ETV Bharat / bharat

ಬಾಲಕಿ ಮೇಲೆ ಅತ್ಯಾಚಾರ ಆರೋಪ: ಸರ್ಕಾರಿ ಅಧಿಕಾರಿ ವಿರುದ್ಧ ಪ್ರಕರಣ ದಾಖಲು

Accused of raping a minor girl: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಆರೋಪದ ಹಿನ್ನೆಲೆ ದೆಹಲಿ ಸರ್ಕಾರಿ ಅಧಿಕಾರಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Delhi government official booked for raping minor
ಬಾಲಕಿಯ ಮೇಲೆ ಅತ್ಯಾಚಾರ ಆರೋಪ: ದೆಹಲಿ ಸರ್ಕಾರಿ ಅಧಿಕಾರಿ ವಿರುದ್ಧ ಪ್ರಕರಣ ದಾಖಲು
author img

By

Published : Aug 21, 2023, 12:33 PM IST

ನವದೆಹಲಿ: ದೆಹಲಿ ಸರ್ಕಾರಿ ಅಧಿಕಾರಿಯೊಬ್ಬರು ತನ್ನ ಮೃತ ಸ್ನೇಹಿತನ ಅಪ್ರಾಪ್ತ ಪುತ್ರಿಯ ಮೇಲೆ ಹಲವು ತಿಂಗಳುಗಳ ಕಾಲ ಅತ್ಯಾಚಾರವೆಸಗಿರುವ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

2020 ಮತ್ತು 2021ರ ನಡುವೆ ಅತ್ಯಾಚಾರದ ಪ್ರಕರಣ ನಡೆದಿದೆ ಎನ್ನಾಗಿದೆ. ಬುರಾರಿ ಪೊಲೀಸ್ ಠಾಣೆಯಲ್ಲಿ ಅಧಿಕಾರಿಯ ವಿರುದ್ಧ ಭಾರತೀಯ ದಂಡ ಸಂಹಿತೆ (IPC) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಅಡಿ ಅಧಿಕಾರಿಯ ವಿರುದ್ಧ ಆಗಸ್ಟ್ 13 ರಂದು ಎಫ್‌ಐಆರ್ ದಾಖಲಿಸಲಾಗಿದೆ.

ದೂರುದಾರರ ಪ್ರಕಾರ, ಆರೋಪಿಯು 2020 ಮತ್ತು 2021ರ ನಡುವೆ ಹಲವಾರು ತಿಂಗಳುಗಳ ಕಾಲ ತನ್ನ ಮೇಲೆ ಲೈಂಗಿಕ ಕಿರುಕುಳ, ದೈಹಿಕ ಕಿರುಕುಳ ಮತ್ತು ಪದೇ ಪದೇ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ಸಂತ್ರಸ್ತೆ ತಿಳಿಸಿದ್ದಾರೆ.

ಪೊಲೀಸರು ಹೇಳಿದ್ದೇನು?: ಪೊಲೀಸರ ಪ್ರಕಾರ, ''ಸರ್ಕಾರಿ ಉದ್ಯೋಗಿಯಾಗಿದ್ದ ತನ್ನ ತಂದೆಯ ಸಾವಿನ ನಂತರ, ಅಪ್ರಾಪ್ತ ಬಾಲಕಿ ಅಕ್ಟೋಬರ್ 2020 ರಿಂದ ಫೆಬ್ರವರಿ 2021 ರವರೆಗೆ ಬುರಾರಿಯಲ್ಲಿ ಆರೋಪಿಯೊಂದಿಗೆ ವಾಸಿಸಲು ಪ್ರಾರಂಭಿಸಿದಳು. ಬಾಲಕಿಯು ಆತಂಕಕ್ಕೆ ಒಳಗಾಗಿದ್ದಾಳೆ. ಇದರ ಹಿನ್ನೆಲೆ ಒಂದು ವಾರದ ಹಿಂದೆ, ಆಸ್ಪತ್ರೆಗೆ ದಾಖಲಾಗಿದ್ದಳು. ವ್ಯಾಪಕವಾದ ಮಾನಸಿಕ ಸಮಾಲೋಚನೆ ನಡೆಸಿದ ನಂತರ, ಆರೋಪಿಯಿಂದ ಲೈಂಗಿಕ ಕಿರುಕುಳವನ್ನು ಅನುಭವಿಸಿರುವ ಕುರಿತು ಬಾಲಕಿಯು ವೈದ್ಯರು, ಸಲಹೆಗಾರರು ಹಾಗೂ ಪೊಲೀಸ್ ಅಧಿಕಾರಿಗಳಿಗೆ ಬಹಿರಂಗಪಡಿಸಿದ್ದಾರೆ" ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ತನಿಖೆ ಆರಂಭ: ಅಪ್ರಾಪ್ತೆ ಗರ್ಭಿಣಿಯಾಗಿದ್ದಳು. ಆರೋಪಿಯ ಪತ್ನಿ ಬಾಲಕಿಗೆ ಗರ್ಭಪಾತ ಮಾಡಿಸಿಕೊಳ್ಳುವಂತೆ ಬಲವಂತಪಡಿಸುತ್ತಿದ್ದರು ಎಂಬ ಆತಂಕಕಾರಿಯಾದ ವಿಷಯವನ್ನು ಬಾಲಕಿ ಬಹಿರಂಗಪಡಿಸಿದಳು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಅಪ್ರಾಪ್ತ ವಯಸ್ಸಿನ ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆಯನ್ನು ನಡೆಸಲಾಗಿದೆ. ಈ ಪ್ರಕರಣದ ಕುರಿತು ತನಿಖೆ ನಡೆಯುತ್ತಿದೆ.

ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ಆರೋಪ- ಪ್ರತ್ಯೇಕ ಕೇಸ್​ಗಳಡಿ ಆರೋಪಿಗಳಿಬ್ಬರ ಸೆರೆ: ಡಾರ್ಜಿಲಿಂಗ್ ಜಿಲ್ಲೆಯ ಎರಡು ಪ್ರದೇಶಗಳಲ್ಲಿ ಅತ್ಯಾಚಾರದ ಪ್ರತ್ಯೇಕ ಆರೋಪಗಳಿಗೆ ದೂರು ಇತ್ತೀಚೆಗೆ ಎರಡು ಪ್ರಕರಣಗಳು ದಾಖಲಾಗಿದ್ದವು. ಘಟನೆಯೊಂದು ಸಿಲಿಗುರಿಯ ಸಮೀಪದ ಖರಿಬರಿ ಬ್ಲಾಕ್‌ನ ಹಳ್ಳಿಯಲ್ಲಿ ಜರುಗಿತ್ತು. ಇನ್ನೊಂದು ಸಿಲಿಗುರಿ ಪಟ್ಟಣದಲ್ಲಿ ನಡೆದಿತ್ತು. ಈ ಎರಡೂ ಪ್ರಕರಣಗಳು ದಾಖಲಾಗಿದ್ದ ದೂರಿನ ಆಧಾರದ ಮೇಲೆ ಪೊಲೀಸರು ಇಬ್ಬರು ಆರೋಗಳನ್ನು ಬಂಧಿಸಿದ್ದರು. ಸಂತ್ರಸ್ತರ ಇಬ್ಬರು ಪೋಷಕರು ದಿನಗೂಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಆರೋಪಿ ಯುವಕ ಮನೆಗೆ ಬಂದು ಬಾಲಕಿಗೆ ಮೊಬೈಲ್‌ ಫೋನ್​ನಲ್ಲಿ ಕಾರ್ಟೂನ್‌ ತೋರಿಸುವುದಾಗಿ ಹೇಳಿ ಅತ್ಯಾಚಾರ ಎಸಗಿದ್ದು ಬೆಳಕಿಗೆ ಬಂದಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಘಟನೆ ಜರುಗಿದೆ ಎನ್ನಲಾಗಿದೆ. ಖಾರಿಬರಿಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಆರೋಪದ ಮೇಲೆ ಖರಿಬರಿ ಪೊಲೀಸ್ ಠಾಣೆ ಪೊಲೀಸರು, ಆರೋಪಿ ಗಿಬ್ರಾನಸ್ ಕುಜೂರ್ (20)ನನ್ನು ಇತ್ತೀಚೆಗೆ ಖರಿಬರಿ ಬ್ಲಾಕ್‌ನ ಬುರಗಂಜ್ ಪ್ರದೇಶದಿಂದ ಬಂಧಿಸಿದ್ದರು. ಮತ್ತೊಂದೆಡೆ, ಸಿಲಿಗುರಿಯಲ್ಲಿ ಇತರ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪ್ರಧಾನ್ ನಗರ ಪೊಲೀಸರು, ಆರೋಪಿ ಪರೇಶ್ ರಾಯ್ (48) ಅರೆಸ್ಟ್​ ಮಾಡಿದ್ದರು. ಕೆಲವು ದಿನಗಳ ಹಿಂದೆ 11 ವರ್ಷದ ಬಾಲಕಿ ಮೇಲೆ ಪರೇಶ್ ರಾಯ್ ಎಂಬಾತ ಲೈಂಗಿಕ ದೌರ್ಜನ್ಯವೆಸಗಿದ್ದ ಎನ್ನಲಾಗಿದೆ.

ಇದನ್ನೂ ಓದಿ: ಹೆಂಡತಿ ಮೇಲಿನ ಕೋಪಕ್ಕೆ ಮಗಳನ್ನೇ ಹತ್ಯೆಗೈದ ತಂದೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.