ನವದೆಹಲಿ: ದೇಶಸೇವೆ ಮಾಡುವಾಗ ಪ್ರಾಣತ್ಯಾಗ ಮಾಡಿದ ಸೈನಿಕರು, ಪೊಲೀಸ್ ಮತ್ತು ನಾಗರಿಕ ರಕ್ಷಣಾ ಸಿಬ್ಬಂದಿಯ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರವನ್ನು ದೆಹಲಿ ಸರ್ಕಾರ ಘೋಷಿಸಿದೆ. ಹುತಾತ್ಮರ ಶೌರ್ಯವನ್ನು ಗೌರವಿಸಲು ಮತ್ತು ಅವರ ಕುಟುಂಬಗಳ ಸ್ಥೈರ್ಯವನ್ನು ಹೆಚ್ಚಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ.
ಈ ಹಿನ್ನೆಲೆ ಭಾರತೀಯ ವಾಯುಸೇನೆಯ ಮೂವರು, ಇಬ್ಬರು ದೆಹಲಿ ಪೊಲೀಸರು ಮತ್ತು ನಾಗರಿಕ ರಕ್ಷಣಾ ವಿಭಾಗದ ಆರು ಮಂದಿ ಹುತಾತ್ಮರ ಕುಟುಂಬಗಳಿಗೆ ದೆಹಲಿ ಸರ್ಕಾರದಿಂದ ನೆರವು ನೀಡಲಾಗುವುದು ಎಂದು ಸಿಸೋಡಿಯಾ ಹೇಳಿದ್ರು.
- ದೆಹಲಿ ಪೊಲೀಸ್ ಎಸಿಪಿ ಸಂಕೇತ್ ಕೌಶಿಕ್
- ವಾಯುಸೇನೆ ಅಧಿಕಾರಿ ರಾಜೇಶ್ ಕುಮಾರ್
- ಫ್ಲೈಟ್ ಲೆಫ್ಟಿನೆಂಟ್ ಸುನಿತ್ ಮೊಹಂತಿ
- ಸ್ಕ್ವಾಡ್ರನ್ ಲೀಡರ್ ಮೀತ್ ಕುಮಾರ್
- ದೆಹಲಿ ಪೊಲೀಸ್ ಕಾನ್‌ಸ್ಟೆಬಲ್ ವಿಕಾಸ್ ಕುಮಾರ್
- ನಾಗರಿಕ ರಕ್ಷಣಾ ಅಧಿಕಾರಿ ಪ್ರವೀಶ್ ಕುಮಾರ್
ಈ ಮೇಲಿನ 6 ಜನರ ಕುಟುಂಬಗಳಿಗೆ ತಲಾ ಒಂದು ಕೋಟಿ ರೂಪಾಯಿಯನ್ನು ದೆಹಲಿ ಸರ್ಕಾರ ನೀಡಲಿದೆ. ಸರ್ಕಾರ ಮತ್ತು ಸಮಾಜವು ತಮ್ಮೊಂದಿಗಿದೆ ಮತ್ತು ಏನಾದರೂ ಅನಾಹುತ ಸಂಭವಿಸಿದಲ್ಲಿ ದೇಶಸೇವೆ ಮಾಡುವವರ ಕುಟುಂಬಗಳನ್ನು ನೋಡಿಕೊಳ್ಳಲಾಗುವುದು ಎಂಬ ನಂಬಿಕೆ ಅವರಿಗೆ ಇರಬೇಕು ಎಂದು ಸಿಸೋಡಿಯಾ ಮಾಧ್ಯಮಗೋಷ್ಠಿ ವೇಳೆ ಹೇಳಿದ್ದಾರೆ.