ETV Bharat / bharat

ಕಾರು ಗುದ್ದಿದ ರಭಸಕ್ಕೆ ಟಾಪ್​ ಮೇಲೆಯೇ ಬಿದ್ದ ಬೈಕ್​ ಸವಾರ: ಶವದೊಂದಿಗೆ 3 ಕಿಮೀ ಚಲಿಸಿದ ಆರೋಪಿ ಚಾಲಕ

ರಸ್ತೆ ಅಪಘಾತದ ನಂತರ ಕಾರಿನ ಮೇಲೆ ವ್ಯಕ್ತಿ ಬಿದ್ದಿದ್ದರೂ ಚಾಲಕ ನಿಲ್ಲಿಸದೇ ಚಲಾಯಿಸಿಕೊಂಡು ಹೋಗಿದ ಘಟನೆ ದೆಹಲಿಯಲ್ಲಿ ನಡೆದಿದೆ.

delhi-car-crashes-into-bike-drives-with-body-on-roof
ಕಾರು ಗುದ್ದಿದ ರಭಸಕ್ಕೆ ಟಾಪ್​ ಮೇಲೆಯೇ ಬೈಕ್​ ಸವಾರ: ಶವದೊಂದಿಗೆ 3 ಕಿಮೀ ಚಲಿಸಿದ ಆರೋಪಿ ಚಾಲಕ
author img

By

Published : May 3, 2023, 5:32 PM IST

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ದಾರುಣ ಮತ್ತು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಕಾರೊಂದು ಬೈಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸಾವನ್ನಪ್ಪಿದ್ದಾನೆ. ಈ ವೇಳೆ ಕಾರು ಗುದ್ದಿದ ರಭಸಕ್ಕೆ ಕಾರಿನ ಟಾಪ್​ ಮೇಲೆಯೇ ಶವ ಬಿದ್ದಿದ್ದು, ಮೂರು ಕಿಲೋ ಮೀಟರ್​ ದೂರ ಕಾರನ್ನು ಹಾಗೆ ಚಲಿಸಿಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಟ್ರಾಫಿಕ್ ಪೊಲೀಸ್‌ ಸಿಬ್ಬಂದಿಯನ್ನು ಕಾರ್ ಬಾನೆಟ್​ ಮೇಲೆ 20 ಕಿ.ಮೀ ಎಳೆದೊಯ್ದ ಚಾಲಕ!- ವಿಡಿಯೋ

ಇಲ್ಲಿನ ಕಸ್ತೂರ್ಬಾ ಗಾಂಧಿ ಮಾರ್ಗದಲ್ಲಿ ಏಪ್ರಿಲ್ 29ರಂದು ರಾತ್ರಿ ಈ ಘಟನೆ ನಡೆದಿದೆ. ಈ ಘಟನೆಯಲ್ಲಿ ಬೈಕ್ಕ್​ನಲ್ಲಿ ತೆರಳುತ್ತಿದ್ದ ದೀಪಾಂಶು ವರ್ಮಾ (30) ಎಂಬುವವರು ಮೃತಪಟ್ಟರೆ, ಮತ್ತೋರ್ವ ಮುಕುಲ್ ವರ್ಮಾ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಆರೋಪಿ ಕಾರು ಚಾಲಕನನ್ನು ಹರ್ನೀತ್ ಸಿಂಗ್​ ಚಾವ್ಲಾ ಎಂದು ಗುರುತಿಸಲಾಗಿದೆ. ಭಾನುವಾರ ಈತನನ್ನು ಪತ್ತೆ ಹಚ್ಚಿ ಬಂಧಿಸಲಾಗಿದ್ದು, ಅಪಘಾತಕ್ಕೆ ಕಾರಣವಾದ ಕಾರನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಷ್ಟಕ್ಕೂ ನಡೆದಿದ್ದೇನು?: ಮೃತ ದೀಪಾಂಶು ವರ್ಮಾ ಮತ್ತು ಈತನ ಸಂಬಂಧಿಯಾದ ಮುಕುಲ್ ವರ್ಮಾ ಒಂದೇ ಬೈಕ್​ನಲ್ಲಿ ಸಂಚರಿಸುತ್ತಿದ್ದರು. ಈ ವೇಳೆ ಮಹೀಂದ್ರಾ ಎಕ್ಸ್‌ಯುವಿ 500 ಕಾರೊಂದು ಬೈಕ್​ಗೆ ಡಿಕ್ಕಿ ಹೊಡೆದಿದೆ. ಆಗ ಡಿಕ್ಕಿಯ ರಭಸಕ್ಕೆ ದೀಪಾಂಶು ಗಾಳಿಯಲ್ಲಿ ಹಾರಿ ಕಾರಿನ ಟಾಪ್​ ಮೇಲೆಯೇ ಬಿದ್ದಿದ್ದಾನೆ. ಇತ್ತ, ಮುಕುಲ್ ರಸ್ತೆಯಲ್ಲಿ ಬಿದ್ದಿದ್ದಾನೆ. ಆದರೆ, ಕಾರಿನ ಮೇಲೆ ವ್ಯಕ್ತಿ ಬಿದ್ದಿದ್ದರೂ ಚಾಲಕ ನಿಲ್ಲಿಸದೇ ಚಲಾಯಿಸಿಕೊಂಡು ಹೋಗಿದ್ದಾನೆ. ಮೂರು ಕಿಲೋ ಮೀಟರ್​ ದೂರ ಸಾಗಿದ ಬಳಿಕ ದೀಪಾಂಶು ಮರ್ಮಾನನ್ನು ಚಾಲಕ ರಸ್ತೆಗೆ ಎಸೆದು ಪರಾರಿಯಾಗಿದ್ದಾನೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: ಸ್ಕೂಟಿಗೆ ಡಿಕ್ಕಿ ಹೊಡೆದು ಯುವತಿಯ ಎಳೆದೊಯ್ದ ಕಾರು.. 4 ಕಿಮೀ ದೂರದಲ್ಲಿ ನಗ್ನ ಸ್ಥಿತಿಯಲ್ಲಿ ಸಂತ್ರಸ್ತೆ ಶವ ಪತ್ತೆ

