ಹೈದರಾಬಾದ್ : 2 ಕೋಟಿ ರೂ. ಮೌಲ್ಯದ ಐಷಾರಾಮಿ ಫೆರಾರಿ ಕಾರನ್ನು ಕದಿಯಲು ಸಂಚು ರೂಪಿಸಿದ್ದ ದೆಹಲಿ ಮೂಲದ ಕಾರು ವ್ಯಾಪಾರಿ ಪ್ರಿನ್ಸ್ ಪಾಠಕ್ನನ್ನು ಸಿಂಕದರಾಬಾದ್ ಪೊಲೀಸರು ಬಂಧಿಸಿದ್ದಾರೆ.
ಕಳೆದ ಮೇ ತಿಂಗಳಲ್ಲಿ ಉದ್ಯಮಿ ಸೈಯದ್ ಬಿಲಾಲ್ ಎಂಬುವರು ಫೆರಾರ್ ಕಾರನ್ನು ಖರೀದಿಸಲು ಕಾರು ವ್ಯಾಪಾರಿ ಪಾಠಕ್ನನ್ನು ಸಂಪರ್ಕಿಸಿದ್ದಾನೆ. ಪಾಠಕ್ ಫೆರಾರಿ ಕೊಡಿಸುವುದಾಗಿ ಒಪ್ಪಿಕೊಂಡಿದ್ದಾನೆ. ನಂತರ ಬಿಲಾಲ್ ತಮ್ಮ ಆಡಿ ಕ್ಯೂ 5 ಸ್ಪೋರ್ಟ್ಸ್ ಕಾರ್ ಮತ್ತು ಒಪ್ಪಂದದಲ್ಲಿ ಪ್ರಿನ್ಸ್‌ಗೆ 25 ಲಕ್ಷ ರೂ. ಹಣವನ್ನು ಪಾವತಿಸಿ ಒಂದು ತಿಂಗಳು ಕಳೆದರೂ ಪಾಠಕ್ ಕಾರು ತಲುಪಿಸಿಲ್ಲ.
ಬಿಲಾಲ್ ಸೈಯದ್ ಮೇಲೆ ಕಾರು ಬೇಕೆಂದು ಒತ್ತಡ ಹೇರಿದಾಗ ಕಾರು ಹೈದರಾಬಾದ್ನಲ್ಲಿದೆ, ದೆಹಲಿಗೆ ತರಲಾಗುತ್ತಿದೆ ಎಂದು ಕಾರಣಗಳನ್ನು ಹೇಳಿದ್ದಾನೆ. ಕಳೆದ ವರ್ಷ ಮೇ ತಿಂಗಳಲ್ಲಿ ಪ್ರಿನ್ಸ್ ಪಾಠಕ್ ಫೆರಾರಿ ಕಾರನ್ನು ಸಿಕಂದರಾಬಾದ್‌ನ ಮಹೇಂದ್ರ ಹಿಲ್ಸ್ನಲ್ಲಿ ವಾಸಿಸುತ್ತಿರುವ ಉದ್ಯಮಿ ದಿನೇಶ್ ಗಾಂಧಿಗೆ ಮಾರಾಟ ಮಾಡಿದ್ದರು.
ಈ ಒಪ್ಪಂದಕ್ಕೆ ಹೈದರಾಬಾದ್ ಮೂಲದ ವ್ಯಾಪಾರಿ ನೀರಜ್ ಶರ್ಮಾ ಮಧ್ಯಸ್ಥಿಕೆ ವಹಿಸಿದ್ದರು. ಡೀಲ್ ಮುಗಿದ ನಂತರ, ದಿನೇಶ್ ವ್ಯಾಪಾರಕ್ಕಾಗಿ ಅಮೆರಿಕಕ್ಕೆ ಹೋಗಿ ಲಾಕ್‌ಡೌನ್ ಆಗಿದ್ದರಿಂದ ಅಲ್ಲಿಯೇ ಸಿಲುಕಿದ್ದರು.
ನಂತರ ದಿನೇಶ್ ಭಾರತದಲ್ಲಿಲ್ಲ ಎಂದು ತಿಳಿದ ಡೀಲರ್ ಪ್ರಿನ್ಸ್, ಫೆರಾರಿ ಕಾರನ್ನು ಕದಿಯಲು ಸಂಚು ರೂಪಿಸಿದ್ದಾನೆ. ಇದೇ ಜುಲೈ 23 ರಂದು ಅವರು ತಮ್ಮ ಹುಡುಗರಾದ ಭೂಪಿಂದರ್ ಮತ್ತು ಸದ್ದಾಂ ಅವರನ್ನು ದೆಹಲಿಯಿಂದ ಹೈದರಾಬಾದ್‌ಗೆ ಕಾರ್ ಕದಿಯಲು ಕಳುಹಿಸಿದ್ದಾನೆ.
