ETV Bharat / bharat

ಅಪಾಯಕಾರಿ ಹಂತ ತಲುಪಿದ ರಾಷ್ಟ್ರ ರಾಜಧಾನಿ ಗಾಳಿಯ ಗುಣಮಟ್ಟ.. ತುರ್ತುಕ್ರಮಕ್ಕೆ ಸುಪ್ರೀಂ ಸೂಚನೆ

ಭೂ ವಿಜ್ಞಾನ ಸಚಿವಾಲಯದ ಮುನ್ಸೂಚನೆ ಸಂಸ್ಥೆ ಸಿಸ್ಟಂ ಆಫ್ ಏರ್ ಕ್ವಾಲಿಟಿ ಮತ್ತು ವೆದರ್ ಫೋರ್​​​​ಕಾಸ್ಟಿಂಗ್​ & ರಿಸರ್ಚ್ (System of Air Quality and Weather Forecasting And Research) ಪ್ರಕಾರ ನವದೆಹಲಿ ವಾಯು ಗುಣಮಟ್ಟದ ಸೂಚ್ಯಂಕವು (Air quality index) 499 ರಷ್ಟಿದೆ ಎಂದು ತಿಳಿದು ಬಂದಿದೆ.

ಗಾಳಿಯ ಗುಣಮಟ್ಟ
ಗಾಳಿಯ ಗುಣಮಟ್ಟ
author img

By

Published : Nov 13, 2021, 11:00 AM IST

Updated : Nov 13, 2021, 2:23 PM IST

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿನ ಗಾಳಿಯ ಗುಣಮಟ್ಟವು 'ತೀವ್ರ' ಕಳಪೆ ಮಟ್ಟಕ್ಕೆ ಕುಸಿದಿದೆ. ಸಿಸ್ಟಂ ಆಫ್ ಏರ್ ಕ್ವಾಲಿಟಿ ಮತ್ತು ವೆದರ್ ಫೋರ್ಕಾಸ್ಟಿಂಗ್ & ರಿಸರ್ಚ್ (SAFAR) ಪ್ರಕಾರ, ನಗರದಲ್ಲಿನ ವಾಯು ಗುಣಮಟ್ಟ ಸೂಚ್ಯಂಕವು 499 ರಷ್ಟಿದೆ ಎಂದು ತಿಳಿದು ಬಂದಿದೆ.

ಇಂದು ದೆಹಲಿಯ ಲೋಧಿ ರಸ್ತೆಯ ಪ್ರದೇಶದಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 476 ವರದಿಯಾಗಿದೆ. ಐಐಟಿ ದೆಹಲಿ ಪ್ರದೇಶದಲ್ಲಿ ವಾಯು ಗುಣಮಟ್ಟ ಸೂಚ್ಯಂಕ 479 ಇದೆ. ಮತ್ತು ದೆಹಲಿ ವಿಶ್ವವಿದ್ಯಾಲಯದ ಉತ್ತರ ಕ್ಯಾಂಪಸ್ ಪ್ರದೇಶದಲ್ಲಿ AQI 578 ದಾಖಲಾಗಿದೆ.

ಗಾಳಿಯ ಗುಣಮಟ್ಟವನ್ನು ಈ ರೀತಿ ಪರಿಗಣಿಸಲಾಗುತ್ತದೆ:

ಸರ್ಕಾರಿ ಏಜೆನ್ಸಿಗಳ ಪ್ರಕಾರ, 0 ಮತ್ತು 50 ರ ನಡುವಿನ (AQI) ಸೂಚ್ಯಂಕವನ್ನು 'ಉತ್ತಮ' ಎಂದು ಪರಿಗಣಿಸಲಾಗುತ್ತದೆ. 51 ಮತ್ತು 100 ನಡುವಿನ (AQI) ಸೂಚ್ಯಂಕವನ್ನು 'ತೃಪ್ತಿಕರ' ಎನ್ನಲಾದರೆ, 101 ಮತ್ತು 200 ನಡುವಿನ (AQI) ಸೂಚ್ಯಂಕವನ್ನು 'ಮಧ್ಯಮ' ಎಂದು ಪರಿಗಣಿಸಲಾಗುತ್ತದೆ. ಇನ್ನೂ 201 ಮತ್ತು 300 'ಕಳಪೆ' ಹಾಗೂ 301 ಮತ್ತು 400 ನಡುವಿನ (AQI) ಸೂಚ್ಯಂಕವನ್ನು 'ಅತ್ಯಂತ ಕಳಪೆ' ಮತ್ತು 401- 500 ನಡುವಿನ (AQI) ಸೂಚ್ಯಂಕವನ್ನು 'ತೀವ್ರ' (ಅಪಾಯಕಾರಿ) ಎಂದು ಪರಿಗಣಿಸಲಾಗುತ್ತದೆ.

