ETV Bharat / bharat

ಕೌಟುಂಬಿಕ ಕಲಹ ಹಿನ್ನೆಲೆ: ಹೆತ್ತ ತಂದೆ - ತಾಯಿ ಕೊಂದು ಆತ್ಮಹತ್ಯೆ ಮಾಡಿಕೊಂಡ ಹೆಡ್​ ಕಾನ್ಸ್​ಟೇಬಲ್​ - Delhi Police Head Constable Murder His Parents

ಹರಿಯಾಣದ ಸೋನಿಪತ್​​ನಲ್ಲಿ ಹೆತ್ತ ಮಗನೇ ತಂದೆ - ತಾಯಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.

ಕೊಲೆ
murder
author img

By

Published : Feb 8, 2021, 1:49 PM IST

ಸೋನಿಪತ್: ಹೆತ್ತ ಮಗನೇ ತಂದೆ-ತಾಯಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಹರಿಯಾಣದ ಸೋನಿಪತ್​​ನಲ್ಲಿ ಬೆಳೆಕಿಗೆ ಬಂದಿದೆ.

ಹೆತ್ತ ತಂದೆ - ತಾಯಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಹೆಡ್​ ಕಾನ್ಸ್​ಟೇಬಲ್​

ಮಾಟಿಂಡು ಗ್ರಾಮದಲ್ಲಿ ಹೆಡ್​ ಕಾನ್ಸ್​ಟೇಬಲ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದ ದೀಪಕ್​ ಎಂಬಾತ ಹೀನಾಯ ಕೃತ್ಯ ವೆಸಗಿದ್ದಾನೆ. ನಿನ್ನೆ ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ದೀಪಕ್​ ಮತ್ತು ಆತನ ತಂದೆ ರಾಮ್ ಧನ್ ಮತ್ತು ತಾಯಿ ನಡುವೆ ಜಗಳ ನಡೆದಿದೆ. ಈ ವೇಳೆ, ಕೋಪಗೊಂಡ ದೀಪಕ್​​ ಕೊಡಲಿಯಿಂದ ತಂದೆ - ತಾಯಿಯನ್ನು ಕೊಚ್ಚಿ ಕೊಲೆ ಮಾಡಿದ್ದಾನೆ. ಬಳಿಕ ಅವರ ಶವಗಳಿಗೆ ಬೆಂಕಿ ಇಟ್ಟಿದ್ದಾನೆ. ನಂತರ ತಾನು ಕೋಣೆಗೆ ಹೋಗಿ ವಿಷಪೂರಿತ ವಸ್ತುವನ್ನು ತಿಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಓದಿ: ಪಟಾಕಿ ತುಂಬಿದ್ದ ಚಿನ್ನಮ್ಮ ಬೆಂಬಲಿಗರ ಎರಡು ಕಾರುಗಳು ಬೆಂಕಿಗಾಹುತಿ!

ಪ್ರಕರಣ ಸಂಬಂಧ ಡಿಎಸ್ಪಿ ಡಾ.ರವೀಂದ್ರ ಅವರು ಮಾಹಿತಿ ನೀಡಿದ್ದು, ಮಾಟಿಂಡು ಗ್ರಾಮದಲ್ಲಿ ದೀಪಕ್​​ ಹೆಡ್ ಕಾನ್‌ಸ್ಟೆಬಲ್‌ ಆಗಿ ಕೆಲಸ ಮಾಡುತ್ತಿದ್ದನು. ಯಾವುದೋ ಕೌಟುಂಬಿಕ ಕಲಹದಿಂದ ದೀಪಕ್​ ಮತ್ತು ಪೋಷಕರ ನಡುವೆ ಜಗಳ ನಡೆದಿದೆ. ಈ ವೇಳೆ, ದೀಪಕ್​​ ತಂದೆ - ತಾಯಿಯ್ನು ಕೊಲೆ ಮಾಡಿ ಸುಟ್ಟು ಹಾಕಿದ್ದಾನೆ. ಬಳಿಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದನು. ಈತನನ್ನು ಆಸ್ಪತ್ರೆಗೆ ದಾಖಲಿಸಿತಾದರೂ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ ಎಂದರು.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಘಟನೆ ಸಂಬಂಧ ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.