ETV Bharat / bharat

ದೆಹಲಿಯಲ್ಲಿ ವಾಯು ಗುಣಮಟ್ಟ ಮತ್ತಷ್ಟು ಕಳಪೆ: AQI 386ಕ್ಕೆ ಇಳಿಕೆ

author img

By

Published : Nov 27, 2021, 10:39 AM IST

ಸಿಸ್ಟಂ ಆಫ್ ಏರ್ ಕ್ವಾಲಿಟಿ ಅಂಡ್ ವೆದರ್ ಫೋರ್ಕಾಸ್ಟಿಂಗ್ ಅಂಡ್ ರಿಸರ್ಚ್ (SAFAR) ಪ್ರಕಾರ ಶನಿವಾರ ಬೆಳಗ್ಗೆ ರಾಷ್ಟ್ರ ರಾಜಧಾನಿಯಲ್ಲಿ 'ವಾಯು ಗುಣಮಟ್ಟ ಸೂಚ್ಯಂಕ'(AQI) 'ಅತ್ಯಂತ ಕಳಪೆ' ವಿಭಾಗದಲ್ಲಿ 386ಕ್ಕೆ ಕುಸಿದಿದೆ ಎಂದು ವರದಿ ಮಾಡಿದೆ.

Delhi air quality further deteriorates
ಸಾಂದರ್ಭಿಕ ಚಿತ್ರ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಗುಣಮಟ್ಟ ಶನಿವಾರವೂ ಕುಸಿತಗೊಂಡಿದೆ. ಬೆಳಗ್ಗೆ 7:50 ಕ್ಕೆ 'ವಾಯು ಗುಣಮಟ್ಟ ಸೂಚ್ಯಂಕ' (AQI) 386 ದಾಖಲಾಗಿದೆ ಎಂದು ವಾಯು ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನಾ ವ್ಯವಸ್ಥೆ (SAFAR) ತಿಳಿಸಿದೆ.

ಗುರುಗ್ರಾಮ ಮತ್ತು ನೋಯ್ಡಾ "ಅತ್ಯಂತ ಕಳಪೆ" ವಿಭಾಗದಲ್ಲಿ ಕ್ರಮವಾಗಿ 355 ಮತ್ತು 391 ಎಕ್ಯೂಐ ದಾಖಲಿಸಿವೆ. ಪ್ರತಿಯೊಬ್ಬರೂ ಆರೋಗ್ಯದ ಪರಿಣಾಮ ಮತ್ತು ಉಸಿರಾಟದ ಸಮಸ್ಯೆ ಎದುರಿಸಬಹುದು ಎಂದು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನಾ ವ್ಯವಸ್ಥೆ ಎಚ್ಚರಿಕೆ ನೀಡಿದೆ.

ದೆಹಲಿಯಲ್ಲಿ PM2.5 ನಲ್ಲಿ ಸ್ಟಬಲ್ ಬರ್ನಿಂಗ್ (274) ಸಂಬಂಧಿತ ಮಾಲಿನ್ಯಕಾರಕಗಳ ಪಾಲು ಶೇ.8 ರಷ್ಟಿದೆ. ಪದರದ ಎತ್ತರ ಮತ್ತು ಗಾಳಿಯನ್ನು ಮಿಶ್ರಣ ಮಾಡುವುದು ಗಾಳಿಯ ಗುಣಮಟ್ಟವನ್ನು ನಿಯಂತ್ರಿಸುವ ಪ್ರಮುಖ ಅಂಶಗಳಾಗಿವೆ. ಹೆಚ್ಚಿನ ಗಾಳಿಯ ವೇಗದಿಂದಾಗಿ ಎಕ್ಯೂಐ ನಲ್ಲಿ 29 ನೇ ಗಮನಾರ್ಹ ಸುಧಾರಣೆ ನಿರೀಕ್ಷಿಸಲಾಗಿದೆ, "ತೀವ್ರ" ವಿಭಾಗದಲ್ಲಿ ಎಕ್ಯೂಐ 428ಗೆ ಗಾಳಿಯ ಗುಣಮಟ್ಟವನ್ನು ಇನ್ನಷ್ಟು ಹದಗೆಡಿಸುತ್ತದೆ ಎಂದು SAFAR ಹೇಳಿದೆ.

ವಾಯು ಗುಣಮಟ್ಟ ಸೂಚ್ಯಂಕದ ವಿವರ:

  • ಸೊನ್ನೆ ಮತ್ತು 50 ರ ನಡುವಿನ AQI ವನ್ನು 'ಉತ್ತಮ'
  • 51 ಮತ್ತು 100 'ತೃಪ್ತಿದಾಯಕ'
  • 101 ಮತ್ತು 200 'ಮಧ್ಯಮ'
  • 201 ಮತ್ತು 300 'ಕಳಪೆ'
  • 301 ಮತ್ತು 400 'ಅತ್ಯಂತ ಕಳಪೆ'
  • ಮತ್ತು 401 ಮತ್ತು 500 'ತೀವ್ರ' ಎಂದು ಪರಿಗಣಿಸಲಾಗುತ್ತದೆ.

ಏತನ್ಮಧ್ಯೆ, ಸುಪ್ರೀಂ ಕೋರ್ಟ್‌ನ ನಿರ್ದೇಶನದ ಮೇರೆಗೆ ದೆಹಲಿ ಸರ್ಕಾರ ಮತ್ತೊಮ್ಮೆ ನಿರ್ಮಾಣ ಮತ್ತು ನೆಲಸಮ ಚಟುವಟಿಕೆಗಳ ಮೇಲೆ ನಿಷೇಧವನ್ನು ಹೇರಲು ಮತ್ತೊಮ್ಮೆ ನಿರ್ಧರಿಸಿದೆ.

ಶಾಲೆಗಳು, ಕಾಲೇಜುಗಳು ಮತ್ತು ಇತರ ಶಿಕ್ಷಣ ಸಂಸ್ಥೆಗಳಲ್ಲಿ ದೈಹಿಕ ತರಗತಿಗಳು ಸೋಮವಾರದಿಂದ ಪುನರಾರಂಭಿಸಲು ನಿರ್ಧರಿಸಲಾಗಿದೆ. ಅಗತ್ಯ ಸೇವೆಗಳಲ್ಲಿ ತೊಡಗಿರುವವರನ್ನು ಹೊರತುಪಡಿಸಿ ಟ್ರಕ್‌ಗಳ ಪ್ರವೇಶದ ಮೇಲಿನ ನಿಷೇಧ ಡಿಸೆಂಬರ್ 3 ರವರೆಗೆ ಮುಂದುವರಿಯುತ್ತದೆ.

ಇದನ್ನೂ ಓದಿ: ಮುಂದಿನ ತಿಂಗಳ ಹೊತ್ತಿಗೆ ಟೊಮೆಟೊ ದರ ಇಳಿಕೆಯಾಗಲಿದೆ : ಯಾಕೆ ಗೊತ್ತಾ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.