ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಕೋವಿಡ್ ಅಬ್ಬರ ಜೋರಾಗಿದ್ದು, ಕಳೆದ 24 ಗಂಟೆಗಳಲ್ಲಿ ದಾಖಲೆಯ 13,500 ಸೋಂಕಿತ ಪ್ರಕರಣ ದಾಖಲಾಗಿವೆ. ಹೀಗಾಗಿ ಸಿಬಿಎಸ್ಇ ಪರೀಕ್ಷೆ ರದ್ಧುಗೊಳಿಸುವಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಗ್ರಹಿಸಿದ್ದಾರೆ.
-
6 lakh children in Delhi are going to write CBSE exams. Nearly 1 lakh teachers will be a part of it. These can become major hotspots leading to large-scale spreading of Corona. Children's lives & health is very important to us. I request Centre to cancel CBSE exams: Delhi CM pic.twitter.com/EyqDfseoMU
— ANI (@ANI) April 13, 2021 " class="align-text-top noRightClick twitterSection" data="
">6 lakh children in Delhi are going to write CBSE exams. Nearly 1 lakh teachers will be a part of it. These can become major hotspots leading to large-scale spreading of Corona. Children's lives & health is very important to us. I request Centre to cancel CBSE exams: Delhi CM pic.twitter.com/EyqDfseoMU
— ANI (@ANI) April 13, 20216 lakh children in Delhi are going to write CBSE exams. Nearly 1 lakh teachers will be a part of it. These can become major hotspots leading to large-scale spreading of Corona. Children's lives & health is very important to us. I request Centre to cancel CBSE exams: Delhi CM pic.twitter.com/EyqDfseoMU
— ANI (@ANI) April 13, 2021
ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದ ಕೇಜ್ರಿವಾಲ್, ಮಕ್ಕಳ ಆರೋಗ್ಯ ನಮಗೆ ತುಂಬಾ ಅಗತ್ಯವಾಗಿದ್ದು, ತಕ್ಷಣವೇ ಸಿಬಿಎಸ್ಇ ಪರೀಕ್ಷೆ ರದ್ಧುಗೊಳಿಸುವಂತೆ ಅವರು ಆಗ್ರಹಿಸಿದ್ದಾರೆ. ದೆಹಲಿಯಲ್ಲಿ ಆರು ಲಕ್ಷ ಮಕ್ಕಳು ಸಿಬಿಎಸ್ಇ ಪರೀಕ್ಷೆಯಲ್ಲಿ ಭಾಗಿಯಾಗುತ್ತಿದ್ದು, 1 ಲಕ್ಷಕ್ಕೂ ಅಧಿಕ ಶಿಕ್ಷಕರು ಕಾರ್ಯನಿರ್ವಹಿಸಲಿದ್ದಾರೆ. ಇದು ಕೊರೊನಾಗೆ ಆಹ್ವಾನ ನೀಡುವಂತಾಗುವುದರಿಂದ ಪರೀಕ್ಷೆ ರದ್ಧುಗೊಳಿಸಬೇಕೆಂದು ಕೇಂದ್ರದ ಬಳಿ ಮನವಿ ಮಾಡಿದ್ದಾರೆ.
ಮಕ್ಕಳಿಗೆ ಬೇರೆ ರೀತಿಯಲ್ಲಿ ಪರೀಕ್ಷೆ ತೆಗೆದುಕೊಳ್ಳುವ ಮೂಲಕ ಮುಂದಿನ ಹಂತಕ್ಕೆ ತೇರ್ಗಡೆ ಮಾಡುವಂತೆ ಅವರು ಮನವಿ ಮಾಡಿದ್ದು, ಅನೇಕ ರಾಷ್ಟ್ರಗಳು ಇದನ್ನ ಮಾಡಿವೆ. ಮಕ್ಕಳನ್ನ ಆನ್ಲೈನ್ ಅಥವಾ ಆಂತರಿಕ ಮೌಲ್ಯಮಾಪನದ ಮೂಲಕ ಮುಂದಿನ ಹಂತಕ್ಕೆ ತೇರ್ಗಡೆಗೊಳಿಸುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.
ಕೇಂದ್ರ ಪರೀಕ್ಷಾ ಮಂಡಳಿ ಈಗಾಗಲೇ 10 ಹಾಗೂ 12ನೇ ತರಗತಿ ಬೋರ್ಡ್ ಪರೀಕ್ಷೆ ದಿನಾಂಕ ಘೋಷಣೆ ಮಾಡಿದ್ದು, ಮೇ 4ರಿಂದ ಪರೀಕ್ಷೆ ಆರಂಭಗೊಳ್ಳಲಿವೆ. ನವದೆಹಲಿಯಲ್ಲಿ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ಈಗಾಗಲೇ ನೈಟ್ ಕರ್ಫ್ಯೂ ವಿಧಿಸಲಾಗಿದೆ. ಸದ್ಯ ದೆಹಲಿಯಲ್ಲಿ 7,36,788 ಕೋವಿಡ್ ಕೇಸ್ಗಳಿದ್ದು, ದೇಶದಲ್ಲಿ ಕಳೆದ 24 ಗಂಟೆಯಲ್ಲೇ 1.61 ಲಕ್ಷ ಸೋಂಕಿತ ಪ್ರಕರಣ ದಾಖಲಾಗಿವೆ.