ETV Bharat / bharat

ಅಪಾರ್ಟ್​​​ಮೆಂಟ್​​​ನಲ್ಲಿ ಅಗ್ನಿ ಅವಘಡ: 2 ಕಾರು 13 ದ್ವಿಚಕ್ರವಾಹನಗಳು ಭಸ್ಮ - 5 rescued

ಅಪಾರ್ಟ್‌ಮೆಂಟ್‌ವೊಂದರಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, 13 ದ್ವಿಚಕ್ರ ವಾಹನಗಳು, 2 ಕಾರುಗಳು ಸುಟ್ಟು ಕರಕಲಾಗಿವೆ. 5 ಮಂದಿಯನ್ನು ರಕ್ಷಿಸಲಾಗಿದೆ.

ಅಪಾರ್ಟ್​​​ಮೆಂಟ್​​​ನಲ್ಲಿ ಅಗ್ನಿ ಅವಘಡ: 2 ಕಾರು 13 ದ್ವಿಚಕ್ರವಾಹನಗಳು ಭಸ್ಮ
Delhi: 13 two-wheelers, 2 cars burnt in massive apartment fire; 5 rescued
author img

By ETV Bharat Karnataka Team

Published : Dec 8, 2023, 6:41 AM IST

ನವದೆಹಲಿ: ಇಲ್ಲಿನ ಅಪಾರ್ಟ್‌ಮೆಂಟ್‌ವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಎರಡು ಕಾರುಗಳು ಮತ್ತು 13 ದ್ವಿಚಕ್ರ ವಾಹನಗಳು ಸುಟ್ಟು ಕರಕಲಾಗಿವೆ, ಈ ಅಗ್ನಿ ಅವಘಡದಿಂದ ಐವರನ್ನು ರಕ್ಷಿಸಲಾಗಿದೆ ಎಂದು ಅಗ್ನಿಶಾಮಕ ಇಲಾಖೆ ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.

ದೆಹಲಿಯ ರಾಜ್ ನಗರ ಭಾಗ-II ಪ್ರದೇಶದ ವೈಷ್ಣವಿ ಅಪಾರ್ಟ್‌ಮೆಂಟ್‌ನಲ್ಲಿ ಅಗ್ನಿ ಅವಘಡ ನಡೆದಿದೆ ಎಂದು ತಿಳಿದು ಬಂದಿದೆ. ಉಸಿರಾಟದ ತೊಂದರೆಯಿಂದ ನಾಲ್ವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಘಟನೆ ಬಗ್ಗೆ ಮಾತನಾಡಿರುವ ದೆಹಲಿಯ ಅಗ್ನಿಶಾಮಕ ಸೇವೆ (ಡಿಎಫ್‌ಎಸ್) ಮುಖ್ಯಸ್ಥ ಅತುಲ್ ಗರ್ಗ್, ಮೈದಾನ ಮತ್ತು ನಾಲ್ಕು ಅಂತಸ್ತಿನ ವಸತಿ ಕಟ್ಟಡದಲ್ಲಿ ಸ್ಫೋಟ ಸಂಭವಿಸಿದ್ದರಿಂದ ಈ ದುರಂತ ಸಂಭವಿಸಿದೆ. ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಒಟ್ಟು 15 ಅಗ್ನಿಶಾಮಕ ವಾಹನಗಳನ್ನು ರವಾನೆ ಮಾಡಲಾಗಿತ್ತು. ತಕ್ಷಣಕ್ಕೆ ಎಲ್ಲವನ್ನು ತಹಬದಿಗೆ ತರಲಾಗಿದೆ. ಗುರುವಾರ ಬೆಳಗಿನ ಜಾವ 2.47 ಗಂಟೆ ಸುಮಾರಿಗೆ ಈ ಬೆಂಕಿ ಕಾಣಿಸಿಕೊಂಡಿತ್ತು.

