ನವದೆಹಲಿ: 5ಜಿ ತಂತ್ರಜ್ಞಾನ ಅಳವಡಿಕೆ ವಿರುದ್ಧ ಸಲ್ಲಿಸಿದ್ದ ಅರ್ಜಿಯನ್ನು ರದ್ದು ಮಾಡಿದ್ದ ದೆಹಲಿ ಕೋರ್ಟ್ ಏಕಸದಸ್ಯ ಪೀಠದ ಆದೇಶದ ವಿರುದ್ಧ ನಟಿ ಜೂಹಿ ಚಾವ್ಲಾ ಮೇಲ್ಮನವಿ ಸಲ್ಲಿಸಿದ್ದು, ಅರ್ಜಿಯ ವಿಚಾರಣೆಯನ್ನು ವಿಭಾಗೀಯ ಪೀಠ ಜನವರಿ 25 ಕ್ಕೆ ಮುಂದೂಡಿದೆ.
ನಟಿ ಜೂಹಿ ಚಾವ್ಲಾರ ಅರ್ಜಿಯ ಪರವಾಗಿ ವಕೀಲ ಸಲ್ಮಾನ್ ಖುರ್ಷಿದ್ ವಾದ ಮಂಡಿಸಿ, 5 ಜಿ ತಂತ್ರಜ್ಞಾನ ಅಳವಡಿಕೆಯಿಂದ ಮಾನವನ ಮೇಲಾಗುವ ಪರಿಣಾಮಗಳ ಕುರಿತು ನಟಿ ಅರ್ಜಿ ಸಲ್ಲಿಸಿದ್ದರು. ಆದರೆ, ಇದು ಕೇವಲ ಪ್ರಚಾರಕ್ಕಾಗಿ ಹಾಕಿದ ಅರ್ಜಿಯಾಗಿದೆ ಎಂದು ಅರ್ಜಿ ತಿರಸ್ಕರಿಸಿ, 20 ಲಕ್ಷ ದಂಡವನ್ನು ಏಕಸದಸ್ಯ ಪೀಠ ವಿಧಿಸಿದೆ. ಕೋರ್ಟ್ಗೆ ದಂಡದ ಶುಲ್ಕವನ್ನು ಪಾವತಿಸಲು ಸೂಚಿಸಿದೆ ಎಂದು ಕೋರ್ಟ್ಗೆ ತಿಳಿಸಿದರು.
ಇದನ್ನೂ ಓದಿ: ಚಿನ್ನದ ಬೆಲೆಯಲ್ಲಿ 140 ರೂ. ಏರಿಕೆ: ಗ್ರಾಹಕರಿಕೆ ಶಾಕ್
ಬಳಿಕ ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ಜಸ್ಮೀತ್ ಸಿಂಗ್ ಅವರಿದ್ದ ಪೀಠ ಅರ್ಜಿಯ ಹೆಚ್ಚಿನ ವಿಚಾರಣೆಗಾಗಿ ಜನವರಿ 25 ರಂದು ಗಡುವು ನೀಡಿ ಮುಂದೂಡಿದೆ.