ನವದೆಹಲಿ: ದೇಶದ ನಾನಾ ಕಡೆ ಬಂಧಿಸಲಾಗಿದ್ದ 7 ಮಂದಿ ಶಂಕಿತ ಉಗ್ರರನ್ನು ದೆಹಲಿ ಪೊಲೀಸ್ ಆಯುಕ್ತ ರಾಕೇಶ್ ಅಸ್ಥಾನ ವಿಚಾರಣೆ ನಡೆಸಿದ್ದಾರೆ. ಇದರಲ್ಲಿ ಇಬ್ಬರಾದ ಜೀಷನ್ ಹಾಗೂ ಒಸಾಮಾ ಪಾಕಿಸ್ತಾನಿ ಐಎಸ್ಐನಿಂದ ತರಬೇತಿ ಪಡೆದವರಾಗಿದ್ದಾರೆ.
ತಡರಾತ್ರಿ ಇಲ್ಲಿನ ಲೋಧಿ ಕಾಲೋನಿಯ ವಿಶೇಷ ಕೊಠಡಿಯಲ್ಲಿ ಎಲ್ಲ ಶಂಕಿತ ಉಗ್ರರನ್ನು ವಿಚಾರಣೆ ನಡೆಸಿದ್ದಾರೆ. ಪಾಕ್ ಮಾದರಿಯ ಭಯೋತ್ಪಾದನಾ ಕೃತ್ಯಗಳ ಕುರಿತು ಮಾಹಿತಿ ಪಡೆಯುವ ಉದ್ದೇಶದಿಂದ ರಾತ್ರಿ ಸುಮಾರು 8:45ಕ್ಕೆ ಅಸ್ಥಾನ ವಿಶೇಷ ಸೆಲ್ ತಲುಪಿದ್ದರು. ಈ ವೇಳೆ, ಎಲ್ಲಾ ಶಂಕಿತರ ಕುರಿತು ಮಾಹಿತಿ ಸಂಗ್ರಹಿಸಿದ್ದಲ್ಲದೇ ಅವರ ವಿಚಾರಣೆ ನಡೆಸಿದ್ದಾರೆ.
ರಾಕೇಶ್ ಅಸ್ಥಾನ ಅವರೊಂದಿಗೆ ವಿಶೇಷ ಆಯುಕ್ತ ನೀರಜ್ ಠಾಕೂರ್ ಮತ್ತು ವಿಶೇಷ ದಳ ಡಿಸಿಪಿ ಪ್ರಮೋದ್ ಕುಶ್ವಾಹ್ ಶಂಕಿತ ಉಗ್ರರನ್ನು ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ದೇಶದ ಪ್ರಮುಖ ನಗರಗಳಲ್ಲಿ ವಿದ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಹಿನ್ನೆಲೆ ವಿವಿಧ ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿದ್ದ ವಿಶೇಷ ಪೊಲೀಸ್ ಪಡೆ 7 ಮಂದಿ ಶಂಕಿತರನ್ನು ಬಂಧಿಸಿದ್ದರು.
ಇದನ್ನೂ ಓದಿ: ಪೊಲೀಸ್ ಠಾಣೆಯಲ್ಲೇ ನಿಗೂಢ ಸ್ಫೋಟ: ಗೋಡೆ, ಛಾವಣಿಗೆ ಹಾನಿ