ETV Bharat / bharat

ಮಾ.10ಕ್ಕೆ ಸಿಸೋಡಿಯಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ದೆಹಲಿ ಕೋರ್ಟ್.. ಮತ್ತೆರಡು ದಿನ ಸಿಬಿಐ ವಶಕ್ಕೆ​ - ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯವು, ಬಂಧಿತ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಜಾಮೀನು ಅರ್ಜಿಯ ವಿಚಾರಣೆಯನ್ನು ಮಾರ್ಚ್ 10ಕ್ಕೆ ಮುಂದೂಡಿದೆ.

Seeking an extension of remand by CBI
ಮನೀಶ್ ಸಿಸೋಡಿಯಾ
author img

By

Published : Mar 4, 2023, 4:44 PM IST

ನವದೆಹಲಿ: ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯವು ಶನಿವಾರ ಬಂಧಿತ ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಜಾಮೀನು ಅರ್ಜಿಯ ಮುಂದಿನ ವಿಚಾರಣೆಯನ್ನು ಮಾರ್ಚ್ 10ಕ್ಕೆ ನಿಗದಿಪಡಿಸಿದೆ.

ಸಿಸೋಡಿಯಾ ಅವರ ಜಾಮೀನು ಅರ್ಜಿಯ ಮೇರೆಗೆ ನ್ಯಾಯಾಲಯವು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ನೋಟಿಸ್ ಜಾರಿ ಮಾಡಿದೆ. ರೌಸ್ ಅವೆನ್ಯೂ ಕೋರ್ಟ್‌ನಲ್ಲಿ ವಿಚಾರಣೆ ವೇಳೆ ಸಿಬಿಐ ಸಿಸೋಡಿಯಾ ಅವರನ್ನು ಮೂರು ದಿನಗಳ ಕಸ್ಟಡಿಗೆ ಕೋರಿತ್ತು. ಮನೀಷ್ ಸಿಸೋಡಿಯಾ ಪರ ವಾದ ಮಂಡಿಸಿದ ಹಿರಿಯ ವಕೀಲ ದಯನ್ ಕೃಷ್ಣನ್ ಅವರು ಬಂಧನದ ಅವಧಿಯನ್ನು ವಿಸ್ತರಿಸಲು ಸಿಬಿಐ ಕೋರಿಕೆಯನ್ನು ವಿರೋಧಿಸಿದರು. ಎರಡೂ ಕಡೆ ವಾದ ಆಲಿಸಿದ ಕೋರ್ಟ್​​ ಸಿಬಿಐನ ಮೂರು ದಿನಗಳ ಕೋರಿಕೆ ಬದಲಿಗೆ ಎರಡು ದಿನಗಳ ಕಸ್ಟಡಿಗೆ ಅನುಮೋದನೆ ನೀಡಿತು.

ಸಿಸೋಡಿಯಾ ಪರ ವಾದ ಮಂಡಿಸಿದ ಕೃಷ್ಣನ್: "ಸಿಬಿಐನಿಂದ ಬಂಧನ ಅವಧಿಯನ್ನು ವಿಸ್ತರಿಸಲು ಕೋರುವುದು ಸಮರ್ಥನೀಯವಲ್ಲ" ಎಂದು ಕೃಷ್ಣನ್ ವಾದ ಮಂಡಿಸಿದರು. ದೆಹಲಿಯ ಹೊಸ ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿನ ಅಕ್ರಮಗಳ ಆರೋಪದಲ್ಲಿ ಸಿಸೋಡಿಯಾ ಅವರನ್ನು ಸಿಬಿಐ ಕಳೆದ ಭಾನುವಾರ ಬಂಧಿಸಿತ್ತು. ಪ್ರತಿಪಕ್ಷಗಳ ಅವ್ಯವಹಾರದ ಆರೋಪದ ನಡುವೆ ನೀತಿಯನ್ನು ಹಿಂಪಡೆಯಲಾಗಿದೆ. ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಎಸ್‌ಸಿ ನಿರಾಕರಿಸಿದ ಹಿನ್ನೆಲೆಯಲ್ಲಿ ಸಿಸೋಡಿಯಾ ಶುಕ್ರವಾರ ರೋಸ್ ಅವೆನ್ಯೂ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದರು.

