ನವದೆಹಲಿ: ನವೆಂಬರ್ 29ರಿಂದ ಚಳಿಗಾಲದ ಸಂಸತ್ ಅಧಿವೇಶನ ಆರಂಭಗೊಂಡಿದ್ದು, ಅನೇಕ ವಿಚಾರಗಳಿಗೆ ಸಂಬಂಧಿಸಿದಂತೆ ವಾದ - ವಾಗ್ವಾದ ನಡೆಯುತ್ತಿವೆ. ಇದೇ ವೇಳೆ, ದೆಹಲಿಯ ಬಿಜೆಪಿ ಸಂಸದ ಪರ್ವೇಶ್ ಸಾಹಿಬ್ ವರ್ಮಾ ಮದ್ಯದ ಬಾಟಲಿ ಎತ್ತಿ ತೋರಿಸಿದ್ದಾರೆ.
ಏನಿದು ಘಟನೆ!?
ಚಳಿಗಾಲದ ಅಧಿವೇಶನದಲ್ಲಿ ಮದ್ಯದ ಬಾಟಲಿ ಎತ್ತಿ ತೋರಿಸಿರುವ ಸಂಸದ ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ, ದೆಹಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕೇಜ್ರಿವಾಲ್ ಸರ್ಕಾರ ಮದ್ಯ ಸೇವನೆಗೆ ಪ್ರೋತ್ಸಾಹ ನೀಡುತ್ತಿದೆ ಎಂಬ ಆರೋಪ ಮಾಡಿರುವ ಅವರು, ಕೋವಿಡ್ ಕಾಲದಲ್ಲಿ ದೆಹಲಿಯಲ್ಲಿ 25 ಸಾವಿರಕ್ಕೂ ಅಧಿಕ ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಈ ವೇಳೆ, ದೆಹಲಿ ಸರ್ಕಾರ ಮದ್ಯದ ಬಳಕೆ ಹೆಚ್ಚಿಗೆ ಮಾಡುವ ಉದ್ದೇಶಕ್ಕಾಗಿ ಹೊಸ ಅಬಕಾರಿ ನೀತಿ ಜಾರಿಗೆ ತರಲು ನಿರತವಾಗಿತ್ತು ಎಂದರು.
-
.@ArvindKejriwal की शराब नीति से @BhagwantMann तो खुश होंगे मगर दिल्ली की जनता इस फैसले के ख़िलाफ खड़ी है।
— Parvesh Sahib Singh (@p_sahibsingh) December 6, 2021 " class="align-text-top noRightClick twitterSection" data="
दिल्ली के सभी युवाओं को नशे की लत लगाने वाली आम आदमी पार्टी सरकार की शराब नीति के खिलाफ आज लोकसभा में मुद्दा उठाया।https://t.co/afMyYU980y pic.twitter.com/jyybx7JCIo
">.@ArvindKejriwal की शराब नीति से @BhagwantMann तो खुश होंगे मगर दिल्ली की जनता इस फैसले के ख़िलाफ खड़ी है।
— Parvesh Sahib Singh (@p_sahibsingh) December 6, 2021
दिल्ली के सभी युवाओं को नशे की लत लगाने वाली आम आदमी पार्टी सरकार की शराब नीति के खिलाफ आज लोकसभा में मुद्दा उठाया।https://t.co/afMyYU980y pic.twitter.com/jyybx7JCIo.@ArvindKejriwal की शराब नीति से @BhagwantMann तो खुश होंगे मगर दिल्ली की जनता इस फैसले के ख़िलाफ खड़ी है।
— Parvesh Sahib Singh (@p_sahibsingh) December 6, 2021
दिल्ली के सभी युवाओं को नशे की लत लगाने वाली आम आदमी पार्टी सरकार की शराब नीति के खिलाफ आज लोकसभा में मुद्दा उठाया।https://t.co/afMyYU980y pic.twitter.com/jyybx7JCIo
ಕೋವಿಡ್ ಸಾಂಕ್ರಾಮಿಕ ವೇಳೆ ರಾಜಧಾನಿ ದೆಹಲಿಯಲ್ಲಿ 824 ಹೊಸ ಮದ್ಯದ ಅಂಗಡಿ ಒಪನ್ ಮಾಡಲಾಗಿದೆ. ಪ್ರಮುಖವಾಗಿ ಜನವಸತಿ ಪ್ರದೇಶದಲ್ಲಿ ಇವು ಓಪನ್ ಆಗಿದ್ದು, ಮಧ್ಯರಾತ್ರಿ 3 ಗಂಟೆಯವರೆಗೆ ತೆರೆಯಲು ಅನುಮತಿ ನೀಡಲಾಗಿದೆ ಎಂದರು. ಮಧ್ಯರಾತ್ರಿ 3 ಗಂಟೆಯವರೆಗೆ ಮಹಿಳೆಯರು ಬಾರ್ಗಳಲ್ಲಿ ಕುಳಿತುಕೊಂಡು ಕುಡಿದರೆ ಅವರಿಗೆ ರಿಯಾಯತಿ ನೀಡಲಾಗುತ್ತಿದೆ ಎಂದಿರುವ ಅವರು, ಮದ್ಯ ಸೇವನೆ ವಯಸ್ಸಿನ ಮಿತಿ 25ರಿಂದ 21ಕ್ಕೆ ಇಳಿಕೆ ಮಾಡಲಾಗಿದೆ ಎಂದರು.
ಪ್ರಚಾರಕ್ಕಾಗಿ ಹೆಚ್ಚಿನ ಆದಾಯ ಗಳಿಕೆ ಮಾಡುವ ಉದ್ದೇಶವನ್ನ ಕೇಜ್ರಿವಾಲ್ ಹೊಂದಿದ್ದು, 2022ರ ಪಂಜಾಬ್ ವಿಧಾನಸಭೆ ಚುನಾವಣೆ ಪ್ರಚಾರಕ್ಕಾಗಿ ಈ ರೀತಿಯಾಗಿ ನಡೆದುಕೊಳ್ಳುತ್ತಿದ್ದಾರೆ ಎಂದರು.