ETV Bharat / bharat

ಪ್ರೀತಿಸಲು ನಿರಾಕರಿಸಿದ ಕಾಲೇಜು ವಿದ್ಯಾರ್ಥಿನಿಗೆ ಚಾಕುವಿನಿಂದ ಹಲ್ಲೆ ನಡೆಸಿದ ಕಿರಾತಕ - ಈಟಿವಿ ಭಾರತ ಕನ್ನಡ

ಕಳೆದ ಏಳು ತಿಂಗಳಿಂದ ಪ್ರೀತಿಯ ಹೆಸರಿನಲ್ಲಿ ಯುವತಿಗೆ ಕಿರುಕುಳ ನೀಡುತ್ತಿದ್ದ ಯುವಕನೋರ್ವ ಆಕೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.

Attack with Knife on student
Attack with Knife on student
author img

By

Published : Aug 9, 2022, 10:06 PM IST

ನಲ್ಗೊಂಡ(ತೆಲಂಗಾಣ): ಪ್ರೀತಿಯ ಹೆಸರಿನಲ್ಲಿ ಪದವಿ ಕಾಲೇಜು ವಿದ್ಯಾರ್ಥಿನಿಗೆ ಕಿರುಕುಳ ನೀಡುತ್ತಿದ್ದ ಯುವಕನೋರ್ವ ಆಕೆಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ತೆಲಂಗಾಣದ ನಲ್ಗೊಂಡನಲ್ಲಿ ಘಟನೆ ನಡೆದಿದೆ. ಗಾಯಾಳು ಯುವತಿಯನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮಂಗಳವಾರ ಮಧ್ಯಾಹ್ನ ನಗರದ ಫಾರೆಸ್ಟ್ ಪಾರ್ಕ್​​ನಲ್ಲಿ ವಿದ್ಯಾರ್ಥಿನಿ ಮೇಲೆ ರೋಹಿತ್ ಎಂಬ ಕ್ರೂರಿ ಹಲ್ಲೆ ನಡೆಸಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. ರೋಹಿತ್ ನಲ್ಗೊಂಡ ಪದವಿ ಕಾಲೇಜಿನಲ್ಲಿ ಬಿಬಿಎ 2ನೇ ವರ್ಷದ ವ್ಯಾಸಂಗ ಮಾಡ್ತಿದ್ದಾನೆ. ಕಳೆದ ಏಳು ತಿಂಗಳಿಂದ ಅದೇ ಕಾಲೇಜ್​​ನಲ್ಲಿ ವ್ಯಾಸಂಗ ಮಾಡ್ತಿದ್ದ ವಿದ್ಯಾರ್ಥಿನಿಗೆ ಪ್ರೀತಿಯ ಹೆಸರಿನಲ್ಲಿ ಕಿರುಕುಳ ನೀಡುತ್ತಿದ್ದ.

ತನ್ನ ಸ್ನೇಹಿತೆಯರೊಂದಿಗೆ ಇಂದು ಮಧ್ಯಾಹ್ನ ಫಾರೆಸ್ಟ್ ಪಾರ್ಕ್​​ಗೆ ಬಂದಾಗ ರೋಹಿತ್ ಸಹ ಅಲ್ಲಿಗೆ ಬಂದಿದ್ದಾನೆ. ಈ ವೇಳೆ ಮಾತನಾಡಿಸುವ ನೆಪದಲ್ಲಿ ಆಕೆಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಹೊಟ್ಟೆ, ಕೈ, ಕಾಲು, ಮುಖದ ಮೇಲೆ ದಾಳಿ ನಡೆಸಿ, ಸ್ಥಳದಿಂದ ಪರಾರಿಯಾಗಿದ್ದಾನೆ. ಸಂತ್ರಸ್ತೆಯ ಸ್ನೇಹಿತರು ತಕ್ಷಣವೇ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ನೀಡಲಾಗ್ತಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ಲಾರಿಗೆ ಡಿಕ್ಕಿ ಹೊಡೆದ ಬೈಕ್: ಮೂವರು ಸಹೋದರರ ದುರ್ಮರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.