ETV Bharat / bharat

ದೆಹಲಿಯಲ್ಲಿ ಆಕ್ಸಿಜನ್, ರೆಮ್​ಡಿಸಿವಿರ್ ಕೊರತೆ: ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ತರಾಟೆ

author img

By

Published : Apr 27, 2021, 4:29 PM IST

ಆಕ್ಸಿಜನ್ ಮತ್ತು ಹಾಸಿಗೆ ರೋಗಿಗಳಿಗೆ ಅತಿ ಮುಖ್ಯವಾಗಿದ್ದು, ಇವರೆಡೂ ಇಲ್ಲದಿದ್ದರೆ ರೋಗಿಗಳು ಔಷಧವನ್ನು ಹೇಗೆ ಪಡೆಯಲು ಸಾಧ್ಯ? ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಪ್ರಶ್ನಿಸಿದೆ.

Delhi Govt's counsel
ನವದೆಹಲಿಯಲ್ಲಿ ಆಕ್ಸಿಜನ್, ರೆಮ್ಡಿಸಿವಿರ್ ಕೊರತೆ: ಹೈಕೋರ್ಟ್ ತರಾಟೆ

ನವದೆಹಲಿ: ಆಕ್ಸಿಜನ್ ಸಿಲಿಂಡರ್​ಗಳ ಕೊರತೆಯನ್ನು ರಾಷ್ಟ್ರ ರಾಜಧಾನಿ ಎದುರಿಸುತ್ತಿದ್ದು, ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿವೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಕ್ರಮ ಕೈಗೊಳ್ಳುವಂತೆ ದೆಹಲಿ ಹೈಕೋರ್ಟ್ ಸೂಚನೆ ನೀಡಿದೆ.

ರೆಮ್​ಡಿಸಿವಿರ್ ಔಷಧದ ಕೊರತೆಯ ಬಗ್ಗೆಯೂ ದೆಹಲಿ ಹೈಕೋರ್ಟ್​ ಅಸಮಾಧಾನ ವ್ಯಕ್ತಪಡಿಸಿದ್ದು, ಕೋವಿಡ್ ಸೋಂಕಿತರಿಗೆ ಅತಿ ಹೆಚ್ಚು ಬಳಸಲ್ಪಡುವ ಈ ಔಷಧದ ಕೊರತೆಗೆ ಕಾರಣವೇನು ಎಂದು ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರವನ್ನು ಪ್ರಶ್ನಿಸಿದೆ.

ಆಕ್ಸಿಜನ್ ಮತ್ತು ಹಾಸಿಗೆ ರೋಗಿಗಳಿಗೆ ಅತಿ ಹೆಚ್ಚು ಮುಖ್ಯವಾಗಿದ್ದು, ಇವರೆಡೂ ಇಲ್ಲದಿದ್ದರೆ ರೋಗಿಗಳು ಔಷಧವನ್ನು ಹೇಗೆ ಪಡೆಯಲು ಸಾಧ್ಯ? ಎಂದು ಕೇಂದ್ರ ಸರ್ಕಾರವನ್ನು ದೆಹಲಿ ಹೈಕೋರ್ಟ್ ಪ್ರಶ್ನೆ ಮಾಡಿದೆ.

ದೆಹಲಿಯಲ್ಲಿ ಈ ಔಷಧ ಸಮಸ್ಯೆಗೆ ಕಾರಣವೇನು ಎಂಬುದನ್ನು ತಿಳಿಸಿಕೊಡಬೇಕೆಂದು ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಅವರು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದ ಓರ್ವ ಪ್ರತಿನಿಧಿ ಮತ್ತು ಆರೋಗ್ಯ ಇಲಾಖೆಗೆ ಸೂಚನೆ ನೀಡಿದೆ.

ಇದನ್ನೂ ಓದಿ: ಉಚಿತವಾಗಿ ಕೊರೊನಾ ಲಸಿಕೆ ನೀಡುವುದಾಗಿ ಘೋಷಿಸಿದ 24 ರಾಜ್ಯಗಳು

ಇದೇ ರೀತಿಯ ಸೂಚನೆಯನ್ನು ದೆಹಲಿ ಸರ್ಕಾರದ ಪರವಾಗಿ ಭಾಗವಹಿಸಿದ್ದ ಹೆಚ್ಚುವರಿ ಸ್ಥಾಯಿ ಕೌನ್ಸೆಲ್​ ಅನೂಜ್ ಅಗರವಾಲ್ ಅವರಿಗೂ ಕೂಡಾ ದೆಹಲಿಯ ಹೈಕೋರ್ಟ್​ ನೀಡಿದ್ದು, ಇಡೀ ನಗರ ಔಷಧವಿಲ್ಲದೇ ಕಂಗಾಲಾಗಿದೆ ಎಂದು ಉಲ್ಲೇಖಿಸಿದೆ.

ಇದಕ್ಕೆ ಉತ್ತರ ನೀಡಿದ ಅನೂಜ್ ಅಗರವಾಲ್ ದೆಹಲಿಯಲ್ಲಿ ಔಷಧ ಉತ್ಪಾದನೆಗೆ ಸೌಲಭ್ಯಗಳಿಲ್ಲ. ಬೇಡಿಕೆಗೆ ತಕ್ಕಂತೆ ಬೇರೆ ರಾಜ್ಯಗಳಿಂದ ಔಷಧವನ್ನು ಆಮದು ಮಾಡಿಕೊಳ್ಳಲಾಗುತ್ತಿದೆ ಎಂದಿದ್ದಾರೆ.

ಇದರ ಜೊತೆಗೆ ಫೆಬ್ರವರಿಯಲ್ಲಿ ಅತಿ ದೊಡ್ಡಮೊತ್ತದ ಔಷಧ ತನ್ನ ಬಳಕೆಯ ಅವಧಿಯನ್ನು ಕಳೆದುಕೊಂಡಿದೆ. ಈ ಔಷಧಿ ಈಗ ತನ್ನ ಸಾಮರ್ಥ್ಯ ಕಳೆದುಕೊಂಡಿದೆ ಎಂದಿದ್ದಾರೆ.

ದೆಹಲಿ ಪರವಾಗಿ ರಾಹುಲ್ ಮೆಹ್ರಾ ಕೂಡಾ ಭಾಗವಹಿಸಿದ್ದು, ಸರ್ಕಾರ ಸಂಜೆಯ ಒಳಗೆ ಕ್ರಮ ತೆಗೆದುಕೊಳ್ಳತ್ತದೆ. ಈ ಸಂಬಂಧ ನಾವು ಅಧಿಕಾರಿಗಳಿಗೆ ಕಾರಣಕೇಳಿ ನೋಟಿಸ್ ಕೂಡಾ ಜಾರಿ ಮಾಡುತ್ತೇವೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.