ETV Bharat / bharat

Delhi Air Quality: ಸ್ವಲ್ಪ ಸುಧಾರಿಸಿದ ದೆಹಲಿ ವಾಯು ಗುಣಮಟ್ಟ - ಅತ್ಯಂತ ಕಳಪೆ

ಶನಿವಾರ ವಾಯು ಗುಣಮಟ್ಟ ಸೂಚ್ಯಂಕ 437 ಇದ್ದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು 386 AQI ದಾಖಲಾಗಿದೆ.

Delhi Air Quality
Delhi Air Quality
author img

By

Published : Nov 14, 2021, 2:25 PM IST

ನವದೆಹಲಿ: ಇಂದು ಬೆಳಗ್ಗೆ ದೆಹಲಿ ವಾಯು ಗುಣಮಟ್ಟ (Delhi Air Quality) ಸ್ವಲ್ಪ ಸುಧಾರಿಸಿದ್ದು, 'ತೀವ್ರ ಅಪಾಯಕಾರಿ' (severe) ಹಂತದಿಂದ 'ಅತ್ಯಂತ ಕಳಪೆ' (very poor) ಹಂತದಲ್ಲಿದೆ.

ಭಾರತದ ಗಾಳಿಯ ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆಯ ವ್ಯವಸ್ಥೆ (SAFAR-India) ಪ್ರಕಾರ ರಾಷ್ಟ್ರ ರಾಜಧಾನಿಯ ವಾಯು ಗುಣಮಟ್ಟ ಸೂಚ್ಯಂಕವು (AQI - Air quality index) 386ರಷ್ಟಿದೆ. ಶನಿವಾರ ದೆಹಲಿಯಲ್ಲಿ 437 AQI ದಾಖಲಾಗಿತ್ತು.

ದೆಹಲಿಯಲ್ಲಿ ವಾಯುಮಾಲಿನ್ಯದ ಪ್ರಮಾಣ ಮಿತಿ ಮೀರಿದ ಪರಿಣಾಮ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Chief Minister Arvind Kejriwal) ಅವರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಸೋಮವಾರದಿಂದ ಒಂದು ವಾರ ಶಾಲೆಗಳು ಬಂದ್ ಮಾಡುವಂತೆ ಹಾಗೂ ಸರ್ಕಾರಿ ಸಿಬ್ಬಂದಿ ಮನೆಯಿಂದಲೇ ಕೆಲಸ (Work from Home) ಮಾಡುವಂತೆ ಸೂಚನೆ ನೀಡಿದ್ದಾರೆ. ನವೆಂಬರ್ 14ರಿಂದ 17ರವರೆಗೆ ಕಟ್ಟಡ ನಿರ್ಮಾಣ ಕಾರ್ಯ ಸಂಪೂರ್ಣ ಬಂದ್​ ಆಗಲಿದೆ. ಹೀಗಾಗಿ ನಾಳೆಯಿಂದ ದೆಹಲಿಯನ್ನಾವರಿಸಿದ್ದ ವಿಷಕಾರಿ ಹೊಗೆ ಕಡಿಮೆಯಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: ದೆಹಲಿಯಲ್ಲಿ ಒಂದು ವಾರ ಶಾಲೆ ಬಂದ್​ ​, ಸರ್ಕಾರಿ ಸಿಬ್ಬಂದಿಗೆ ವರ್ಕ್‌ ಫ್ರಮ್‌ ಹೋಮ್‌

AQI ಪರಿಗಣಿಸುವುದು ಹೀಗೆ..

ಸರ್ಕಾರಿ ಏಜೆನ್ಸಿಗಳ ಪ್ರಕಾರ, 0 ಮತ್ತು 50 ರ ನಡುವಿನ (AQI) ಸೂಚ್ಯಂಕವನ್ನು 'ಉತ್ತಮ' ಎಂದು ಪರಿಗಣಿಸಲಾಗುತ್ತದೆ. 51 ಮತ್ತು 100 ನಡುವಿನ ಸೂಚ್ಯಂಕವನ್ನು 'ತೃಪ್ತಿಕರ' ಎನ್ನಲಾದರೆ, 101 ಮತ್ತು 200 ನಡುವಿನ ಸೂಚ್ಯಂಕವನ್ನು 'ಮಧ್ಯಮ' ಎಂದು ಪರಿಗಣಿಸಲಾಗುತ್ತದೆ. ಇನ್ನೂ 201 ಮತ್ತು 300 'ಕಳಪೆ' ಹಾಗೂ 301 ಮತ್ತು 400 ನಡುವಿನ ಸೂಚ್ಯಂಕವನ್ನು 'ಅತ್ಯಂತ ಕಳಪೆ' ಮತ್ತು 401 ಹಾಗೂ ಅದಕ್ಕೂ ಹೆಚ್ಚಿನ ಸೂಚ್ಯಂಕವನ್ನು 'ತೀವ್ರ ಅಪಾಯಕಾರಿ' ಎಂದು ಪರಿಗಣಿಸಲಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.