ETV Bharat / bharat

ಸಿಗರೇಟ್​ ಕೊಳ್ಳಲು 10 ರೂ ನೀಡದ ಬಾಲಕನನ್ನ ಹತ್ಯೆ ಮಾಡಿದ ನಾಲ್ವರು

author img

By

Published : Jun 8, 2022, 10:20 AM IST

ಕೇವಲ 10 ರೂಪಾಯಿಗೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.

Delhi man stabbed to death
Delhi man stabbed to death

ನವದೆಹಲಿ: ಸಿಗರೇಟ್​ ಕೊಳ್ಳಲು ಬಾಲಕನೊಬ್ಬ 10 ರೂಪಾಯಿ ನೀಡಲಿಲ್ಲ ಎಂಬ ಕಾರಣಕ್ಕಾಗಿ ಆತನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ, ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಕಳೆದ ಜೂನ್​ 6ರಂದು ಈ ಪ್ರಕರಣ ನಡೆದಿದ್ದು, ಕೃತ್ಯಕ್ಕೆ ಸಂಬಂಧಿಸಿದಂತೆ ಎಲ್ಲ ಆರೋಪಿಗಳ ಬಂಧನ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ದೆಹಲಿಯ ಆನಂದ್​ ಪರ್ಬಾತ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಬಾಲಕನೊಬ್ಬನ ಬಳಿ ಸಿಗರೇಟ್​ಗೋಸ್ಕರ 10 ರೂಪಾಯಿ ಕೇಳಿದ್ದಾರೆ. ಬಾಲಕ ಹಣ ನೀಡದಿದ್ದಾಗ, ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಮೃತ ಬಾಲಕನನ್ನ ವಿಜಯ್​ ಎಂದು ಗುರುತಿಸಲಾಗಿದ್ದು, ಆರೋಪಿಗಳನ್ನ ರವಿ, ಜತಿನ್, ಸೋನು ಕುಮಾರ್ ಮತ್ತು ಅಜಯ್ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಭಾರತದಲ್ಲಿ ಮತ್ತಷ್ಟು ಹೆಚ್ಚಾಯ್ತು ಕೋವಿಡ್​.. 5,233 ಹೊಸ ಪ್ರಕರಣ ದಾಖಲು

ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್​ 302ರ ಅಡಿ ಪ್ರಕರಣ ದಾಖಲಾಗಿದ್ದು, ಎಲ್ಲ ಆರೋಪಿಗಳ ಬಂಧನ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಕನ ಮರಣೋತ್ತರ ಪರೀಕ್ಷೆ ನಡೆಸಿ, ಮೃತದೇಹವನ್ನ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. ಘಟನಾ ಸ್ಥಳದಲ್ಲಿನ ಸಿಸಿಟಿವಿ ಆಧಾರದ ಮೇಲೆ ನಾಲ್ವರು ಆರೋಪಿಗಳ ಬಂಧಿಸಿರುವುದಾಗಿ ದೆಹಲಿ ಸೆಂಟ್ರಲ್ ಡಿಸಿಪಿ ಶ್ವೇತಾ ಚೌಹಾಣ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.