ETV Bharat / bharat

ಕೋವಿಡ್ ಸೋಂಕಿತರಿಗೆ ನೆರವು: ಪೊಲೀಸರಿಂದ ಯೂತ್​ ಕಾಂಗ್ರೆಸ್​ ಅಧ್ಯಕ್ಷ ಶ್ರೀನಿವಾಸ್​ನ ಪ್ರಶ್ನೆ - ಕೋವಿಡ್ ಸೋಂಕಿತರಿಗೆ ಸಹಾಯ

ಕೊರೊನಾ ಸಂದರ್ಭದಲ್ಲಿ ಸಹಾಯ ಮಾಡಿರುವ ಯುವ ಕಾಂಗ್ರೆಸ್​ ಅಧ್ಯಕ್ಷ ಬಿ.ವಿ ಶ್ರೀನಿವಾಸ್​ ಅವರನ್ನ ದೆಹಲಿ ಪೊಲೀಸರು ಪ್ರಶ್ನೆ ಮಾಡಿದ್ದಾರೆ.

congress leader
congress leader
author img

By

Published : May 14, 2021, 5:28 PM IST

ನವದೆಹಲಿ: ಮಹಾಮಾರಿ ಕೊರೊನಾ ವೈರಸ್​​ ಉತ್ತುಂಗದಲ್ಲಿದ್ದಾಗ, ಜನರಿಗೆ ಔಷಧ ಮತ್ತು ಆಮ್ಲಜನಕ ನೀಡಿರುವ ಯೂತ್​​ ಕಾಂಗ್ರೆಸ್​ ಅಧ್ಯಕ್ಷ ದೆಹಲಿ ಪೊಲೀಸರಿಂದ ಪ್ರಶ್ನೆಗೊಳಗಾಗಿದ್ದಾರೆ. ದೆಹಲಿ ಹೈಕೋರ್ಟ್​ ಆದೇಶದ ಮೇರೆಗೆ ದೆಹಲಿ ಪೊಲೀಸರು ಬಿ.ವಿ ಶ್ರೀನಿವಾಸ್​​ ಅವರನ್ನ ಪ್ರಶ್ನಿಸಿದ್ದಾರೆ.

ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಶ್ರೀನಿವಾಸ್​ ಅವರು ಸಾವಿರ ಸದಸ್ಯರ ತಂಡದೊಂದಿಗೆ ದೇಶಾದ್ಯಂತ ಕೋವಿಡ್​​ ಸೋಂಕಿತರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ. ಹಾಸಿಗೆ, ಆಕ್ಸಿಜನ್​, ಔಷಧ ಸೇರಿದಂತೆ ಅನೇಕ ರೀತಿಯಲ್ಲಿ ಸಹಾಯ ಮಾಡ್ತಿದ್ದು, ಇದಕ್ಕೆ ಆನ್​ಲೈನ್​ಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಪ್ರಶ್ನೆ ಮಾಡಲು ಕಾರಣ?

ದೆಹಲಿ ಪೊಲೀಸರ ಪ್ರಕಾರ, ಕೋವಿಡ್​​-19ಗೆ ಸಂಬಂಧಿಸಿದ ಔಷಧಗಳನ್ನ ಅನೇಕ ನಾಯಕರು ಆಸ್ಪತ್ರೆಗಳಿಗೆ ವಿತರಿಸಿದ್ದಾರೆಂದು ಡಾ.ದೀಪಕ್​​ ಸಿಂಗ್ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಕಷ್ಟದ ಸಮಯದಲ್ಲಿ ಜನರು ಔಷಧ ಪಡೆಯದಿದ್ದಾಗ, ಅದು ನಾಯಕರ ಕೈಗೆ ಹೇಗೆ ತಲುಪಿತು. ಹೈಕೋರ್ಟ್​ನಲ್ಲಿ ಈ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಲಾಗಿತ್ತು.

ಇದನ್ನೂ ಓದಿ: ಸ್ಪುಟ್ನಿಕ್​ ಲಸಿಕೆ ಮೊದಲ ಡೋಸ್ ಪಡೆದಿದ್ದು ಯಾರು ಗೊತ್ತಾ?

ಅರ್ಜಿ ಮೇರೆಗೆ ದೆಹಲಿ ಹೈಕೋರ್ಟ್​ ಪೊಲೀಸರಿಗೆ ಇಡೀ ವಿಷಯದ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಸೂಚನೆ ನೀಡಿತು. ಹೀಗಾಗಿ ಯೂತ್ ಕಾಂಗ್ರೆಸ್ ಮುಖಂಡ ಶ್ರೀನಿವಾಸ್​ ಅವರನ್ನ ಪ್ರಶ್ನೆ ಮಾಡಲಾಗಿದೆ. ಬಿಜೆಪಿ ಸಂಸದ ಗೌತಮ್​ ಗಂಭೀರ್​ ಅವರ ಹೇಳಿಕೆಯನ್ನೂ ಶೀಘ್ರದಲ್ಲೇ ದಾಖಲಿಸಲಾಗುವುದು ಎಂದು ತಿಳಿದು ಬಂದಿದೆ.

randeep surjewala
ರಂದೀಪ್ ಸುರ್ಜೇವಾಲ್ ಟ್ವೀಟ್​

ಇದೇ ವಿಚಾರವಾಗಿ ಕಾಂಗ್ರೆಸ್ ವಾಗ್ದಾಳಿ ನಡೆಸಿದ್ದು, ನಮ್ಮ ಮುಖಂಡರಿಗೆ ಬಲವಂತವಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದೆ. ಟ್ವೀಟ್ ಮಾಡಿರುವ ರಂದೀಪ್​ ಸುರ್ಜೇವಾಲ್​, ಜನರಿಗೆ ಸಹಾಯ ಮಾಡುತ್ತಿರುವ ಕಾಂಗ್ರೆಸ್ ಮುಖಂಡರ ಮೇಲೆ ಈ ರೀತಿಯ ಕಿರುಕುಳ ಸರಿಯಲ್ಲ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.