ನವದೆಹಲಿ: ಮಹಿಳಾ ಪತ್ರಕರ್ತೆಯೊಬ್ಬರ ಚಿತ್ರವನ್ನು ಬುಲ್ಲಿ ಬಾಯಿ ಆ್ಯಪ್ನಲ್ಲಿ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ದೆಹಲಿ ಪೊಲೀಸ್ ವಿಶೇಷ ದಳ ಬಂಧಿಸಿದೆ.
ಟ್ವಿಟರ್ ಖಾತೆಯಲ್ಲಿ ಮತ್ತು ಗೇಟ್‌ಹಬ್‌ನಲ್ಲಿ ಬುಲ್ಲಿ ಬಾಯಿ ಹೆಸರಿನಲ್ಲಿ ಖಾತೆ ತೆರದಿದ್ದ ಪ್ರಮುಖ ಆರೋಪಿಯನ್ನು ದೆಹಲಿ ಪೊಲೀಸರ ವಿಶೇಷ ದಳ ಅಸ್ಸೋಂನಲ್ಲಿ ಬಂಧಿಸಿದೆ. ಆತನನ್ನು ನೀರಜ್ ಎಂದು ಗುರುತಿಸಲಾಗಿದೆ. ಪೊಲೀಸ್ ತಂಡ ಆರೋಪಿಯನ್ನು ದೆಹಲಿಗೆ ಕರೆ ತರುತ್ತಿದ್ದು, ನಂತರ ನ್ಯಾಯಾಲಯಕ್ಕೆ ಹಾಜರುಪಡಿಸಲಿದೆ.
ಓದಿ: Bulli Bai App Case: ನನ್ನ ಅಕ್ಕ ನಿರಪರಾಧಿ ಎಂದ ಆರೋಪಿ ಸಹೋದರಿ!
ಮಾಹಿತಿ ಪ್ರಕಾರ, ಕೆಲವು ದಿನಗಳ ಹಿಂದೆ ಬುಲ್ಲಿ ಬಾಯಿ ಹೆಸರಿನ ಟ್ವಿಟರ್ ಹ್ಯಾಂಡಲ್ ರಚಿಸಲಾಗಿತ್ತು. ಇದಲ್ಲದೇ ಗೇಟ್‌ಹಬ್‌ನಲ್ಲಿ ಬುಲ್ಲಿ ಬಾಯಿ ಹೆಸರಿನಲ್ಲಿ ಖಾತೆ ಸೃಷ್ಟಿಸಿ ಮಹಿಳಾ ಪತ್ರಕರ್ತೆಯ ಚಿತ್ರವನ್ನು ಹಾಕಲಾಗಿದೆ. ಈ ಬಗ್ಗೆ ಆಗ್ನೇಯ ಜಿಲ್ಲೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಡೀ ಪ್ರಕರಣವನ್ನು ಸೈಬರ್ ಸೆಲ್ ತನಿಖೆ ನಡೆಸುತ್ತಿದೆ.
ಈ ಪ್ರಕರಣದ ತನಿಖೆ ವೇಳೆ ನೀರಜ್ ಇದರ ಹಿಂದಿನ ಪ್ರಮುಖ ಸಂಚುಕೋರ ಎಂಬ ಮಾಹಿತಿ ದೆಹಲಿ ಪೊಲೀಸರಿಗೆ ತಿಳಿದು ಬಂದಿದೆ. ಈ ಮಾಹಿತಿ ಮೇರೆಗೆ ಪೊಲೀಸರು ಆತನನ್ನು ಅಸ್ಸೋಂನಲ್ಲಿ ಬಂಧಿಸಿ ದೆಹಲಿಗೆ ಕರೆ ತರುತ್ತಿದ್ದಾರೆ.