ಈ ಇಬ್ಬರನ್ನು ಮಧ್ಯವರ್ತಿ ನೀರಜ್ ಶರ್ಮಾ ತಮ್ಮ ಜೊತೆ ದಿನೇಶ್ ಗಾಂಧಿಯವರ ಮನೆಗೆ ಕರೆದೊಯ್ದು, ಶರ್ಮಾ ದಿನೇಶ್ ಕುಟುಂಬ ಸದಸ್ಯರಿಂದ ಕಾರ್ ಕೀಗಳನ್ನು ಪಡೆದು ಮಹೇಂದ್ರ ಹಿಲ್ಸ್ನಲ್ಲಿ ನಿಲ್ಲಿಸಿದ್ದ ಕಾರ್ ಇರುವ ಸ್ಥಳಕ್ಕೆ ಹೋಗಿದ್ದಾರೆ.
ಈ ಮಧ್ಯೆ ದಿನೇಶ್ ಸ್ನೇಹಿತ ದಿನೇಶ್ ಮನೆಗೆ ಬಂದು ತನ್ನ ಸ್ನೇಹಿತನ ಕುಟುಂಬ ಸದಸ್ಯರಿಗೆ ಕಾರನ್ನು ಸ್ವಚ್ಛಗೊಳಿಸಲು ಕಾರ್ ಕೀ ಕೊಡುವಂತೆ ಕೇಳಿದಾಗ, ,ನೀರಜ್ ಕೀ ತೆಗೆದುಕೊಂಡು ಹೋದ ಬಗ್ಗೆ ತಿಳಿಸಿದ್ದಾರೆ. ತಕ್ಷಣವೇ ಎಚ್ಚೆತ್ತ ಅವರು ಕಳ್ಳತನವೆಂದು ಶಂಕಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ತಕ್ಷಣವೇ ಎಚ್ಚೆತ್ತ ಪೊಲೀಸರು ಕಾರನ್ನು ಪತ್ತೆ ಹಚ್ಚಿ ಜುಲೈ 23ರಂದೇ ಆರೋಪಿ ನೀರಜ್, ಭೂಪಿಂದರ್ ಮತ್ತು ಸದ್ದಾಂ ಅವರನ್ನು ಬಂಧಿಸಿದ್ದಾರೆ. ಅಂದಿನಿಂದ ಕಾರು ವ್ಯಾಪಾರಿ ಪ್ರಿನ್ಸ್ ಪಾಠಕ್ ತಲೆ ಮರೆಸಿಕೊಂಡಿದ್ದಾನೆ.
ಪ್ರಿನ್ಸ್ ಪಾಠಕ್ ಅವರಿಂದ ಫೆರಾರಿ ಕಾರನ್ನು ಖರೀದಿಸಿದ್ದ ದಿನೇಶ್, ಕಾರನ್ನು ನೋಂದಾಯಿಸಿಕೊಳ್ಳಲು ಖಾಲಿ ಪೇಪರ್ನಲ್ಲಿ ಸಹಿ ಮಾಡಿದ ದಾಖಲೆಗಳನ್ನು ಪಾಠಕ್ಗೆ ಕಳುಹಿಸಿದ್ದಾನೆ. ಇದನ್ನೇ ಅವಕಾಶವಾಗಿ ಬಳಸಿಕೊಂಡ ಪಾಠಕ್ ದಿನೇಶ್ ಕಾರನ್ನು ತನಗೆ ಮಾರಿದಂತೆ ದಾಖಲೆಯನ್ನು ಬದಲಾಯಿಕೊಂಡಿದ್ದಾನೆ.
ಪಾಠಕ್ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದ ಸಿಕಂದರಾಬಾದ್ ಪೊಲೀಸರು, ಅಂತಿಮವಾಗಿ ನಾಲ್ಕು ದಿನಗಳ ಹಿಂದೆ ಆತನನ್ನು ಬಂಧಸಿ ತನಿಖೆ ನಡೆಸುತ್ತಿದ್ದಾರೆ.