ಇನ್ನು ದೆಹಲಿಯಲ್ಲಿ ಗಾಳಿಯ ಗುಣಮಟ್ಟ AQI (Air Quality Index) ಕುಸಿದಿದ್ದು, ಪಿಎಂ 10 ವಾಯು ಗುಣಮಟ್ಟ ದಾಖಲಾಗಿದೆ. ಕಳಪೆ ಗಾಳಿಯಿಂದಾಗಿ ಶ್ವಾಸಕೋಶ ಮತ್ತು ಹೃದಯದ ಮೇಲೆ ಗಂಭೀರ ಪರಿಣಾಮಗಳು ಉಂಟಾಗುತ್ತವೆ. ಕೆಮ್ಮು ಅಥವಾ ಉಸಿರಾಟದ ತೊಂದರೆ, ಅಸ್ತಮಾ ಮತ್ತು ತೀವ್ರವಾದ ಉಸಿರಾಟದ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ತಜ್ಞರು ತಿಳಿಸಿದ್ದಾರೆ.

ಇದನ್ನೂ ಓದಿ: Indian Railway: 'ವಿಶೇಷ ಟ್ರೇನ್​​​ 'ಗಳನ್ನು ಕೈಬಿಡಲಿರುವ ಭಾರತೀಯ ರೈಲ್ವೆ..ಶೀಘ್ರದಲ್ಲೇ ಸಾಮಾನ್ಯ ದರ ಪುನರಾರಂಭ

ವಾಯು ಮಾಲಿನ್ಯ ನಿಯಂತ್ರಿಸಲು ಲಾಕ್‌ಡೌನ್ ಜಾರಿ?:

ಹೆಚ್ಚುತ್ತಿರುವ ವಾಯು ಮಾಲಿನ್ಯವನ್ನು ನಿಯಂತ್ರಿಸಲು ರಾಷ್ಟ್ರ ರಾಜಧಾನಿಯಲ್ಲಿ ಕೆಲವು ದಿನಗಳ ಕಾಲ ಲಾಕ್‌ಡೌನ್‌ನಂತಹ ತುರ್ತು ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆಯೇ ಅಥವಾ ಬೇರೆ ಯಾವುದಾದರೂ ಕ್ರಮ ಕೈಗೊಳ್ಳಲಾಗಿದೆಯೇ ಎಂದು ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.

  • Plea on air pollution | Supreme Court to Centre- Tell us how we can reduce AQI from 500 at least by 200 points. Take some urgent measures. Can you think of two days lockdown or something? How can people live? pic.twitter.com/XfcVK9aLrD

    — ANI (@ANI) November 13, 2021 " class="align-text-top noRightClick twitterSection" data=" ">

ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌.ವಿ ರಮಣ ನೇತೃತ್ವದ ವಿಭಾಗೀಯ ಪೀಠವು ಹದಗೆಡುತ್ತಿರುವ ದೆಹಲಿಯ ಗಾಳಿಯ ಗುಣಮಟ್ಟದ ಕುರಿತು ಇಂದು ವಿಚಾರಣೆ ನಡೆಸಿತು. (SAFAR) ಪ್ರಕಾರ, ಇಂದು ಬೆಳಗ್ಗೆ ರಾಜಧಾನಿಯ ಗಾಳಿಯ ಗುಣಮಟ್ಟವು 'ತೀವ್ರ'ವಾಗಿದ್ದು, ಜನರು ಮನೆಯಲ್ಲಿ ಸಹ ಮಾಸ್ಕ್​​​ ಧರಿಸಿ ಎಂದು ಒತ್ತಾಯಿಸಿತು.

ಗಾಳಿಯ ಗುಣಮಟ್ಟವನ್ನು ತುರ್ತಾಗಿ 500 ಎಕ್ಯೂಐನಿಂದ 200ಕ್ಕೆ ಇಳಿಸಲು ಕ್ರಮಕೈಗೊಳ್ಳುವಂತೆ ಸರ್ಕಾರಕ್ಕೆ ಸುಪ್ರೀಂ ಸೂಚಿಸಿದೆ. ಜೊತೆಗೆ ಸರ್ಕಾರವು ಮಾಲಿನ್ಯವನ್ನು ನಿಯಂತ್ರಿಸಲು ಯಾವ ಕ್ರಮಗಳನ್ನು ಕೈಗೊಂಡಿದೆ ಎಂದು ಸುಪ್ರೀಂಕೋರ್ಟ್​ಗೆ ತಿಳಿಸುವಂತೆ ಸೂಚಿಸಿ, ವಿಚಾರಣೆಯನ್ನು ನವೆಂಬರ್ 15ಕ್ಕೆ ಮುಂದೂಡಲಾಯಿತು.

Last Updated : Nov 13, 2021, 2:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.