ETV Bharat / bharat

'ಟುಕುರ್ ಟುಕುರ್ ದೇಕ್ತೇ ಹೋ ಕ್ಯಾ..' ಜವಾಬ್ದಾರಿ ಮರೆತ ಪೊಲೀಸ್​ ಸಿಬ್ಬಂದಿಗೆ ಶೋಕಾಸ್​ ನೋಟಿಸ್

author img

By

Published : Jun 9, 2021, 9:51 AM IST

ಕರ್ತವ್ಯನಿರತ ದೆಹಲಿಯ ಪೊಲೀಸ್​ ಕಾನ್‌ಸ್ಟೆಬಲ್​​ಗಳಿಬ್ಬರು ಹಿಂದಿ ಹಾಡಿಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಪರಿಣಾಮ ಇಬ್ಬರಿಗೂ ಶೋಕಾಸ್​ ನೋಟೀಸ್​ ನೀಡಲಾಗಿದೆ.

Delhi cops
ಪೊಲೀಸ್​ ಕಾನ್ಸ್​ಟೆಬಲ್

ನವದೆಹಲಿ: ಕರ್ತವ್ಯನಿರತ ಪೊಲೀಸ್​ ಕಾನ್‌ಸ್ಟೆಬಲ್​​ಗಳಿಬ್ಬರು ಹಾಡಿನ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಹಿನ್ನೆಲೆಯಲ್ಲಿ ಇಬ್ಬರಿಗೂ ದೆಹಲಿ ಪೊಲೀಸ್ ಶೋಕಾಸ್​ ನೋಟಿಸ್​ ನೀಡಿದ್ದಾರೆ.

ಹಾಡಿನ ವಿಡಿಯೋ ಮಾಡಿದ ಪೊಲೀಸ್​ ಕಾನ್‌ಸ್ಟೆಬಲ್​​ಗಳು

ಮಾಡೆಲ್​ ಟೌಲ್​ ಪೊಲೀಸ್​ ಠಾಣೆಯ ಮಹಿಳಾ ಕಾನ್ಸ್​ಸ್ಟೆಬಲ್​​ ಶಶಿ ಮತ್ತು ಕಾನ್‌ಸ್ಟೆಬಲ್ ವಿವೇಕ್ ಮಾಥುರ್ ಕರ್ತವ್ಯ ನಿರ್ಲಕ್ಷ್ಯ ತೋರಿ, ಪೊಲೀಸ್‌ ಸಮವಸ್ತ್ರದಲ್ಲೇ ಹಿಂದಿ ಹಾಡಿಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಸದ್ಯ ಇವರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ದೆಹಲಿ ಡಿಸಿಪಿ ಉಷಾ ರಂಗ್ನಾನಿ ನೋಟಿಸ್​ ನೀಡಿದ್ದಾರೆ.

ಅಲ್ಲದೆ, ವಿಡಿಯೋದಲ್ಲಿ ಪೊಲೀಸ್ ಕಾನ್ಸ್‌ಸ್ಟೆಬಲ್‌ಗಳು ಮಾಸ್ಕ್​ ಹಾಕಿಲ್ಲ. ಇದರಿಂದ ಕೋವಿಡ್​ ನಿಯಮ ಉಲ್ಲಂಘನೆಯಾಗಿದೆ. ಸದ್ಯ 15 ದಿನಗಳ ಸಮಯಾವಕಾಶ ನೀಡಿರುವ ಡಿಸಿಪಿ, ಕ್ರಮ ಕೈಗೊಳ್ಳುವ ಕುರಿತು ಪ್ರತಿಕ್ರಿಯೆ ನೀಡುವಂತೆ ಸೂಚನೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.