ETV Bharat / bharat

ಕುಂಭಮೇಳದಿಂದ ಹಿಂದಿರುಗಿದವರಿಗೆ 14 ದಿನಗಳ ಕ್ವಾರಂಟೈನ್ ಕಡ್ಡಾಯ: ದೆಹಲಿ ಸರ್ಕಾರ

ಕುಂಭಮೇಳಕ್ಕೆ ಭೇಟಿ ನೀಡಿದ ದೆಹಲಿಯ ನಿವಾಸಿಗಳು ತಮ್ಮ ವಿವರಗಳನ್ನು ನೀಡಿ, ಕಡ್ಡಾಯವಾಗಿ ತಮ್ಮ ಮನೆಗಳಲ್ಲಿ 14 ದಿನಗಳ ಕಾಲ ಕ್ವಾರಂಟೈನ್​​ಗೆ ಒಳಪಡಬೇಕೆಂದು ದೆಹಲಿ ಸರ್ಕಾರ ಆದೇಶ ಹೊರಡಿಸಿದೆ.

Kumbh
ಕುಂಭಮೇಳ
author img

By

Published : Apr 18, 2021, 10:07 AM IST

ನವದೆಹಲಿ: ಹರಿದ್ವಾರದ ಕುಂಭಮೇಳದಲ್ಲಿ ಭಾಗವಹಿಸಿ ರಾಷ್ಟ್ರ ರಾಜಧಾನಿಗೆ ಹಿಂದಿರುಗಿದವರು ಕಡ್ಡಾಯವಾಗಿ ತಮ್ಮ ಮನೆಗಳಲ್ಲಿ 14 ದಿನಗಳ ಕಾಲ ಕ್ವಾರಂಟೈನ್​​ಗೆ ಒಳಪಡಲೇಬೇಕು ಎಂದು ದೆಹಲಿ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ಏಪ್ರಿಲ್ 4 ರಿಂದ ಏಪ್ರಿಲ್ 17 ರ ನಡುವೆ ಕುಂಭಮೇಳಕ್ಕೆ ಭೇಟಿ ನೀಡಿದ ದೆಹಲಿಯ ನಿವಾಸಿಗಳು ತಮ್ಮ ವಿವರಗಳನ್ನು ದೆಹಲಿ ಸರ್ಕಾರದ ವೆಬ್‌ಸೈಟ್‌ನಲ್ಲಿ ಒದಗಿಸಿರುವ ಲಿಂಕ್‌ನಲ್ಲಿ 24 ಗಂಟೆಗಳ ಒಳಗಾಗಿ ಅಪ್‌ಲೋಡ್ ಮಾಡಬೇಕು. 14 ದಿನಗಳ ಕಾಲ ಕ್ವಾರಂಟೈನ್​​ಗೆ ಒಳಪಡಬೇಕು. ಆದೇಶ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ದೆಹಲಿ ಮುಖ್ಯ ಕಾರ್ಯದರ್ಶಿ ವಿಜಯ್ ದೇವ್ ಅವರು ಹೊರಡಿಸುವ ಆದೇಶದಲ್ಲಿ ತಿಳಿಸಲಾಗಿದೆ.

Kumbh
ದೆಹಲಿ ಸರ್ಕಾರದ ಆದೇಶ ಪ್ರತಿ

ಕುಂಭಮೇಳಕ್ಕೆ ಭೇಟಿದ ನೀಡಿದವರು ತಮ್ಮ ಮಾಹಿತಿಯನ್ನು ಅಪ್‌ಲೋಡ್ ಮಾಡಲು ವಿಫಲವಾದರೆ, ಅವರನ್ನು ಎರಡು ವಾರಗಳವರೆಗೆ ಕ್ವಾರಂಟೈನ್​ ಕೇಂದ್ರಗಳಲ್ಲಿ ಇರಿಸಲಾಗುತ್ತದೆ ಎಂದು ವಿಜಯ್ ದೇವ್ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಹರಿದ್ವಾರ ಕುಂಭಮೇಳ ಮೊಟಕು: ನಮೋ ಕರೆಗೆ ಸ್ಪಂದಿಸಿದ ಅವಧೇಶಾನಂದ ಸ್ವಾಮೀಜಿ!

ಉತ್ತರಾಖಂಡದ ಹರಿದ್ವಾರದಲ್ಲಿ ನಡೆದ ಕುಂಭಮೇಳದಲ್ಲಿ ಲಕ್ಷಾಂತರ ಜನರು ಭಾಗವಹಿಸಿದ್ದು, ಈಗಾಗಲೇ 1,700ಕ್ಕೂ ಹೆಚ್ಚು ಮಂದಿಯ ಕೊರೊನಾ ವರದಿ ಪಾಸಿಟಿವ್​ ಬಂದಿದೆ. ಕೋವಿಡ್​ ನಿಯಮಗಳನ್ನು ಭಕ್ತರು ಗಾಳಿಗೆ ತೂರಿದ್ದಕ್ಕೆ ಎಲ್ಲೆಡೆ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಸಾಂಕೇತಿಕ ಕುಂಭಮೇಳ ನಡೆಸಲು ಹಿಂದೂ ಆಚಾರ್ಯ ಸಭಾದ ಅಧ್ಯಕ್ಷ ಸ್ವಾಮಿ ಅವಧೇಶಾನಂದ ಗಿರಿ ಅವರಲ್ಲಿ ಮನವಿ ಮಾಡಿದ್ದರು. ಪ್ರಧಾನಿ ಮನವಿಗೆ ಸ್ಪಂದಿಸಿದ ಸ್ವಾಮೀಜಿ ನಿನ್ನೆ ಕುಂಭಮೇಳ ಮೊಟಕುಗೊಳಿಸಿ ಮಹತ್ವದ ಆದೇಶ ಹೊರಡಿಸಿದ್ದರು.

ಶನಿವಾರ ಬಿಡುಗಡೆಯಾಗಿದ್ದ ಕೋವಿಡ್​ ವರದಿಯಲ್ಲಿ ದೆಹಲಿಯಲ್ಲಿ ಹೊಸದಾಗಿ 24,374 ಮಂದಿಗೆ ಸೋಂಕು ಅಂಟಿತ್ತು. 70,000 ಕೇಸ್​ಗಳು ಇನ್ನೂ ಸಕ್ರಿಯವಾಗಿವೆ. ದೆಹಲಿಯಲ್ಲಿ ಕೊರೊನಾ ನಿಯಂತ್ರಿಸಲು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.