ETV Bharat / bharat

CCI ಗೌಪ್ಯ ವರದಿ ಸೋರಿಕೆ ವಿರುದ್ಧ ದೆಹಲಿ ಹೈಕೋರ್ಟ್​ಗೆ ಗೂಗಲ್ ಅರ್ಜಿ: ಇಂದು ವಿಚಾರಣೆ

author img

By

Published : Sep 24, 2021, 11:46 AM IST

ಸಿಸಿಐ ನಡೆಸಿದ ತನಿಖೆಯ ಗೌಪ್ಯ ವರದಿ ಸೋರಿಕೆ ವಿರುದ್ಧ ಗೂಗಲ್ ಸಲ್ಲಿಸಿರುವ ಅರ್ಜಿಯನ್ನು ದೆಹಲಿ ಹೈಕೋರ್ಟ್ ಇಂದು ವಿಚಾರಣೆ ನಡೆಸಲಿದೆ.

Google
Google

ನವದೆಹಲಿ: ಭಾರತದ ಸ್ಪರ್ಧಾತ್ಮಕ ಆಯೋಗ (ಸಿಸಿಐ) ನಡೆಸಿದ ತನಿಖೆಯ ಗೌಪ್ಯ ವರದಿ ಸೋರಿಕೆ ವಿರುದ್ಧ ಗೂಗಲ್ ಸಲ್ಲಿಸಿರುವ ಅರ್ಜಿಯನ್ನು ದೆಹಲಿ ಹೈಕೋರ್ಟ್ ಇಂದು ವಿಚಾರಣೆ ನಡೆಸಲಿದೆ. ನ್ಯಾಯಮೂರ್ತಿ ರೇಖಾ ಪಲ್ಲಿ ಅವರ ಪೀಠವು ಈ ಪ್ರಕರಣದ ವಿಚಾರಣೆ ನಡೆಸಲಿದೆ.

ಅರ್ಜಿ ಪ್ರಕಾರ, ಸೆಪ್ಟೆಂಬರ್ 18 ರಂದು, ಗೂಗಲ್‌ನ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಫೋನ್‌ಗೆ ಸಂಬಂಧಿಸಿದ ಒಪ್ಪಂದದ ಕುರಿತು ಸ್ಪರ್ಧಾತ್ಮಕ ಆಯೋಗದ ಮಹಾನಿರ್ದೇಶಕರ ಕಚೇರಿಗೆ ಮಧ್ಯಂತರ ಗೌಪ್ಯ ವರದಿ ಸಲ್ಲಿಸಲಾಯಿತು. ಆದರೆ, ವರದಿಯನ್ನು ಗೂಗಲ್ ಸ್ವೀಕರಿಸಲಿಲ್ಲ. ಮಾಧ್ಯಮಗಳಲ್ಲಿ ಆ ವರದಿ ಸೋರಿಕೆಯಾಗಿತ್ತು.

ಮಾಧ್ಯಮಗಳಿಗೆ ಗೌಪ್ಯ ವರದಿಗಳನ್ನು ಸೋರಿಕೆ ಮಾಡುವ ಮೂಲಕ ಗೂಗಲ್ ಮತ್ತು ಅದರ ಪಾಲುದಾರರಿಗೆ ಹಾನಿ ಮಾಡುವ ಪ್ರಯತ್ನ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಇಂತಹ ವರದಿಗಳನ್ನು ರಕ್ಷಿಸುವುದು ತನಿಖಾ ಸಂಸ್ಥೆಗಳ ಜವಾಬ್ದಾರಿ ಎಂದು ಗೂಗಲ್ ಹೇಳಿದೆ.

ಇದನ್ನೂ ಓದಿ: ಮತ್ತೊಬ್ಬನ ಜೊತೆ ಸಂಬಂಧ: ಪ್ರಿಯಕರನ ಕೊಲೆಗೆ ಸುಪಾರಿ ಕೊಟ್ಟ ಪ್ರಿಯತಮೆ

ಈ ವಿಷಯದಲ್ಲಿ ಪರಿಹಾರ ಕೋರಿ ಗೂಗಲ್, ದೆಹಲಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿತು. ಕಳೆದ ವಾರ, ಸಿಸಿಐನ ತನಿಖಾ ವಿಭಾಗ, ಡೈರೆಕ್ಟರ್ - ಜನರಲ್ (ಡಿಜಿ), ಆಂಡ್ರಾಯ್ಡ್‌ಗೆ ಸಂಬಂಧಿಸಿದಂತೆ ಗೂಗಲ್ ಅನ್ಯಾಯದ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದೆ ಎಂದು ವರದಿಗಳು ತಿಳಿಸಿವೆ. ಸ್ಪರ್ಧಾತ್ಮಕ ನಿಯಮಗಳ ಉಲ್ಲಂಘನೆಯ ಆರೋಪ ಕಂಡುಕೊಂಡ ನಂತರ, 2019 ರ ಆರಂಭದಲ್ಲಿ ಸಿಸಿಐ - ಗೂಗಲ್ ವಿರುದ್ಧ ಈ ಬಗ್ಗೆ ವಿವರವಾದ ತನಿಖೆಗೆ ಆದೇಶಿಸಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.