ETV Bharat / bharat

'ದಯವಿಟ್ಟು ಆಮ್ಲಜನಕ ನೀಡಿ'.. ಎಲ್ಲ ರಾಜ್ಯದ ಸಿಎಂಗಳ ಬಳಿ ಕೇಜ್ರಿವಾಲ್ ಮನವಿ! - ದೆಹಲಿ ಸಿಎಂ ಕೇಜ್ರಿವಾಲ್​

ದೆಹಲಿಯ ಬಹುತೇಕ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಉಂಟಾಗಿದ್ದು, ಈ ವಿಷಯವಾಗಿ ಕೇಜ್ರಿವಾಲ್ ಎಲ್ಲ ರಾಜ್ಯಗಳ ಸಿಎಂಗಳ ಬಳಿ ವಿಶೇಷ ಮನವಿ ಮಾಡಿದ್ದಾರೆ.

Delhi CM Kejriwal
Delhi CM Kejriwal
author img

By

Published : Apr 24, 2021, 7:32 PM IST

ನವದೆಹಲಿ: ದೇಶದಲ್ಲಿ ಮಹಾಮಾರಿ ಕೊರೊನಾ ವೈರಸ್​​ ಮೀತಿ ಮೀರಿದ್ದು, ಇದರಿಂದ ಅನೇಕ ರಾಜ್ಯಗಳಲ್ಲಿ ಬೆಡ್​, ಆಮ್ಲಜನಕ ಸೇರಿ ಔಷಧ ಸಮಸ್ಯೆ ಸಹ ಉದ್ಭವವಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಆಮ್ಲಜನಕ ಕೊರತೆ ಉಂಟಾಗಿ ಅನೇಕ ರೋಗಿಗಳು ಸಾವನ್ನಪ್ಪಿದ್ದು, ನಿನ್ನೆ ರಾತ್ರಿ ಜೈಪುರ್ ಗೋಲ್ಡನ್​ ಆಸ್ಪತ್ರೆಯಲ್ಲೇ 25 ರೋಗಿಗಳು ಆಮ್ಲಜನಕದ ಕೊರತೆಯಿಂದ ಮೃತಪಟ್ಟಿದ್ದಾರೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಎಲ್ಲ ರಾಜ್ಯದ ಸಿಎಂಗಳ ಬಳಿ ಮನವಿ ಮಾಡಿಕೊಂಡಿದ್ದಾರೆ.

  • I am writing to all CMs requesting them to provide oxygen to Delhi, if they have spare. Though Central govt. is also helping us, the severity of corona is such that all available resources are proving inadequate.

    — Arvind Kejriwal (@ArvindKejriwal) April 24, 2021 " class="align-text-top noRightClick twitterSection" data=" ">

ಟ್ವೀಟ್​ ಮೂಲಕ ಕೇಜ್ರಿವಾಲ್​ ಮನವಿ

ಎಲ್ಲ ರಾಜ್ಯದ ಮುಖ್ಯಮಂತ್ರಿಗಳಲ್ಲಿ ನಾನು ಮನವಿ ಮಾಡುತ್ತಿದ್ದೇನೆ. ನಿಮ್ಮಲ್ಲಿ ಹೆಚ್ಚಿನ ಆಕ್ಸಿಜನ್​ ಲಭ್ಯವಿದ್ದರೆ ನಮಗೆ ನೀಡಿ. ಈಗಾಗಲೇ ಕೇಂದ್ರ ಸರ್ಕಾರ ನಮಗೆ ಸಹಾಯ ಮಾಡಿದ್ದು, ಈ ವಿಷಯದಲ್ಲಿ ನೀವೂ ನಮಗೆ ಸಹಕಾರ ನೀಡಿ ಎಂದು ಹೇಳಿದ್ದಾರೆ.

ಎಲ್ಲ ರಾಜ್ಯಗಳಿಗೆ ಹೋಲಿಕೆ ಮಾಡಿದಾಗ ದೆಹಲಿಯಲ್ಲಿ ನಿತ್ಯ ಹೆಚ್ಚಿನ ಕೋವಿಡ್​ ಪ್ರಕರಣ ದಾಖಲಾಗುತ್ತಿದ್ದು, ನಿನ್ನೆ ಒಂದೇ ದಿನ 24,331 ಕೋವಿಡ್ ಕೇಸ್ ಹಾಗೂ 348 ಜನರು ಸಾವನ್ನಪ್ಪಿದ್ದಾರೆ. ಸದ್ಯ 90 ಸಾವಿರಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿವೆ. ಹೀಗಾಗಿ ಎಲ್ಲ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಉಂಟಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.