ನವದೆಹಲಿ: ಮುಂದಿನ ಕೆಲವೇ ತಿಂಗಳಲ್ಲಿ ಬರೋಬ್ಬರಿ 118 ದೈತ್ಯ ಯುದ್ಧ ಟ್ಯಾಂಕರ್ 'ಅರ್ಜುನ್' ಭಾರತೀಯ ಭೂಸೇನೆಗೆ ಸೇರ್ಪಡೆಯಾಗಲಿದ್ದು, ಇದರಿಂದ ಸೇನೆಗೆ ಮತ್ತಷ್ಟು ಆನೆ ಬಲ ಬರಲಿದೆ. ಕೇಂದ್ರ ರಕ್ಷಣಾ ಇಲಾಖೆ ಇವುಗಳ ಅಭಿವೃದ್ಧಿಗೆ ಇಂದು ಆದೇಶ ನೀಡಿದೆ.
ಚೆನ್ನೈನ ಅವದಿಯಲ್ಲಿರುವ ಯುದ್ಧ ಟ್ಯಾಂಕರ್ ತಯಾರಿಕಾ ಘಟಕ(HVF)ದಲ್ಲಿ ಬರೋಬ್ಬರಿ 7,523 ಕೋಟಿ ರೂ. ವೆಚ್ಚದಲ್ಲಿ ಇವುಗಳ ಅಭಿವೃದ್ಧಿಯಾಗಲಿದ್ದು, ರಕ್ಷಣಾ ಇಲಾಖೆ ಯುದ್ಧ ಟ್ಯಾಂಕರ್ಗಳ ಪೂರೈಕೆಗಾಗಿ ಇಂದು ಆರ್ಡರ್ ನೀಡಿದೆ. MBT MK-1A ಎಂಬುದು ಅರ್ಜುನ್ ಯುದ್ಧ ಟ್ಯಾಂಕರ್ನ ಹೊಸ ರೂಪವಾಗಿದ್ದು, ಅತಿ ಹೆಚ್ಚು ಶಕ್ತಿಶಾಲಿ ಸೇರಿದಂತೆ ಅನೇಕ ಹೊಸ ಫೀಚರ್ ಹೊಂದಿದೆ.
-
MoD places supply order for 118 Main Battle Tanks Arjun Mk-1A for Indian Army https://t.co/0PG52sYvnI pic.twitter.com/FOPqckQtvW
— DRDO (@DRDO_India) September 23, 2021 " class="align-text-top noRightClick twitterSection" data="
">MoD places supply order for 118 Main Battle Tanks Arjun Mk-1A for Indian Army https://t.co/0PG52sYvnI pic.twitter.com/FOPqckQtvW
— DRDO (@DRDO_India) September 23, 2021MoD places supply order for 118 Main Battle Tanks Arjun Mk-1A for Indian Army https://t.co/0PG52sYvnI pic.twitter.com/FOPqckQtvW
— DRDO (@DRDO_India) September 23, 2021
ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿರುವ ಡಿಆರ್ಡಿಒ, ಕೇಂದ್ರ ರಕ್ಷಣಾ ಇಲಾಖೆ 118 ಯುದ್ಧ ಟ್ಯಾಂಕರ್ಗಳ ಅಭಿವೃದ್ಧಿಗೆ ಇಂದು ಆದೇಶ ನೀಡಿದೆ ಎಂದು ಹೇಳಿಕೊಂಡಿದೆ.
ಇದನ್ನೂ ಓದಿರಿ: ವಿಶೇಷಚೇತನರ ಮನೆ ಬಾಗಿಲಿಗೆ ಕೋವಿಡ್ ವ್ಯಾಕ್ಸಿನ್: ಕೇಂದ್ರ ಸರ್ಕಾರ
'ಮೇಕ್ ಇನ್ ಇಂಡಿಯಾ' ಯೋಜನೆಗೆ ಮತ್ತಷ್ಟು ಉತ್ತೇಜನ ನೀಡುವ ಉದ್ದೇಶದಿಂದ 7,523 ಕೋಟಿ ರೂಪಾಯಿ ಮೌಲ್ಯದ ಯುದ್ಧ ವಿಮಾನಗಳ ಅಭಿವೃದ್ಧಿಗೆ ಆದೇಶ ನೀಡಲಾಗಿದೆ. ಕಳೆದ ಫೆಬ್ರವರಿ ತಿಂಗಳಲ್ಲಿ ಮೋದಿ ನೇತೃತ್ವದಲ್ಲಿ ನಡೆದಿದ್ದ ಸಚಿವ ಸಂಪುಟದ ವೇಳೆ 118 ಹೊಸ ಯುದ್ಧ ಟ್ಯಾಂಕರ್ಗಳ ಸೇರ್ಪಡೆಗೆ ಅನುಮೋದನೆ ನೀಡಲಾಗಿತ್ತು. ಈ ಯುದ್ಧ ಟ್ಯಾಂಕರ್ಗಳು ಸಂಪೂರ್ಣವಾಗಿ ಸ್ವದೇಶಿಯಾಗಿದ್ದು, ಮೇಕ್ ಇನ್ ಇಂಡಿಯಾಗೆ ಮತ್ತಷ್ಟು ಬಲ ನೀಡಲಿವೆ.