೇಳಿದ್ದಾರೆ. ಅವರನ್ನು ಬಲೆಗೆ ಬೀಳಿಸಲು ಸಂಚು ರೂಪಿಸಲಾಗುತ್ತಿದೆ ಎಂದು ಆರೋಪಿಸಿದರು.
ಓದಿ: ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ: ಚಾರ್ಜ್‌ಶೀಟ್‌ನಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ಕರ್ಮಕಾಂಡ ಬಯಲು