ಜಾಮೀನು ಅರ್ಜಿಯಲ್ಲಿ ಏನಿದೆ?: ರಾಷ್ಟ್ರ ರಾಜಧಾನಿಯ ವಿಚಾರಣಾ ನ್ಯಾಯಾಲಯದ ಮುಂದೆ ಸಿಸೋಡಿಯಾ ಪರವಾಗಿ ಸಲ್ಲಿಸಲಾದ ಹೊಸ ಜಾಮೀನು ಅರ್ಜಿಯು ಪ್ರಕರಣದ ಅಡಿ ಅವರು ಎಲ್ಲ ರೀತಿಯಿಂದಲೂ ಸ್ಪಂದಿಸಿದ್ದಾರೆ ಅವರನ್ನು (ಸಿಸೋಡಿಯಾ) ಬಂಧನದಲ್ಲಿಡುವ ಯಾವುದೇ ಫಲಪ್ರದ ಉದ್ದೇಶವಿಲ್ಲ. ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಅವರು ತನಿಖೆಗೆ ಸಹಕರಿಸುತ್ತಿದ್ದಾರೆ. ಸಿಬಿಐನಿಂದ ಸಮನ್ಸ್ ಬಂದಾಗಲೆಲ್ಲಾ ಅವರು ಹಾಜರಾಗಿದ್ದರು. ಈ ಪ್ರಕರಣದಲ್ಲಿ ಬಂಧಿತರಾಗಿರುವ ಇತರ ಆರೋಪಿಗಳಿಗೆ ಈಗಾಗಲೇ ಜಾಮೀನು ಮಂಜೂರಾಗಿದೆ. ಸಿಸೋಡಿಯಾ ತಮ್ಮ ಅರ್ಜಿಯಲ್ಲಿ, ಅವರು ಉಪ ಮುಖ್ಯಮಂತ್ರಿಯ ಪ್ರಮುಖ ಸಾಂವಿಧಾನಿಕ ಹುದ್ದೆಯನ್ನು ಹೊಂದಿದ್ದಾರೆ. ಸಮಾಜದಲ್ಲಿ ಉನ್ನತ ಸ್ಥಾನ ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಬೃಹತ್​ ಪ್ರತಿಭಟನೆ: ಇದಕ್ಕೂ ಮುನ್ನ ದೆಹಲಿ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಅವರ ಬಂಧನವನ್ನು ವಿರೋಧಿಸಿ ಆಮ್ ಆದ್ಮಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ದೆಹಲಿಯಲ್ಲಿರುವ ಪಕ್ಷದ ಕಚೇರಿ ಬಳಿ ಬೃಹತ್​ ಪ್ರತಿಭಟನೆ ನಡೆಸಿದರು. ಬಂಧಿತ ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಸಿಬಿಐ ಕಸ್ಟಡಿ ಮುಗಿದಿರುವ ಹಿನ್ನೆಲೆಯಲ್ಲಿ ಅವರನ್ನು ರೋಸ್ ಅವೆನ್ಯೂ ನ್ಯಾಯಾಲಯಕ್ಕೆ ಕರೆತರಲಾಗಿತ್ತು. ಇದೀಗ ಕೋರ್ಟ್​ ಅವರಿಗೆ ಮತ್ತೆರಡು ದಿನ ಸಿಬಿಐ ಕಸ್ಟಡಿಗೆ ಒಪ್ಪಿಸಿದೆ. ಇನ್ನು ಪ್ರಕರಣದ ವಿಚಾರಣೆ ಮಾರ್ಚ್​ 10 ರಂದು ನಡೆಯಲಿದ್ದು, ಸಿಸೋಡಿಯಾ ಅವರಿಗೆ ಬೇಲೋ - ಇಲ್ಲಾ ಜೈಲಾ ಎಂಬುದು ನಿರ್ಧಾರವಾಗಲಿದೆ.

ಇದನ್ನೂ ಓದಿ: ತಮಿಳುನಾಡಿನಲ್ಲಿ ಬಿಹಾರಿ ಕಾರ್ಮಿಕರ ಮೇಲೆ ಹಲ್ಲೆ ಆರೋಪ: ತನಿಖಾ ತಂಡ ಕಳುಹಿಸಲು ನಿರ್ಧಾರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.