"ಬೆಂಕಿಯು ನೆಲ ಮಹಡಿಯಲ್ಲಿ ಈ ಬೆಂಕಿ ಕಾಣಿಸಿಕೊಂಡಿದ್ದರಿಂದ ಅಲ್ಲಿ ನಿಲ್ಲಿಸಲಾಗಿದ್ದ ಕಾರುಗಳು ಮತ್ತು ಬೈಕ್​ಗಳಿಗೆ ಬೆಂಕಿ ತಗುಲಿ ಅವೆಲ್ಲ ಸುಟ್ಟು ಕರಕಲಾಗಿವೆ. ಪಾರ್ಕಿಂಗ್​ ಜಾಗದಲ್ಲೇ ಬೆಂಕಿ ಹೊತ್ತಿಕೊಂಡಿದ್ದರಿಂದ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

ಪಾರ್ಕಿಂಗ್​ ಲಾಟ್​ನಲ್ಲಿ ಹೊತ್ತಿಕೊಂಡ ಬೆಂಕಿ ಬಳಿಕ ಕ್ರಮೇಣ ಅಲ್ಲಿಂದ, ಕಟ್ಟಡದ ಮೇಲಿನ ಮಹಡಿಗಳಿಗೆ ವೇಗವಾಗಿ ಹರಡಿಕೊಂಡಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. "ಪ್ರತಿ ಮಹಡಿಯಲ್ಲಿ 16 ಫ್ಲಾಟ್‌ಗಳನ್ನು ಒಳಗೊಂಡಿರುವ ಕಟ್ಟಡದಲ್ಲಿ ವ್ಯಾಪಕ ಹಾನಿ ಸಂಭವಿಸಿದೆ ಎಂದು ಎಂದು ಗಾರ್ಗ್ ಹೇಳಿದ್ದಾರೆ.

ರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ DFS ಸಿಬ್ಬಂದಿ ಯಶಸ್ವಿಯಾಗಿ ಐವರನ್ನು ರಕ್ಷಣೆ ಮಾಡಿ ಜೀವ ಕಾಪಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಅಪಾರ್ಟ್​ಮೆಂಟ್​ನಲ್ಲಿ ಇದ್ದ ಎಲ್ಲ ನಿವಾಸಿಗಳನ್ನು ಯಾವುದೇ ಅಪಾಯವಿಲ್ಲದೇ ಸ್ಥಳಾಂತರ ಮಾಡಲಾಗಿದೆ. (ಐಎಎನ್‌ಎಸ್)

ಇತ್ತೀಚಿನ ದಿನಗಳಲ್ಲಿ ಅಗ್ನಿಅವಘಡಗಳು ಹೆಚ್ಚುತ್ತಿವೆ. ಬೆಂಗಳೂರಿನ ಹೊರ ವಲಯದ ಪಟಾಕಿ ಗೋಡಾಮಿನಲ್ಲಿ ಬೆಂಕಿ ಹೊತ್ತಿಕೊಂಡು 10 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಇನ್ನೊಂದು ಕಡೆ ಕೋರಮಂಗಲದ ಹೋಟೆಲ್​ ವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಅಲ್ಲಿನ ಕಾರ್ಮಿಕನೊಬ್ಬ ಕಟ್ಟಡದಿಂದಲೇ ಜಿಗಿದು ಪ್ರಾಣ ಉಳಿಸಿಕೊಂಡಿದ್ದ, ಆದರೆ ಆ ಘಟನೆಯಲ್ಲಿ ಯುವಕ ಬದುಕುಳಿದರೂ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ.

ಇದನ್ನು ಓದಿ:ಪತ್ನಿ ಮೇಲೆ ಪತಿ ಅತ್ಯಾಚಾರ ಎಸಗಿದ ಆರೋಪ: ಐದು ತಿಂಗಳ ನಂತರ ಪ್ರಕರಣ ದಾಖಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.