ETV Bharat / bharat

ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ: ವಿದೇಶಿ ಮಹಿಳೆಯರು ಸೇರಿದಂತೆ ಕೆಲವರ ಬಂಧನ - ಸೆಕ್ಸ್​ ರ್ಯಾಕೆಟ್

ತನಿಖೆಯ ಭಾಗವಾಗಿ, ಪೊಲೀಸರು ತಮ್ಮದೇ ವ್ಯಕ್ತಿಯೊಬ್ಬನನ್ನು ಗ್ರಾಹಕನ ಸೋಗಿನಲ್ಲಿ ಸ್ಪಾಗೆ ಕಳುಹಿಸಿದ್ದರು. ಸ್ಪಾ ನಲ್ಲಿದ್ದ ಅಯಾನ್ ಎಂಬ ವ್ಯಕ್ತಿ ಮಸಾಜ್ ಮಾಡಲು 1000 ರೂಪಾಯಿ ಚಾರ್ಜ್ ಅಗುತ್ತೆ ಎಂದು ಹೇಳಿ, ಯುವತಿಯೊಂದಿಗೆ ಆತನನ್ನು ಕ್ಯಾಬಿನ್​ಗೆ ಕಳುಹಿಸಿದ್ದ.

dl_ndl_01_delhi police_busted_sex racket_in delhi_7201351

author img

By

Published : Jul 23, 2022, 6:29 PM IST

ನವದೆಹಲಿ: ಇಲ್ಲಿನ ದಯಾನಂದ ವಿಹಾರ್‌ ಪ್ರದೇಶದಲ್ಲಿ ಸ್ಪಾ ಮತ್ತು ಮಸಾಜ್ ಸೆಂಟರ್ ಸೋಗಿನಲ್ಲಿ ನಡೆಸಲಾಗುತ್ತಿದ್ದ ಸೆಕ್ಸ್ ರಾಕೆಟ್ ಅನ್ನು ದೆಹಲಿ ಪೊಲೀಸರು ಭೇದಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶಿ ಮಹಿಳೆಯರು ಸೇರಿದಂತೆ ಕೆಲವರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ದೆಹಲಿಯ ದಯಾನಂದ ವಿಹಾರ್‌ನಲ್ಲಿರುವ ಸ್ಪಾ ಮತ್ತು ಮಸಾಜ್ ಸೆಂಟರ್​ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಬಗ್ಗೆ ಜುಲೈ 21 ರಂದು ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಈ ಸುಳಿವಿನ ಮೇರೆಗೆ ತನಿಖೆಗಾಗಿ ತಂಡವೊಂದನ್ನು ರಚಿಸಲಾಗಿತ್ತು.

ತನಿಖೆಯ ಭಾಗವಾಗಿ, ಪೊಲೀಸರು ತಮ್ಮದೇ ವ್ಯಕ್ತಿಯೊಬ್ಬನನ್ನು ಗ್ರಾಹಕನ ಸೋಗಿನಲ್ಲಿ ಸ್ಪಾಗೆ ಕಳುಹಿಸಿದ್ದರು. ಸ್ಪಾ ನಲ್ಲಿದ್ದ ಅಯಾನ್ ಎಂಬ ವ್ಯಕ್ತಿ ಮಸಾಜ್ ಮಾಡಲು 1000 ರೂಪಾಯಿ ಚಾರ್ಜ್ ಅಗುತ್ತೆ ಎಂದು ಹೇಳಿ, ಯುವತಿಯೊಂದಿಗೆ ಆತನನ್ನು ಕ್ಯಾಬಿನ್​ಗೆ ಕಳುಹಿಸಿದ್ದ. ಇನ್ನೂ ಸಾವಿರ ರೂಪಾಯಿ ನೀಡಿದರೆ ತನ್ನೊಂದಿಗೆ ಸೆಕ್ಸ್​ ಮಾಡಬಹುದು ಎಂದು ಯುವತಿ ಆಫರ್ ನೀಡಿದ್ದಳು. ಈ ಸಂದರ್ಭದಲ್ಲಿ ಗ್ರಾಹಕ ಪೊಲೀಸರಿಗೆ ಮಿಸ್ಡ್ ಕಾಲ್ ಮೂಲಕ ಮಾಹಿತಿ ನೀಡಿದ್ದ.

ಈ ಹಿನ್ನೆಲೆಯಲ್ಲಿ ಸ್ಥಳದ ಮೇಲೆ ದಾಳಿ ನಡೆಸಿ ಕೆಲವರನ್ನು ವಶಕ್ಕೆ ಪಡೆಯಲಾಯಿತು. ಸ್ಪಾ ಪರವಾನಗಿ ಅವಧಿ ಮುಗಿದಿರುವುದು ಕೂಡ ತನಿಖೆಯ ಸಮಯದಲ್ಲಿ ಕಂಡುಬಂದಿದೆ.

ಇದನ್ನು ಓದಿ:ಫೇಸ್​ಬುಕ್​ ಪ್ರೇಮ: ಹುಡುಗನ ಹೆಸರಲ್ಲಿ ಪ್ರೀತಿ ನಾಟಕವಾಡಿದ ಮಂಗಳಮುಖಿ ಅರೆಸ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.