ನವದೆಹಲಿ: ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ)ನಿಂದ ಟೇಕ್ ಆಫ್ ಅನುಮತಿ ಪಡೆಯದೆ ಸ್ಪೈಸ್‌ಜೆಟ್ ಸಂಸ್ಥೆಯ ವಿಮಾನವೊಂದು ಗುಜರಾತ್‌ನ ರಾಜ್‌ಕೋಟ್‌ನಿಂದ ದೆಹಲಿಗೆ ತೆರಳಿರುವ ಘಟನೆ ಡಿಸೆಂಬರ್ 30 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಪೈಲೆಟ್‌ಗಳು ವಿಮಾನ ಹಾರಾಟಕ್ಕೂ ಮುನ್ನ ಎಟಿಸಿಯಿಂದ ಟೇಕ್ ಆಫ್ ಅನುಮತಿ ಪಡೆಯುವುದು ಕಡ್ಡಾಯ. ಆದರೆ, ಸ್ಪೈಸ್‌ಜೆಟ್ ಈ ನಿಯಮವನ್ನು ಗಾಳಿಗೆ ತೂರಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ನಾಗರಿಕ ವಿಮಾನಯಾನ ಪ್ರಧಾನ ನಿರ್ದೇಶಕರು ಸ್ಪೈಸ್‌ಜೆಟ್ ಪೈಲೆಟ್‌ಗಳ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ.
ಪೈಲೆಟ್‌ಗಳು ರಾಜ್‌ಕೋಟ್‌ನ ಎಟಿಸಿಯಿಂದ ಕಡ್ಡಾಯ ಟೇಕ್-ಆಫ್ ಅನುಮತಿ ಪಡೆದಿರಲಿಲ್ಲ. ಈ ಸಂಬಂಧ ವಿವರವಾದ ಮಾಹಿತಿಯನ್ನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಪ್ರಧಾನ ಕಚೇರಿ ಹಾಗೂ ಡಿಜಿಸಿಎಗೆ ಕಳುಹಿಸಲಾಗಿದೆ ಎಂದು ರಾಜ್‌ಕೋಟ್ ವಿಮಾನ ನಿಲ್ದಾಣದ ನಿರ್ದೇಶಕರು ತಿಳಿಸಿದ್ದಾರೆ.
ಪೈಲೆಟ್ ಕ್ಷಮೆಯಾಚನೆ
ವಿಮಾನದ ವೇಳಾಪಟ್ಟಿ ಪ್ರಕಾರ, SG-3703 ಸ್ಪೈಸ್‌ಜೆಟ್ ತನ್ನ ಹಿಂದಿನ ಪ್ರಯಾಣದಲ್ಲಿ ದೆಹಲಿಯಲ್ಲಿ ಅನುಮತಿ ಪಡೆದು ಟೇಕ್ ಆಫ್ ಆಗಿದೆ. ಆದರೆ ರಾಜ್‌ಕೋಟ್‌ನಿಂದ ಟೇಕ್-ಆಫ್‌ಗೆ ಅನುಮತಿ ಪಡೆದಿರಲಿಲ್ಲ ಎಂಬುದನ್ನು ಎಟಿಸಿ ಅಧಿಕಾರಿಗಳು ಗಮನಿಸಿದ್ದಾರೆ. ಈ ವೇಳೆ ರಾಜ್‌ಕೋಟ್ ಎಟಿಸಿ, ನೀವು ಟೇಕ್ ಆಫ್ ಅನುಮತಿಯಿಲ್ಲದೆ ಹೇಗೆ ವಿಮಾನ ಹಾರಿಸಿದ್ದೀರಿ? ಎಂದು ಪೈಲೆಟ್‌ಗಳನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಪ್ರತಿಕ್ರಿಯಿಸಿರುವ ಪೈಲಟ್, ತಪ್ಪಾಗಿದೆ ಎಂದು ಹೇಳಿ ಕ್ಷಮೆಯಾಚಿಸಿದ್ದಾರೆ ಎಂದು ಹೇಳಿದ್ದಾರೆ. ವಿಮಾನ ಟೇಕ್ ಆಫ್ ಆಗುವಾಗ ಈ ಸಂಭಾಷಣೆ ನಡೆದಿದೆ ಎಂದು ಭಾರತೀಯ ಏರ್‌ಪೋರ್ಟ್ ಅಥಾರಿಟಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್ (SOP) ಪ್ರಕಾರ, ರನ್‌ವೇ ಸುರಕ್ಷಿತವಾಗಿದೆಯೇ, ಇಲ್ಲವೇ ಅಥವಾ ತುರ್ತು ಪರಿಸ್ಥಿತಿಗಾಗಿ ಯಾವುದೇ ಇತರ ವಿಮಾನಗಳು ಆಗಮಿಸದಿರುವ ಬಗ್ಗೆ ತಿಳಿದುಕೊಳ್ಳಲು ವಿಮಾನ ಟೇಕ್ ಆಫ್ ಆಗುವ ಮೊದಲು ಎಟಿಸಿಯಿಂದ ಟೇಕ್ ಆಫ್ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಸದ್ಯ ಈ ಘಟನೆಯ ತನಿಖೆ ಪೂರ್ಣಗೊಳ್ಳುವವರೆಗೆ ಸ್ಪೈಸ್‌ಜೆಟ್ ವಿಮಾನಯಾನ ಕಂಪನಿ, ಪೈಲಟ್‌ಗಳನ್ನು ಆಫ್ ಡ್ಯೂಟಿನಲ್ಲಿ ಇರಿಸಿದೆ.
ಇದನ್ನೂ ಓದಿ: ಭಾರತೀಯ ವಿಮಾನಗಳಲ್ಲಿ ಇನ್ಮುಂದೆ ಭಾರತೀಯ ಸಂಗೀತ: ವಿಮಾನಯಾನ ಸಚಿವಾಲಯ ಸಲಹೆ