ನವದೆಹಲಿ: ದೆಹಲಿ ತಾಪಮಾನ ಇಂದು 7.8 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಪಶ್ಚಿಮ ಹಿಮಾಲಯನ್ ಪ್ರದೇಶದಲ್ಲಿ ಬೀಸುವ ವಾಯುವ್ಯ ಮಾರುತದ ಶುಕ್ರವಾರದಿಂದ ಪ್ರಾರಂಭವಾಗಲಿದೆ. ಈ ಪರಿಣಾಮವಾಗಿ, ಸೋಮವಾರದ ವೇಳೆಗೆ 4 ಡಿಗ್ರಿ ಸೆಲ್ಸಿಯಸ್ ತಲುಪುವ ಸಾಧ್ಯತೆಯಿದೆ ಎಂದು ಐಎಂಡಿ ಅಧಿಕಾರಿ ತಿಳಿಸಿದ್ದಾರೆ.
ಇದನ್ನು ಓದಿ: ಕಾಂಗ್ರೆಸ್ನಿಂದ ‘ರಾಜಭವನ ಚಲೋ’- ಟ್ರ್ಯಾಕ್ಟರ್ನಲ್ಲಿ ತೆರಳುತ್ತಿರುವ ‘ಕೈ’ ನಾಯಕರು
ಎಕ್ಯೂಐ (Air Quality Index) ನಲ್ಲಿ ಗಾಳಿಯ ಗುಣಮಟ್ಟ ಬೆಳಗ್ಗೆ 9 ಗಂಟೆ ವೇಳೆಗೆ 308ಕ್ಕೆ ಏರಿಕೆಯಾಗಿದೆ. ಕಡಿಮೆ ಗಾಳಿಯ ವೇಗ ಮತ್ತು ಹೆಚ್ಚಿನ ತೇವಾಂಶದ ಕಾರಣ ದೆಹಲಿಯ ಗಾಳಿಯ ಗುಣಮಟ್ಟ ಈ ತಿಂಗಳಲ್ಲಿ ಆರನೇ ಬಾರಿ ಏರಿಕೆಯಾಗಿದೆ.
ನಗರದಲ್ಲಿ ಮಂಗಳವಾರ 404, ಸೋಮವಾರ 372 ಮತ್ತು ಭಾನುವಾರ 347ಕ್ಕೆ‘ ಗಾಳಿಯ ಗುಣಮಟ್ಟ ಏರಿಕೆಯಾಗಿತ್ತು.