ಈ ಬಗ್ಗೆ ಮಾಹಿತಿ ಸಿಕ್ಕ ತಕ್ಷಣವೇ ದೀಪಾಂಶು ವರ್ಮಾ, ಮುಕುಲ್ ವರ್ಮಾ ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ದೀಪಾಂಶು ಅಷ್ಟರಲ್ಲೇ ಮೃತಪಟ್ಟಿರುವುದಾಗಿ ವೈದ್ಯರು ಖಚಿತ ಪಡಿಸಿದ್ದಾರೆ. ಮತ್ತೊಬ್ಬ ಗಾಯಾಳು ಮುಕುಲ್​ಗೆ ಚಿಕಿತ್ಸೆ ಮುಂದುವರೆದಿದೆ. ಈ ಘಟನೆ ಕುರಿತಂತೆ ಹಿಟ್​ ಅಂಡ್​ ರನ್ ಕೇಸ್​ ದಾಖಲಿಸಿಕೊಂಡು ತನಿಖೆ ಕೈಗೊಂಡು ಆರೋಪಿಯನ್ನು ಪತ್ತೆ ಹಚ್ಚಲಾಗಿದೆ​ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ.

ಮತ್ತೊಂದೆಡೆ, ಕಾರಿನ ಮೇಲೆ ವ್ಯಕ್ತಿಯ ದೇಹ ಬಿದ್ದಿರುವುದನ್ನು ಗಮನಿಸಿದ್ದ ಸ್ಕೂಟರ್‌ ಸವಾರರೊಬ್ಬರು ಕಾರನ್ನು ಹಿಂಬಾಲಿಸಿ ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಪ್ರತ್ಯಕ್ಷದರ್ಶಿಯ ಮಾಹಿತಿ ಪ್ರಕಾರ, ಹಾರ್ನ್ ಮಾಡಿ, ಕೂಗಿ ನಿಲ್ಲಿಸಲು ಯತ್ನಿಸಿದರೂ ಆರೋಪಿ ಕಾರು ನಿಲ್ಲಿಸಿರಲಿಲ್ಲ. ಸದ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ಹಿಂದೆ 2023ರ ಹೊಸ ವರ್ಷದ ಆಚರಣೆ ದಿನವೂ ಇಂತಹದ್ದೆ ಘಟನೆ ನಡೆದಿತ್ತು. ಸ್ಕೂಟಿಯಲ್ಲಿ ಹೋಗುತ್ತಿದ್ದ 20 ವರ್ಷದ ಅಂಜಲಿ ಸಿಂಗ್​ ಎಂಬ ಯುವತಿಯನ್ನು ಕಾರೊಂದು ಸುಮಾರು ನಾಲ್ಕು ಕಿಲೋಮೀಟರ್​ವರೆಗೆ ಎಳೆದುಕೊಂಡು ಹೋಗಿತ್ತು. ಈ ಘಟನೆ ನಂತರ ಸಂತ್ರಸ್ತೆಯ ಶವ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಘಟನೆ ದೇಶದಲ್ಲಿ ಸಾಕಷ್ಟು ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿತ್ತು.

ಇದನ್ನೂ ಓದಿ: ಕಾರಿನ ಬಾನೆಟ್‌ ಮೇಲೆ ವ್ಯಕ್ತಿಯನ್ನು 3 ಕಿ.ಮೀ​ ಎಳೆದೊಯ್ದ ಚಾಲಕ!​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.